ETV Bharat / sports

ಐಪಿಎಲ್​ ನೀತಿ ಸಂಹಿತೆ ಉಲ್ಲಂಘನೆ: ಕೆಕೆಆರ್​ ಬ್ಯಾಟರ್​ ರಮಣದೀಪ್​ಗೆ ದಂಡ - Ramandeep Singh Fined

author img

By ETV Bharat Karnataka Team

Published : May 12, 2024, 10:30 PM IST

ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಕಾರಣ ಕೆಕೆಆರ್​ ಆಟಗಾರ ರಮಣದೀಪ್​ ಸಿಂಗ್​ಗೆ ದಂಡ ವಿಧಿಸಲಾಗಿದೆ.

ಕೆಕೆಆರ್​ ಬ್ಯಾಟರ್​ ರಮಣದೀಪ್​ಗೆ ದಂಡ
ಕೆಕೆಆರ್​ ಬ್ಯಾಟರ್​ ರಮಣದೀಪ್​ಗೆ ದಂಡ (ETV Bharat)

ಕೋಲ್ಕತ್ತಾ: ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಕೆಕೆಆರ್ ಆಲ್‌ರೌಂಡರ್ ರಮಣ್‌ದೀಪ್ ಸಿಂಗ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಲಾಗಿದೆ. 27 ವರ್ಷದ ಆಟಗಾರ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.20 ಅಡಿಯಲ್ಲಿ ಲೆವೆಲ್ ಒನ್ ಅಪರಾಧ ಎಸಗಿದ್ದಾರೆ. ತಮ್ಮ ಅಪರಾಧವನ್ನು ಒಪ್ಪಿಕೊಂಡ ಆಟಗಾರ ದಂಡವನ್ನು ಸ್ವೀಕರಿಸಿದ್ದಾರೆ.

ಆದರೆ ರಮಣದೀಪ್ ಸಿಂಗ್ ಅವರಿಗೆ ಯಾವ ತಪ್ಪಿಗೆ ದಂಡ ವಿಧಿಸಲಾಗಿದೆ ಎಂಬುದು ತಿಳಿದಿಲ್ಲ. ಆರ್ಟಿಕಲ್ 2.20 ಪ್ರಕಾರ ಕ್ರಿಕೆಟ್ ಹೊರಗಿನ ಅಹಿತಕರ ನಡುವಳಿಕೆಯಿಂದ ಅಂದರೆ ವಿಕೆಟ್​ಗಳನ್ನು ಒದೆಯುವುದು, ಅಥವಾ ಡ್ರೆಸ್ಸಿಂಗ್​ ರೂಮ್​ ಬಾಗಿಲುಗಳು, ಕನ್ನಡಿಗಳು, ಕಿಟಕಿಗಳಿಗೆ ಹಾನಿ ಮಾಡಿದ್ದು ಕಂಡುಬಂದಲ್ಲಿ ಈ ಶಿಕ್ಷೆಗೆ ಒಳಪಡಿಸಲಾಗುತ್ತದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಕೆಕೆಆರ್​ 18 ರನ್‌ಗಳಿಂದ ಗೆಲುವು ಸಾಧಿಸಿ ಪ್ಲೇಆಫ್‌ಗೆ ಪ್ರವೇಶಿಸಿದೆ. ಮಳೆ ಸುರಿದಿದ್ದರಿಂದ ಪಂದ್ಯವನ್ನು ತಲಾ 16 ಓವರ್‌ಗಳಿಗೆ ಸೀಮಿತಗೊಳಿಸಿ ತಡವಾಗಿ ಆರಂಭಿಸಲಾಗಿತ್ತು. ಟಾಸ್ ಗೆದ್ದ ಮುಂಬೈ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ 7 ವಿಕೆಟ್ ಕಳೆದುಕೊಂಡು 157 ರನ್‌ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಮುಂಬೈ 8 ವಿಕೆಟ್ ಕಳೆದುಕೊಂಡು 139 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: IPL: ರಾಜಸ್ಥಾನ್ ವಿರುದ್ಧ ಗೆದ್ದ ಚೆನ್ನೈ ಪ್ಲೇಆಫ್​ಗೆ ಮತ್ತಷ್ಟು ಸನಿಹ - CSK VS RR

ETV Bharat Logo

Copyright © 2024 Ushodaya Enterprises Pvt. Ltd., All Rights Reserved.