ETV Bharat / education-and-career

BEMLನಲ್ಲಿ ಅಸಿಸ್ಟೆಂಟ್​ ಮ್ಯಾನೇಜರ್​ ಹುದ್ದೆಗೆ ನೇಮಕಾತಿ; ಇಲ್ಲಿದೆ ಸಂಪೂರ್ಣ ಮಾಹಿತಿ - Assistant Manager Recruitment

author img

By ETV Bharat Karnataka Team

Published : May 17, 2024, 4:02 PM IST

ಸಂಸ್ಥೆಯು ಕೋಲಾರ ಗೋಲ್ಡ್​​ ಫೀಲ್ಡ್​​​, ಬೆಂಗಳೂರು ಮತ್ತು ಮೈಸೂರು, ನವದೆಹಲಿಯ ಉತ್ಪಾದನಾ ಘಟಕಗಳಲ್ಲಿ ಈ ಹುದ್ದೆ ಭರ್ತಿ ಮಾಡಲಿದೆ.

Assistant Manager Recruitment form Bharat Earth Movers Limited
Assistant Manager Recruitment form Bharat Earth Movers Limited (Etv bharat (ಸಾಂದರ್ಭಿಕ ಚಿತ್ರ))

ಬೆಂಗಳೂರು: ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್​ ಅರ್ಥ್​​ ಮೂವರ್​​ ಲಿಮಿಟೆಡ್‌ನಲ್ಲಿ​ (ಬಿಇಎಂಎಲ್​) ಖಾಲಿ ಇರುವ ಸಹಾಯಕ ಮ್ಯಾನೇಜರ್​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 26 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸಂಸ್ಥೆಯು ಕೋಲಾರ ಗೋಲ್ಡ್​​ ಫೀಲ್ಡ್​​​, ಬೆಂಗಳೂರು ಮತ್ತು ಮೈಸೂರು, ನವದೆಹಲಿಯ ಉತ್ಪಾದನಾ ಘಟಕಗಳಲ್ಲಿ ಭರ್ತಿ ಮಾಡಲಿದೆ.

ಬಿಇಎಂಎಲ್​ ಅಧಿಸೂಚನೆ
ಬಿಇಎಂಎಲ್​ ಅಧಿಸೂಚನೆ (ಬಿಇಎಂಎಲ್​ ವೆಬ್​ಸೈಟ್​)

ಹುದ್ದೆ ವಿವರ:

  • ಚೀಫ್​ ಜನರಲ್​ ಮ್ಯಾನೇಜರ್​ - 1
  • ಡೆಪ್ಯೂಟಿ ಜನರಲ್​ ಮ್ಯಾನೇಜರ್​ - 4
  • ಡೆಪ್ಯೂಟಿ ಜನರಲ್​​ ಮ್ಯಾನೇಜರ್​ - 1
  • ಸೀನಿಯರ್​ ಮ್ಯಾನೇಜರ್​ - 1
  • ಅಸಿಸ್ಟಂಟ್​ ಮ್ಯಾನೇಜರ್​​ (ಗ್ರೇಡ್​ 3) - 2
  • ಇಂಜಿನಿಯರಿಂಗ್​ (ಗ್ರೇಡ್​​- 2) 3
  • ಅಸಿಸ್ಟಂಟ್​ ಮ್ಯಾನೇಜರ್​​​ (ಗ್ರೇಡ್​​ 3) 8
  • ಜೂನಿಯರ್​ ಎಕ್ಸಿಕ್ಯೂಟಿವ್​​- ಎಚ್​ ಆರ್​ - 6

ವಿದ್ಯಾರ್ಹತೆ: ಅಭ್ಯರ್ಥಿಗಳು ಮೆಕಾನಿಕಲ್​, ಎಲೆಕ್ಟ್ರಿಕಲ್​, ಆಟೋಮೊಬೈಲ್​ನಲ್ಲಿ ಬಿಇ, ಬಿಟೆಕ್​ ಪದವಿ ಹಾಗೂ ಎಂಬಿಎ ಪದವಿಯನ್ನು ಪಡೆದಿರಬೇಕು

ವಯೋಮಿತಿ: ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ವಯೋಮಿತಿ ಹೊಂದಿದ್ದು, ಗರಿಷ್ಠ ವಯೋಮಿತಿ 45

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ವೆಬ್​ಸೈಟ್​ನಲ್ಲಿ ಲಭ್ಯವಾಗುವ ನಿಗದಿತ ಅರ್ಜಿ ಭರ್ತಿ ಮಾಡಿ, ಅದನ್ನು ಅಗತ್ಯ ಮಾಹಿತಿ, ದಾಖಲೆಯೊಂದಿಗೆ ಆನ್​ಲೈನ್​ ಮತ್ತು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಪ, ಜಾ, ಪ. ಪಂ, ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ 500 ರೂ ಶುಲ್ಕ ನಿಗದಿಸಲಾಗಿದೆ.

ಅರ್ಜಿ ಸಲ್ಲಿಕೆ ವಿಳಾಸ: ಹಿರಿಯ ಮ್ಯಾನೇಜರ್​ (ಎಚ್​ಆರ್​), ನೇಮಕಾತಿ ಘಟಕ, ಬಿಇಎಂಎಲ್​ ಸೌಧ, ನಂ 23/1, 4ನೇ ಮುಖ್ಯರಸ್ತೆ, ಎಸ್​ಆರ್​ ನಗರ್​​, ಬೆಂಗಳೂರು- 560027.

ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುವುದು. ಈ ಹುದ್ದೆಗೆ ಮೇ 15ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಕೆಗೆ ಅಂತಿಮ ದಿನ ಜೂನ್​ 5 ಆಗಿದೆ.

ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಸೂಚನೆಗೆ ಅಭ್ಯರ್ಥಿಗಳು bemlindia.in ಭೇಟಿ ನೀಡಿದರು.

ಐಐಎಸ್ಸಿಯಲ್ಲಿ ಸಿಸ್ಟಂ ಇಂಜಿನಿಯರಿಂಗ್​ ಹುದ್ದೆ: ಬೆಂಗಳೂರೊವ ಐಐಎಸ್ಸಿಯಲ್ಲಿ 5 ಸಿಸ್ಟಂ ಇಂಜಿನಿಯರ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. 2 ರಿಂದ 4 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಯಲಿದೆ. ಬಿಇ, ಬಿಟೆಕ್​ ಪದವಿಧರರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಅರ್ಜಿ ಸಲ್ಲಿಕೆಗೆ ಗರಿಷ್ಠ ವಯೋಮಿತಿ 40 ವರ್ಷ. ಆನ್​ಲೈನ್​ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಹುದ್ದೆ ಆಯ್ಕೆ ನಡೆಯಲಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೇಯ ದಿನ ಮೇ 20 ಆಗಿದೆ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿಗೆ iisc.ac.in ಭೇಟಿ ನೀಡಿದೆ.

ಇದನ್ನೂ ಓದಿ: ಯುಪಿಎಸ್​ಸಿಯಿಂದ NDA-NA ನೇಮಕಾತಿ ಪರೀಕ್ಷೆ; ಪಿಯುಸಿ ಆದವರಿಗೆ ಸುವರ್ಣಾವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.