ETV Bharat / technology

ಮೆದುಳಿನಲ್ಲಿ ಚಿಪ್ ಅಳವಡಿಸಿಕೊಳ್ಳಲು ಬಯಸುವಿರಾ? ಈಗಲೇ ನ್ಯೂರಾಲಿಂಕ್​ಗೆ ಅರ್ಜಿ ಹಾಕಿ! - Neuralink Chip Implant

author img

By ETV Bharat Karnataka Team

Published : May 17, 2024, 1:51 PM IST

ಮೆದುಳಿನಲ್ಲಿ ಚಿಪ್ ಅಳವಡಿಸಿಕೊಳ್ಳಲು ಬಯಸುವ 2ನೇ ವ್ಯಕ್ತಿಗಾಗಿ ನ್ಯೂರಾಲಿಂಕ್ ಅರ್ಜಿಗಳನ್ನು ಆಹ್ವಾನಿಸಿದೆ.

ಮೆದುಳಿನಲ್ಲಿ ಚಿಪ್ ಅಳವಡಿಸಿಕೊಳ್ಳಲು ಬಯಸುವ 2ನೇ ವ್ಯಕ್ತಿಗಾಗಿ ನ್ಯೂರಾಲಿಂಕ್ ಅರ್ಜಿಗಳನ್ನು ಆಹ್ವಾನಿಸಿದೆ
ಮೆದುಳಿನಲ್ಲಿ ಚಿಪ್ ಅಳವಡಿಸಿಕೊಳ್ಳಲು ಬಯಸುವ 2ನೇ ವ್ಯಕ್ತಿಗಾಗಿ ನ್ಯೂರಾಲಿಂಕ್ ಅರ್ಜಿಗಳನ್ನು ಆಹ್ವಾನಿಸಿದೆ (IANS)

ನವದೆಹಲಿ: ಮೆದುಳು-ಕಂಪ್ಯೂಟರ್ ಇಂಟರ್ಫೇಸ್ ಕಂಪನಿ (Brain-Computer Interface) ನ್ಯೂರಾಲಿಂಕ್ ಚಿಪ್ ಇಂಪ್ಲಾಂಟ್​ ಮಾಡಿಸಿಕೊಳ್ಳಲು ಬಯಸುವ ಎರಡನೇ ವ್ಯಕ್ತಿಗಾಗಿ ಅರ್ಜಿಗಳನ್ನು ಸ್ವೀಕರಿಸುತ್ತಿದೆ ಎಂದು ಎಲೋನ್ ಮಸ್ಕ್ ಶುಕ್ರವಾರ ಹೇಳಿದ್ದಾರೆ. ಈಗಾಗಲೇ ಓರ್ವ ವ್ಯಕ್ತಿಯ ಮೆದುಳಿನಲ್ಲಿ ನ್ಯೂರಾಲಿಂಕ್ ಚಿಪ್ ಅಳವಡಿಸಲಾಗಿದ್ದು, ಈ ತಿಂಗಳ ಆರಂಭದಲ್ಲಿ ಆ ವ್ಯಕ್ತಿಯು ಚಿಪ್​ನೊಂದಿಗೆ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದಾನೆ.

"ಇದು ನಮ್ಮ ಟೆಲಿಪತಿ ಸೈಬರ್​ನೆಟಿಕ್ ಬ್ರೈನ್ ಇಂಪ್ಲಾಂಟ್ ಆಗಿದ್ದು, ನೀವು ಕೇವಲ ಯೋಚಿಸುವ ಮೂಲಕ ನಿಮ್ಮ ಫೋನ್ ಮತ್ತು ಕಂಪ್ಯೂಟರ್​ಗಳನ್ನು ನಿಯಂತ್ರಿಸಬಹುದು" ಎಂದು ಟೆಕ್ ಬಿಲಿಯನೇರ್ ಮಸ್ಕ್ ಹೇಳಿದರು.

ಚಿಪ್ ಅಳವಡಿಕೆಯ ನಂತರ ತನ್ನ ಜೀವನ ಎಷ್ಟೊಂದು ಉತ್ತಮವಾಗಿ ಬದಲಾಗಿದೆ ಎಂಬುದರ ಬಗ್ಗೆ ಮೊದಲ ವ್ಯಕ್ತಿ ಅರ್ಬಾಗ್ ಸ್ವತಃ ತಾನೇ ಎರಡನೇ ವ್ಯಕ್ತಿಗೆ ವಿವರಿಸಲಿದ್ದಾನೆ ಎಂದು ಮಸ್ಕ್ ಹೇಳಿದರು.

ಮಾನವ ಸಾಮರ್ಥ್ಯದ ಗಡಿಗಳನ್ನು ಮರುವ್ಯಾಖ್ಯಾನಿಸಲು ಪ್ರವರ್ತಕರ ಅಗತ್ಯವಿದೆ ಎಂದು ನ್ಯೂರಾಲಿಂಕ್ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ.

