ETV Bharat / international

ಆರ್ಥಿಕತೆ ಚೇತರಿಕೆಗೆ ಸಚಿವರಿಗೆ ಪಾಕ್​ ಪ್ರಧಾನಿ ಷರೀಫ್​ "ಮಾಡು ಇಲ್ಲವೇ ಮಡಿ" ಟಾಸ್ಕ್​

author img

By ETV Bharat Karnataka Team

Published : Mar 12, 2024, 9:50 AM IST

ಆರ್ಥಿಕತೆ, ಭಯೋತ್ಪಾದನೆ, ಸಾಮಾಜಿಕ ಸಮಸ್ಯೆಗಳಿಂದ ಜರ್ಜರಿತವಾಗಿರುವ ಪಾಕಿಸ್ತಾವನ್ನು ಅಭಿವೃದ್ಧಿಯ ಹಳಿಗೆ ತರಲು ನೂತನ ಪ್ರಧಾನಿ ಶೆಹಬಾಜ್​ ಷರೀಫ್​ ಅವರು ತಮ್ಮ ಸಚಿವ ಸಂಪುಟಕ್ಕೆ ಮೊದಲ ದಿನವೇ ಟಾಸ್ಕ್​ ನೀಡಿದ್ದಾರೆ.

ಪಾಕ್​ ಪ್ರಧಾನಿ ಷರೀಫ್
ಪಾಕ್​ ಪ್ರಧಾನಿ ಷರೀಫ್

ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಪಾಕಿಸ್ತಾನವನ್ನು ಸಂಕಷ್ಟದಿಂದ ಪಾರು ಮಾಡಲು ನೂತನ ಪ್ರಧಾನಿ ಶೆಹಬಾಜ್​​ ಷರೀಫ್​ ಅವರು ತಮ್ಮ ಸಂಪುಟದ ಸಚಿವರಿಗೆ ಟಾಸ್ಕ್​ ನೀಡಿದ್ದಾರೆ. ಹಣಕಾಸು ದುರಿತದಿಂದ ದೇಶವನ್ನು ಪಾರು ಮಾಡಲು "ಮಾಡು ಇಲ್ಲವೇ ಮಡಿ" ಎಂಬಂತೆ ಕೆಲಸ ಮಾಡಬೇಕಿದೆ. ದೇಶದ ಆರ್ಥಿಕತೆ ಚೇತರಿಕೆಗೆ "ದೊಡ್ಡ ಶಸ್ತ್ರಚಿಕಿತ್ಸೆ"ಯೇ ಮಾಡಬೇಕಿದೆ ಎಂದಿದ್ದಾರೆ.

ಮೊದಲ ಸಚಿವ ಸಂಪುಟ ಸಭೆ ನಡೆಸಿದ ಪ್ರಧಾನಿ ಷರೀಫ್​, ದೇಶವು ಈಗ ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಹೊರತರಲು ಭಾರೀ ಹೋರಾಟದ ಅಗತ್ಯವಿದೆ. ನಾವು ಈಗ ಏನನ್ನಾದರೂ ಮಾಡದಿದ್ದರೆ, ಮುಂದೆ ಎಂದಿಗೂ ದೇಶವನ್ನು ಮೇಲೆತ್ತಲು ಸಾಧ್ಯವಿಲ್ಲ. ಇದು ನಮಗೆ ಮಾಡು ಇಲ್ಲವೇ ಮಡಿ ಸವಾಲಾಗಿದೆ ಎಂದು ಹೇಳಿದ್ದಾರೆ.

ಸರ್ಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸಮಯವನ್ನು ವ್ಯರ್ಥ ಮಾಡದೆ ಪ್ರತಿಯೊಬ್ಬರು ಕೆಲಸ ಮಾಡಬೇಕಿದ. ದೇಶದ ಆರ್ಥಿಕತೆಗೆ ನೀಡಲಾದ ಈವರೆಗಿನ ಯಾವುದೇ ಆ್ಯಂಟಿಬಯೋಟಿಕ್‌ಗಳು ಕಾರ್ಯನಿರ್ವಹಿಸದ ಕಾರಣ ದೊಡ್ಡ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವುದು ದೊಡ್ಡ ಸವಾಲಾಗಿದೆ. ಸ್ಥಳೀಯ ಆಡಳಿತದೊಂದಿಗೆ ಜೊತೆಗೂಡಿ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಬೇಕಿದೆ. ಇದು ನಮ್ಮ ಮೊದಲ ಪರೀಕ್ಷೆಯಾಗಿದೆ. ಇದನ್ನು ನಾವು ಜಯಿಸಲೇಬೇಕಿದೆ ಎಂದು ಶೆಹಬಾಜ್​ ಷರೀಫ್​ ಸಚಿವರಿಗೆ ಹುರಿದುಂಬಿಸಿದ್ದಾರೆ.

