ETV Bharat / international

ಹಮಾಸ್​ - ಇಸ್ರೇಲ್ ಯುದ್ಧ ವಿಚಾರ: ಅಮೆರಿಕದ ಹಲವು ವಿವಿಗಳಲ್ಲಿ ತೀವ್ರ ಸ್ವರೂಪ ಪಡೆದ ವಿದ್ಯಾರ್ಥಿಗಳ ಪ್ರೊಟೆಸ್ಟ್​ - Student protests intensify

author img

By PTI

Published : May 1, 2024, 7:48 AM IST

Updated : May 1, 2024, 9:18 AM IST

ISRAEL HAMAS WAR  COLUMBIA UNIVERSITY  NEW YORK  CALIFORNIA UNIVERSITY
ಸಂಗ್ರಹ ಚಿತ್ರ

ಹಮಾಸ್​ - ಇಸ್ರೇಲ್ ಯುದ್ಧ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕದ ಹಲವು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಂದ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿವೆ.

ವಾಷಿಂಗ್ಟನ್ (ಅಮೆರಿಕ): ಹಮಾಸ್​- ಇಸ್ರೇಲ್ ಯುದ್ಧದ ಪರಿಣಾಮಗಳು ಅಮೆರಿಕದಲ್ಲಿ ವ್ಯಾಪಕವಾಗಿ ಗೋಚರಿಸುತ್ತಿವೆ. ಇಸ್ರೇಲ್ - ಹಮಾಸ್ ಯುದ್ಧದ ಕುರಿತು ಈ ತಿಂಗಳು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿದ ಹಿನ್ನೆಲೆ, ವಿದ್ಯಾರ್ಥಿಗಳು ಇತರ ಕಾಲೇಜು ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.

ಗಾಜಾದಲ್ಲಿ ಇಸ್ರೇಲ್‌ನ ಮಿಲಿಟರಿ ಪ್ರಯತ್ನಗಳನ್ನು ಬೆಂಬಲಿಸುವ ಸಂಸ್ಥೆಗಳು, ವಿಶ್ವವಿದ್ಯಾಲಯಗಳನ್ನು ದೂರವಿಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ನ್ಯೂಯಾರ್ಕ್ ಪೊಲೀಸರು ಕೊಲಂಬಿಯಾ ವಿಶ್ವವಿದ್ಯಾಲಯ ಸೇರಿದಂತೆ ಟೆಕ್ಸಾಸ್, ಉತಾಹ್, ವರ್ಜೀನಿಯಾ, ನಾರ್ತ್ ಕೆರೊಲಿನಾ, ನ್ಯೂ ಮೆಕ್ಸಿಕೊ, ಕನೆಕ್ಟಿಕಟ್ ಮತ್ತು ನ್ಯೂಜೆರ್ಸಿ ಕ್ಯಾಂಪಸ್​ನಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಅಮೆರಿಕ ದೇಶಾದ್ಯಂತ ಬಂಧಿಸಲಾದ ಪ್ರತಿಭಟನಾಕಾರರ ಸಂಖ್ಯೆ ಇದೀಗ 1,000ಕ್ಕೆ ತಲುಪಿದೆ.

ಪ್ರತಿಭಟನೆಗಳಲ್ಲಿ ಹೊರಗಿನವರೂ ಭಾಗಿ: ಅನೇಕ ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿ ಗುಂಪುಗಳಿಂದ ಪ್ರತಿಭಟನೆಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಹೊರಗಿನವರೂ ಸೇರಿಕೊಂಡು ತೊಂದರೆ ಸೃಷ್ಟಿಸಿದ್ದಾರೆ ಎಂದು ಕೆಲವು ವಿಶ್ವವಿದ್ಯಾಲಯಗಳು ಹೇಳಿವೆ. ಈ ಪ್ರತಿಭಟನೆಗಳು ಕೆನಡಾ ಮತ್ತು ಯುರೋಪ್‌ಗೆ ಹರಡಿದೆ.

