ETV Bharat / bharat

ಎಸ್ಐ ಮನೆ ಮೇಲೆ ಎಸಿಬಿ ದಾಳಿ:1 ಕೋಟಿ 8 ಲಕ್ಷ ನಗದು, ಕೆಜಿ ಚಿನ್ನ, ನಿವೇಶನ ದಾಖಲೆ ಜಪ್ತಿ - Anti Corruption Bureau raided

author img

By ETV Bharat Karnataka Team

Published : May 17, 2024, 9:00 PM IST

ಮಹಾರಾಷ್ಟ್ರದ ಬೀಡ್ ಜಿಲ್ಲಾ ಪೊಲೀಸ್ ಆರ್ಥಿಕ ಅಪರಾಧ ವಿಭಾಗದ (ಇಒಬಿ) ಪೊಲೀಸ್ ಇನ್ಸ್​ಪೆಕ್ಟರ್ ಹರಿಭಾವು ಖಾಡೆ ಅವರ ಮನೆ ಮೇಲೆ (ಎಸಿಬಿ) ಭ್ರಷ್ಟಾಚಾರ ನಿಗ್ರಹ ದಳವು ಶುಕ್ರವಾರ ದಾಳಿ ಮಾಡಿ 1 ಕೋಟಿ 8 ಲಕ್ಷ ರೂ ನಗದು ಅಪಾರ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದೆ.

ಮಹಾರಾಷ್ಟ್ರದ ಬೀಡ ಎಸ್ಐ ಮನೆ ಮೇಲೆ ಎಸಿಬಿ ದಾಳಿ
ಮಹಾರಾಷ್ಟ್ರದ ಬೀಡ ಎಸ್ಐ ಮನೆ ಮೇಲೆ ಎಸಿಬಿ ದಾಳಿ (ETV Bharat)

ಬೀಡ್​(ಮಹಾರಾಷ್ಟ್ರ): ಜಿಜಾವು ಮಲ್ಟಿಸ್ಟೇಟ್ ಹಗರಣದಲ್ಲಿ ಉದ್ಯಮಿಯೊಬ್ಬರ ಮೇಲೆ ಇರುವ ಆರೋಪದ ತಡೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೀಡ್ ಜಿಲ್ಲಾ ಪೊಲೀಸ್ ಆರ್ಥಿಕ ಅಪರಾಧ ವಿಭಾಗದ (ಇಒಬಿ) ಪೊಲೀಸ್ ಇನ್ಸ್​ಪೆಕ್ಟರ್ ಹರಿಭಾವು ಖಾಡೆ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳವು ಶುಕ್ರವಾರ (ಎಸಿಬಿ) ದಾಳಿ ನಡೆಸಿದೆ. ದಾಳಿ ವೇಳೆ, ಇಒಡಬ್ಲ್ಯು ಪೊಲೀಸ್ ಇನ್ಸ್​ಪೆಕ್ಟರ್ ಖಾಡೆ ಮನೆಯಲ್ಲಿದ್ದ ಕೋಟ್ಯಂತರ ನಗದು, ಚಿನ್ನ ಬೆಳ್ಳಿ ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.

1 ಕೋಟಿ 8 ಲಕ್ಷ ರೂ ನಗದು, 970 ಗ್ರಾಂ ಚಿನ್ನಾಭರಣ, 5,5 ಕೆ ಜಿ ಬೆಳ್ಳಿ, ಖಾಡೆಗೆ ಸೇರಿದ್ದ ನಾಲ್ಕು ಪ್ಲಾಟ್​ಗಳು, ವಾಣಿಜ್ಯ ಮಳಿಗೆಗೆ ಸಂಬಂಧಿಸಿದ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ.

ಜಿಜಾವು ಮಲ್ಟಿಸ್ಟೇಟ್‌ನಲ್ಲಿ ಹಗರಣ: ಕೆಲವು ದಿನಗಳ ಹಿಂದೆ ಬೀಡ್​ ಜಿಜಾವು ಮಲ್ಟಿಸ್ಟೇಟ್‌ನಲ್ಲಿ ಹಗರಣ ನಡೆದಿತ್ತು. ಪ್ರಕರಣ ದಾಖಲಾದ ನಂತರ ತನಿಖೆಯನ್ನು ಮಹಾರಾಷ್ಟ್ರದ ಬೀಡ್​ ಜಿಲ್ಲೆಯ ಆರ್ಥಿಕ ಅಪರಾಧಗಳ ವಿಭಾಗಕ್ಕೆ ಹಸ್ತಾಂತರ ಮಾಡಲಾಗಿತ್ತು. ಈ ವೇಳೆ ಜಿಜಾವು ಮಲ್ಟಿಸ್ಟೇಟ್ ಹಗರಣದಲ್ಲಿ ಉದ್ಯಮಿಯೊಬ್ಬರ ಮೇಲೆ ಇರುವ ಆರೋಪ ತಡೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಹರಿಭಾವು ಖಾಡೆ ಮತ್ತು ಕಾನ್ಸ್​​ಟೇಬಲ್​ ಜಾಧವ್ 1 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಇತ್ತು.

ಆರಂಭಿಕವಾಗಿ 5 ಲಕ್ಷ ರೂ ಲಂಚವನ್ನು ಸಂಗ್ರಹಿಸಿದ್ದ ಆರೋಪಿಗಳಲ್ಲಿ ಒಬ್ಬನಾದ ಕುಶಾಕ್ ಜೈನ ಅವರನ್ನು ಎಸಿಬಿ ಮೊದಲು ಬಲೆಗೆ ಬೀಳಿಸಿದೆ. ಈ ಮಾಹಿತಿ ಬಹಿರಂಗ ಆಗುತ್ತಿದ್ದಂತೆ ಪೊಲೀಸ್ ಇನ್​ಸ್ಪೆಕ್ಟರ್ ಹರಿಭಾವು ಖಾಡೆ ಮತ್ತು ಜಾಧವ್ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಇದೀಗ ಡಿಸಿಪಿ ಶಂಕರ್ ಶಿಂಧೆ ನೇತೃತ್ವದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ.

ಇದನ್ನೂಓದಿ:ಪಶ್ಚಿಮ ಬಂಗಾಳ: ಟಿಎಂಸಿ ನಾಯಕನ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ - TMC LEADER SHOT AT in Bengal

ETV Bharat Logo

Copyright © 2024 Ushodaya Enterprises Pvt. Ltd., All Rights Reserved.