ಸರ್ಕಾರಿ ಏರ್​​ಲೈನ್ಸ್​ ಖಾಸಗೀಕರಣ: ಸರ್ಕಾರದ ಸುಪರ್ದಿಯಲ್ಲಿರುವ ಪಾಕಿಸ್ತಾನ ಇಂಟರ್​ನ್ಯಾಷನಲ್​ ಏರ್​ಲೈನ್ಸ್​ (ಪಿಐಎ) ವಾರ್ಷಿಕ 850 ಮಿಲಿಯನ್​ ಡಾಲರ್​ಗೂ ಹೆಚ್ಚು ನಷ್ಟ ಉಂಟಾಗುತ್ತಿದೆ. ಆದ್ಯತೆಯ ಆಧಾರದ ಮೇಲೆ ಏರ್​ಲೈನ್ಸ್ ಅನ್ನು ಖಾಸಗೀಕರಣಗೊಳಿಸುವ ಸಾಧ್ಯತೆಯನ್ನು ಶೆಹಬಾಜ್ ಪ್ರಸ್ತಾಪಿಸಿದರು. ಜೊತೆಗೆ ಕೆಲ ಖಾತೆಗಳನ್ನು ಏಕೀಕೃತಗೊಳಿಸುವ ಉದ್ದೇಶಕ್ಕಾಗಿ ವಿಲೀನ ಮಾಡಲಾಗುವುದು ಎಂದಿದ್ದಾರೆ.

ಇದಕ್ಕೂ ಮೊದಲು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ನೂತನವಾಗಿ ಚುನಾಯಿತರಾದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು 19 ಸಚಿವ ಸಂಪುಟದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಮಾಜಿ ಪ್ರಧಾನಿ ನವಾಜ್​ ಷರೀಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇಶಾಕ್ ದಾರ್, ಖವಾಜಾ ಆಸಿಫ್, ಅಹ್ಸಾನ್ ಇಕ್ಬಾಲ್, ಮುಹಮ್ಮದ್ ಔರಂಗಜೇಬ್, ಅಜಮ್ ತರಾರ್, ರಾಣಾ ತನ್ವೀರ್, ಮೊಹ್ಸಿನ್ ನಖ್ವಿ, ಅಹದ್ ಚೀಮಾ, ಖಾಲಿದ್ ಮಕ್ಬೂಲ್ ಸಿದ್ದಿಕಿ, ರಿಯಾಜ್ ಪ್ರಿಜಾದಾ, ಖೈಸರ್ ಶೇಖ್, ಶಾಜಾ ಫಾತಿಮಾ, ಅಲೀಮ್ ಖಾನ್, ಅಲೀಮ್ ಖಾನ್, ಅವೈಸ್ ಲೆಘರಿ, ಅಟ್ಟಾ ತರಾರ್, ಸಲಿಕ್ ಹುಸಿಯಾನ್ ಮತ್ತು ಮುಸಾದಿಕ್ ಮಲಿಕ್ ಅವರು ಪ್ರಮಾಣ ಸ್ವೀಕರಿಸಿದರು. ಮುಹಮ್ಮದ್ ಔರಂಗಜೇಬ್‌ಗೆ ಹಣಕಾಸು ಖಾತೆ, ಇಶಾಕ್ ದಾರ್‌ಗೆ ವಿದೇಶಾಂಗ ಖಾತೆ ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಆಸಿಫ್ ಅಲಿ ಜರ್ದಾರಿ ಪ್ರಮಾಣ ವಚನ ಸ್ವೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.