ETV Bharat / health

ಜಾಗತಿಕ ತಾಪಮಾನ 3 ಡಿಗ್ರಿ ಸೆಲ್ಸಿಯಸ್​ ಹೆಚ್ಚಾದರೆ, ಜನಜೀವನದ ಜತೆ ಶೇ 10ರಷ್ಟು ಜಿಡಿಪಿಯೂ ನಷ್ಟ: ಅಧ್ಯಯನ - Global warming of 3 degrees Celsius

author img

By ETV Bharat Karnataka Team

Published : Apr 19, 2024, 11:30 AM IST

Warming of the planet by 3 degrees Celsius lost the 10 per cent of its GDP
Warming of the planet by 3 degrees Celsius lost the 10 per cent of its GDP

ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ತೀವ್ರ ತಾಪಮಾನ ದಿನೇ ದಿನೇ ಏರಿಕೆ ಕಾಣುತ್ತಿದ್ದು, ಈ ರಾಷ್ಟ್ರಗಳ ಜಿಡಿಪಿ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಇಟಿಎಚ್​​ ಜ್ಯೂರಿಚ್ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಹೇಳಲಾಗಿದೆ.

ನವದೆಹಲಿ: ಜಾಗತಿಕ ತಾಪಮಾನ ಶೇ 3ರಷ್ಟು ಹೆಚ್ಚಳವಾದರೆ, ಜಗತ್ತಿನ ಜಿಡಿಪಿಯಲ್ಲಿ ಶೇ 10ರಷ್ಟು ನಷ್ಟ ಉಂಟಾಗಲಿದೆ ಎಂದು ಸಂಶೋಧನೆ ತಿಳಿಸಿದೆ. ಬಡ ಮತ್ತು ಉಷ್ಣವಲಯದ ದೇಶಗಳು ಇದರ ನೇರ ಪರಿಣಾಮ ಎದುರಿಸಲಿವೆ. ಈ ರಾಷ್ಟ್ರಗಳಲ್ಲಿ ಜಿಡಿಪಿ ಶೇ 17ರಷ್ಟು ನಷ್ಟವಾಗಲಿದೆ.

ಇಟಿಎಚ್​​ ಜ್ಯೂರಿಚ್, ಸ್ವಿಟ್ಜರ್ಲೆಂಡ್ ನೇತೃತ್ವದಲ್ಲಿ ಈ ಅಧ್ಯಯನ ನಡೆಸಲಾಗಿದ್ದು, ಇದನ್ನು ನೇಚರ್ ಕ್ಲೈಮೇಟ್ ಚೇಂಜ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನ ತಿಳಿಸುವಂತೆ ಜಾಗತಿಕ ಆರ್ಥಿಕತೆಯ ಸುಮಾರ ಅರ್ಧದಷ್ಟು ಹಾನಿಯು ತೀವ್ರ ಶಾಖದಿಂದ ಆಗಲಿದೆ. ಇದರಲ್ಲಿ ಶಾಖೆಯ ಅಲೆಗಳು ಹೆಚ್ಚಿನ ಪ್ರಭಾವ ಹೊಂದಿದೆ ಎಂದು ವಿಶ್ಲೇಷಣೆಯಲ್ಲಿ ಕಂಡು ಬಂದಿದೆ.

ಇದರ ಪರಿಣಾಮ ದಕ್ಷಿಣದಲ್ಲಿ ಮತ್ತು ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ತೀವ್ರತರದಲ್ಲಿರಲಿದ್ದು, ಇಲ್ಲಿನ ಹೆಚ್ಚಿನ ಆರಂಭಿಕ ತಾಪಮಾನವು ಹಲವು ರಾಷ್ಟ್ರಗಳನ್ನು ದುರ್ಬಲಗೊಳಿಸಲಿವೆ ಎಂದು ಅಧ್ಯಯನದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ವಿಶ್ವದಲ್ಲಿ ಈಗ ಹವಾಮಾನ ಬದಲಾವಣೆ ಭಾರಿ ಪರಿಣಾಮ ಬೀರುತ್ತಿದೆ. ಇದಕ್ಕೆ ಕಾರಣ ಮಳೆ ಕೊರತೆಯಾಗಿದೆ ಎಂಬ ಲೆಕ್ಕಚಾರವನ್ನು ಸಂಶೋಧಕರು ಮಾಡಿದ್ದಾರೆ. ಶಾಖದ ವರ್ಷಗಳು, ಮಳೆಯ ಬದಲಾವಣೆ ಮತ್ತು ಹವಾಮಾನ ವ್ಯತ್ಯಾಸಗಳ ಅಂಶಗಳನ್ನು ಗಮನಿಸಿದಾಗ, ತಾಪಮಾನ ಏರಿಕೆಯ ಪರಿಣಾಮ ಅಂದಾಜಿಕ್ಕಿಂತ ಕೆಟ್ಟದಾಗಿರುತ್ತದೆ ಎಂದು ಇಟಿಎಚ್​ ಜ್ಯೂರಿಜ್​ ನ ಆರ್ಧಶಾಸ್ತ್ರಜ್ಞ ಪಾಲ್ ವೈಡೆಲಿಚ್ ತಿಳಿಸಿದ್ದಾರೆ.