"ನೀವು ಕ್ವಾಡ್ರಿಪ್ಲೆಜಿಯಾವನ್ನು (ಒಂದು ರೀತಿಯ ಪಾರ್ಶ್ವವಾಯು) ಹೊಂದಿದ್ದರೆ ಮತ್ತು ನಿಮ್ಮ ಕಂಪ್ಯೂಟರ್ ಅನ್ನು ನಿಯಂತ್ರಿಸುವ ಹೊಸ ಮಾರ್ಗಗಳನ್ನು ಅನ್ವೇಷಿಸಲು ಬಯಸಿದರೆ, ನಮ್ಮ ಕ್ಲಿನಿಕಲ್ ಪ್ರಯೋಗದಲ್ಲಿ ಭಾಗವಹಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ" ಎಂದು ಕಂಪನಿ ಹೇಳಿದೆ.

"ಶಸ್ತ್ರಚಿಕಿತ್ಸೆಯ ನಂತರ, ಅರ್ಬಾಗ್ ಹಾಸಿಗೆಯಲ್ಲಿ ಮಲಗಿರುವಾಗ ಸೇರಿದಂತೆ ತಾನಿರುವಲ್ಲಿಂದಲೇ ಚಿಪ್ ಇಂಪ್ಲಾಂಟ್​ ಮೂಲಕ ಲ್ಯಾಪ್​ಟಾಪ್​ ಅನ್ನು ಬಳಸಲು ಸಾಧ್ಯವಾಯಿತು. ಅಲ್ಲದೆ ಚಿಪ್ ಇಂಪ್ಲಾಂಟ್​ ಮೂಲಕ ಆತ ನಿಂಟೆಂಡೊ ಸ್ವಿಚ್ ಕನ್ಸೋಲ್​ನಲ್ಲಿ ಮಾರಿಯೋ ಕಾರ್ಟ್ ಗೇಮ್ ಅನ್ನು ಕೂಡ ಆಡಿದ" ಎಂದು ನ್ಯೂರಾಲಿಂಕ್ ಹೇಳಿದೆ.

ಬ್ರೈನ್ ಚಿಪ್ ಅಳವಡಿಸುವ ಮೊದಲು, ಅರ್ಬಾಗ್ ಬಾಯಿಯ ಮೂಲಕ ಬಳಸುವ ಟ್ಯಾಬ್ಲೆಟ್ ಸ್ಟೈಲಸ್ (ಮೌತ್ ಸ್ಟಿಕ್) ಅನ್ನು ಮಾತ್ರ ಬಳಸಬಹುದಾಗಿತ್ತು. ಅದನ್ನೂ ಕೂಡ ಮತ್ತೊಬ್ಬರು ಅವರ ಬಳಿಗೆ ತರಬೇಕಿತ್ತು. ಆದರೆ ಅವರು ಈಗ ಆನ್ ಲೈನ್ ಕಂಪ್ಯೂಟರ್ ಗೇಮ್​ಗಳನ್ನು ಆಡಲು ಸಾಧ್ಯವಾಗಿದೆ. ವೆಬ್ ಬ್ರೌಸ್ ಮಾಡುತ್ತಾರೆ ಮತ್ತು ಮ್ಯಾಕ್ ಬುಕ್ ಲ್ಯಾಪ್ ಟಾಪ್ ಅನ್ನು ಬಳಸುತ್ತಾರೆ. ಆದರೆ ಇದೆಲ್ಲವನ್ನೂ ಅವರು ತಮ್ಮ ಮನಸ್ಸಿನಲ್ಲಿಯೇ ಕರ್ಸರ್ ನಿಯಂತ್ರಿಸುವ ಮೂಲಕ ಮಾಡುತ್ತಾರೆ.

ನ್ಯೂರಾಲಿಂಕ್ ಎಂಬುದು ಎಲೋನ್ ಮಸ್ಕ್ ಸ್ಥಾಪಿಸಿದ ನರತಂತ್ರಜ್ಞಾನ ಕಂಪನಿಯಾಗಿದ್ದು, ಇದು ಆಲೋಚನೆಯನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯವನ್ನು ಹೊಂದಿರುವ ಅಳವಡಿಸಬಹುದಾದ, ಮೆದುಳಿನ-ಕಂಪ್ಯೂಟರ್ ಇಂಟರ್ಫೇಸ್ ಅನ್ನು ನಿರ್ಮಿಸುತ್ತಿದೆ.

ಇದನ್ನೂ ಓದಿ : 6,000mAh ಬ್ಯಾಟರಿಯ ಐಕ್ಯೂ Z9x ಸ್ಮಾರ್ಟ್​ಫೋನ್ ಬಿಡುಗಡೆ: ಕೇವಲ 12,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯ - IQOO PHONE JUST STARTING RS 13K

ETV Bharat Logo

Copyright © 2024 Ushodaya Enterprises Pvt. Ltd., All Rights Reserved.