ಸೊರ್ಬೊನ್ ವಿಶ್ವವಿದ್ಯಾಲಯದ ಮುಖ್ಯ ಅಂಗಳವನ್ನು ಪ್ಯಾಲೇಸ್ಟಿನಿಯನ್ ಪರ ಪ್ರತಿಭಟನಾಕಾರರು ವಶಕ್ಕೆ ತೆಗೆದುಕೊಂಡ ನಂತರ, ಫ್ರೆಂಚ್ ಪೊಲೀಸರು, ಅಲ್ಲಿಂದ ಹಲವಾರು ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ್ದಾರೆ. ಶೈಕ್ಷಣಿಕ ವರ್ಷ ಮುಗಿದಿರುವುದರಿಂದ ಅಧಿಕಾರಿಗಳು ಪ್ರತಿಭಟನೆ ಅಂತ್ಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅನೇಕ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆನ್ ಚಾಂಗ್ ಪ್ರತಿಕ್ರಿಯೆ: ಕೊಲಂಬಿಯಾ ವಿಶ್ವವಿದ್ಯಾನಿಲಯದ ವಕ್ತಾರ ಬೆನ್ ಚಾಂಗ್ ಪ್ರತಿಕ್ರಿಯಿಸಿ, ''ಕ್ಯಾಂಪಸ್​ನಲ್ಲಿ ನಿಯಮ ಉಲ್ಲಂಘಿಸುವ ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಅಮಾನತುಗೊಳಿಸಲು ವಿಶ್ವವಿದ್ಯಾನಿಲಯವು ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.

ಭಾರತೀಯ ವಿದ್ಯಾರ್ಥಿ ಬಂಧನ: ಇತ್ತೀಚೆಗೆ, ಅಮೆರಿಕದ ಪ್ರತಿಷ್ಠಿತ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿ ಅಚಿಂತ್ಯ ಶಿವಲಿಂಗಂ ಅವರನ್ನು ಕಾಲೇಜು ಕ್ಯಾಂಪಸ್‌ನಲ್ಲಿ ಪ್ಯಾಲೆಸ್ಟೈನ್ ಪರ ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿಸಲಾಗಿತ್ತು. ಕ್ಯಾಂಪಸ್‌ನಲ್ಲಿ ಟೆಂಟ್‌ ಹಾಕಿ ಪ್ರತಿಭಟನೆ ನಡೆಸಿದ ಶಿವಲಿಂಗಂ ಅವರನ್ನು ಬಂಧಿಸಲಾಗಿತ್ತು. ಅಚಿಂತ್ಯ ಶಿವಲಿಂಗಂ ಜೊತೆಗೆ ಮತ್ತೊಬ್ಬ ವಿದ್ಯಾರ್ಥಿ ಹಸನ್ ಸಯೀದ್ ನನ್ನು ಕೂಡ ಬಂಧಿಸಲಾಗಿದೆ.

ವಿದ್ಯಾರ್ಥಿಗಳಿಂದ ಹೆಚ್ಚುತ್ತಿರುವ ವಿರೋಧ: ಇಸ್ರೇಲ್​ ಸೇನಾ ಕಾರ್ಯಾಚರಣೆಯಿಂದಾಗಿ ಗಾಜಾದಲ್ಲಿ ಸಾವನ್ನಪ್ಪಿರುವ ಕುರಿತು ಅಮೆರಿಕದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವುದು ಗಮನಾರ್ಹ. ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಆರಂಭವಾದ ಪ್ರತಿಭಟನೆ ಇದೀಗ ದೇಶಾದ್ಯಂತ ಕಾಲೇಜುಗಳನ್ನು ತಲುಪಿದೆ. ಪ್ರತಿಭಟನಾಕಾರರು ತಮ್ಮ ವಿಶ್ವವಿದ್ಯಾನಿಲಯಗಳನ್ನು ಗಾಜಾ ಯುದ್ಧದಿಂದ ಲಾಭ ಗಳಿಸುತ್ತಿರುವ ಸಂಸ್ಥೆಗಳನ್ನು ದೂರವಿಡಬೇಕೆಂದು ಒತ್ತಾಯಿಸುತ್ತಿದ್ದಾರೆ ಮತ್ತು ತಕ್ಷಣದ ಕದನ ವಿರಾಮಕ್ಕಾಗಿ ಪ್ರತಿಪಾದಿಸುತ್ತಿದ್ದಾರೆ.

ಇದನ್ನೂ ಓದಿ: ಲಂಡನ್‌ನಲ್ಲಿ ಕತ್ತಿ ಹಿಡಿದು ಜನರ ಮೇಲೆ ದಾಳಿ; ಬಾಲಕ ಸಾವು, ಆರೋಪಿ ಸೆರೆ - Sword Wielding Man

Last Updated :May 1, 2024, 9:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.