ಜಾಗತಿಕ ತಾಪಮಾನದ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವುದರಿಂದ ಈ ಯೋಜಿತ ಆರ್ಥಿಕ ಹಾನಿಯನ್ನು ಮೂರನೇ ಎರಡರಷ್ಟು ಕಡಿಮೆ ಮಾಡಬಹುದು. ಕೆಲವು ಜನರು ಇಂದಿಗೂ ಹೇಳುವಂತೆ ಜಗತ್ತು ಬೇಗ ಡಿಕಾರ್ಬೊನೈಸೇಶನ್​ ಆಗಲಲು ಸಾಧ್ಯವಿಲ್ಲ. ಆದರೆ, ಜಾಗತಿಕ ಆರ್ಥಿಕತೆ ಹವಾಮಾನ ಬದಲಾವಣೆಯ ಪರಿಣಾಮಕ್ಕೆ ಒಳಗಾಗುತ್ತದೆ ಎಂದು ಅಧ್ಯಯನದ ಸಹ ಲೇಖಕಿ ಸೋನಿಯಾ ಸೆನೆವಿರತ್ನೆ ಪ್ರತಿಪಾದಿಸಿದ್ದಾರೆ.

ಅಧ್ಯಯನಕ್ಕಾಗಿ ಸಂಶೋಧಕರು 33 ಜಾಗತಿಕ ತಾಪಮಾನದ ಮಾದರಿಗಳನ್ನು ವಿಶ್ಲೇಷಿಸಿದ್ದಾರೆ. ಇದರಲ್ಲಿ ಹಸಿರುವ ಮನೆ ಪರಿಣಾಮ ಮತ್ತು 1850-2100 ಅವಧಿಯ ಆದಾಯದ ಬೆಳವಣಿಗೆ ಸಂಬಂಧಿಸಿದ ಆರ್ಥಿಕ ಸೂಚನೆಯನ್ನು ಗಣನೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸೂಚಕಗಳು ವಾರ್ಷಿಕ ಸರಾಸರಿ ತಾಪಮಾನ, ವಾರ್ಷಿಕ ಮಳೆ ಮತ್ತು ವಿಪರೀತ ಮಳೆಯನ್ನು ಒಳಗೊಂಡಿವೆ.

ಹವಾಮಾನ ಬದಲಾವಣೆಯ ವೆಚ್ಚದ ಪರಿಣಾಮಗಳನ್ನು ಯೋಜಿಸುವಾಗ ಗಣನೀಯ ಅನಿಶ್ಚಿತತೆಗಳಿವೆ. ಈ ಅನಿಶ್ಚಿತತೆಯು ಪ್ರಾಥಮಿಕವಾಗಿ ಸಾಮಾಜಿಕ - ಆರ್ಥಿಕತೆ ಹೊಂದಿದ್ದು, ಇವು ಸಮಾಜದಲ್ಲಿ ಪರಿಣಾಮಗಳು ಎಷ್ಟು ಕಾಲ ಇರುತ್ತದೆ. ಸಮಾಜ ಇದಕ್ಕೆ ಎಷ್ಟು ಕಾಲ ಹೊಂದಿಕೊಳ್ಳುತ್ತದೆ. ಹವಾಮಾನ ಬದಲಾವಣೆಯ ಒಟ್ಟು ವೆಚ್ಚವು ಗಣನೀಯವಾಗಿ ಹೆಚ್ಚಾಗಿರುತ್ತದೆ. ಆದರೆ, ಅಧ್ಯಯನದಲ್ಲಿ ಬರಗಳು, ಸಮುದ್ರ ಮಟ್ಟ ಏರಿಕೆಯಂತಹ ಅಂಶವನ್ನು ಸೇರಿಸಿಲ್ಲ. (ಪಿಟಿಐ)

ಇದನ್ನೂ ಓದಿ: ಜಾಗತಿಕ ತಾಪಮಾನ 3 ಡಿಗ್ರಿ ಹೆಚ್ಚಾದರೆ ಸಾಕು ಹಿಮಾಲಯದ ಶೇ.90ರಷ್ಟು ಪ್ರದೇಶದಲ್ಲಿ ವರ್ಷಪೂರ್ತಿ ಬರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.