ETV Bharat / sports

Ind vs Eng 1st Test: 420ಕ್ಕೆ ಇಂಗ್ಲೆಂಡ್​ ಆಲೌಟ್​; ಭಾರತದ ಗೆಲುವಿಗೆ ಬೇಕು 231 ರನ್

author img

By PTI

Published : Jan 28, 2024, 12:33 PM IST

ಟೀಂ ಇಂಡಿಯಾ
ಟೀಂ ಇಂಡಿಯಾ

ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯ ಗೆಲ್ಲಲು ಭಾರತ 231 ರನ್‌ಗಳ ಗುರಿ ಸಾಧಿಸಬೇಕಿದೆ.

ಹೈದರಾಬಾದ್: ಓಲಿ ಪೋಪ್​ (196) ಅವರ ಅಬ್ಬರದ ಆಟದ ಫಲವಾಗಿ ಇಂದು ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್​ 420 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಮೊದಲ ಟೆಸ್ಟ್ ಗೆಲುವಿಗೆ 231 ರನ್‌ಗಳು ಬೇಕಿವೆ. ಅಮೋಘ ಪ್ರದರ್ಶನ ತೋರಿದ ಪೋಪ್ ದ್ವಿಶತಕದ ಹೊಸ್ತಿನಲ್ಲಿ ವಿಕೆಟ್​ ಕಳೆದುಕೊಂಡರು.

ಮೂರನೇ ದಿನವಾದ ನಿನ್ನೆ ಕ್ರೀಸ್​ಗೆ ಬಂದಿದ್ದ ಪೋಪ್​ ನಾಲ್ಕನೇ ದಿನವಾದ ಇಂದೂ ತನ್ನ ಜವಾಬ್ದಾರಿಯುತ ಆಟ ಮುಂದುವರೆಸಿದರು. ಆದರೆ ಭಾರತ ವೇಗದ ಬೌಲರ್​​ ಜಸ್ರೀತ್​ ಬುಮ್ರಾ ಪೋಪ್​ ಆಟಕ್ಕೆ ಬ್ರೇಕ್​ ಹಾಕಿದರು. ​ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ 4 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್​ ಎನಿಸಿದರು. ಅಶ್ವಿನ್ ಪ್ರಮುಖ 3 ವಿಕೆಟ್ ಕಬಳಿಸಿ ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ ಸಾಧನೆಯ ಹೊಸ್ತಿಲಿನಲ್ಲಿದ್ದಾರೆ. ಜಡೇಜಾ 2, ಅಕ್ಷರ್ ಪಟೇಲ್ 1 ವಿಕೆಟ್​ ಪಡೆಯುವಲ್ಲಿ ಯಶ ಕಂಡರು. ಮೊಹಮ್ಮದ್​ ಸಿರಾಜ್ ಮೊದಲ ಟೆಸ್ಟ್‌ನಲ್ಲಿ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ.​

ಹೈದರಾಬಾದ್‌ನ ಸ್ಪಿನ್ ಟ್ರ್ಯಾಕ್‌ ಪಿಚ್​ನಲ್ಲಿ ಆಂಗ್ಲರ ಸ್ಪಿನ್ ಬೌಲಿಂಗ್​ ಎದುರಿಸುವ ಸವಾಲು ಭಾರತೀಯ ಬ್ಯಾಟ್ಸ್‌ಮನ್‌ಗಳಿಗಿದೆ. ಇದೀಗ ನಾಯಕ ರೋಹಿತ್​ ಶರ್ಮಾ (15) ಮತ್ತು ಯಶಸ್ವಿ ಜೈಸ್ವಾಲ್ (1) ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದಾರೆ.

ಇದನ್ನೂ ಓದಿ: Ind vs Eng 1st Test: ಓಲಿ ಪೋಪ್​ ಶತಕ; ಇಂಗ್ಲೆಂಡ್‌ಗೆ 126 ರನ್‌ಗಳ ಮುನ್ನಡೆ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.