ETV Bharat / bharat

ಜಾಗತಿಕ ತಾಪಮಾನ 3 ಡಿಗ್ರಿ ಹೆಚ್ಚಾದರೆ ಸಾಕು ಹಿಮಾಲಯದ ಶೇ.90ರಷ್ಟು ಪ್ರದೇಶದಲ್ಲಿ ವರ್ಷಪೂರ್ತಿ ಬರ!

author img

By PTI

Published : Feb 29, 2024, 6:12 PM IST

ಜಾಗತಿಕ ತಾಪಮಾನವನ್ನು ಕಡಿಮೆ ಮಾಡದೇ ಹೋದಲ್ಲಿ ಅದು ಮನುಕುಲ ಮತ್ತು ಜೀವವೈವಿಧ್ಯತೆಗೆ ಭಾರಿ ಬೆದರಿಕೆ ಇದೆ ಎಂದು ಅಧ್ಯಯನ ವರದಿ ತಿಳಿಸಿದೆ.

90-per-cent-of-himalayas-will-face-year-long-drought-at-3-degrees-warming
90-per-cent-of-himalayas-will-face-year-long-drought-at-3-degrees-warming

ನವದೆಹಲಿ: ಜಾಗತಿಕ ತಾಪಮಾನ 3 ಡಿಗ್ರಿ ಸೆಲ್ಸಿಯಸ್​ ಹೆಚ್ಚಾದರೆ ಶೇ.90ರಷ್ಟು ಹಿಮಾಲಯದ ಪ್ರದೇಶಗಳು ವರ್ಷಪೂರ್ತಿ ಭೀಕರ ಬರ ಅನುಭವಿಸಬೇಕಾಗುತ್ತದೆ ಎಂದು ಹೊಸ ವರದಿಯೊಂದು ಎಚ್ಚರಿಸಿದೆ. ಜರ್ನಲ್​ ಕ್ಲೈಮೆಂಟ್​ ಚೇಂಜ್​ನಲ್ಲಿ ಈ ಕುರಿತು ವರದಿ ಪ್ರಕಟಗೊಂಡಿದೆ.

3 ಡಿಗ್ರಿ ಸೆಲ್ಸಿಯಸ್​ಗೆ ಹೋಲಿಕೆ ಮಾಡಿದರೆ ಪ್ಯಾರಿಸ್ ಒಪ್ಪಂದದ ತಾಪಮಾನದ ಗುರಿಗಳನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸುವುದರಿಂದ ಭಾರತದಲ್ಲಿ ಶಾಖದೊತ್ತಡಕ್ಕೆ ಒಡ್ಡಿಕೊಳ್ಳುವುದನ್ನು ಶೇ.80ರಷ್ಟು ತಪ್ಪಿಸಬಹುದು ಎಂದು ತಿಳಿಸಿದೆ.

ಯುಕೆಯ ಈಸ್ಟ್​ ಆ್ಯಂಗ್ಲಿಯಾ(ಯುಇಎ) ಯೂನಿವರ್ಸಿಟಿ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದೆ. ಹವಾಮಾನ ಬದಲಾವಣೆ ಹೇಗೆ ಮಾನವನಿಗೆ ಅಪಾಯ ತರುತ್ತದೆ?, ಬರ ಮತ್ತು ಪ್ರವಾಹ, ಬೆಳೆ ಇಳುವರಿ ಕಡಿಮೆ ಮಾಡಿ ಮತ್ತು ಜೀವ ವೈವಿಧ್ಯತೆಗೆ ಹೇಗೆ ನಷ್ಟ ಉಂಟುಮಾಡುತ್ತದೆ?, ಪ್ರತಿ ಒಂದು ಡಿಗ್ರಿ ಸೆಲ್ಸಿಯಸ್​ ಹೆಚ್ಚಳವು ಮಾನವರು ಮತ್ತು ನೈಸರ್ಗಿಕ ವ್ಯವಸ್ಥೆಗೆ ಹೇಗೆ ಬೆದರಿಕೆ ಒಡ್ಡುತ್ತದೆ? ಎಂಬುದನ್ನು ಅಧ್ಯಯನ ವರದಿ ವಿವರಿಸಿದೆ.

8 ದೇಶದಲ್ಲಿ ಅಧ್ಯಯನ: ಭಾರತ, ಬ್ರೆಜಿಲ್​, ಚೀನಾ, ಈಜಿಪ್ಟ್​​, ಇಥಿಯೋಪಿಯಾ ಮತ್ತು ಘಾನ ದೇಶಗಳನ್ನು ಕೇಂದ್ರೀಕರಿಸಿ ಎಂಟು ದೇಶಗಳಲ್ಲಿ ಅಧ್ಯಯನ ಕಾರ್ಯ ನಡೆದಿದೆ. ಸಂಶೋಧಕರ ತಂಡವು ಮೂರು ಡಿಗ್ರಿ ಸೆಲ್ಸಿಯಸ್​ ತಾಪಮಾನಕ್ಕೆ ಪ್ರತಿ ದೇಶದಿಂದ ಶೇ.50ಕ್ಕಿಂತ ಹೆಚ್ಚಿನ ಕೃಷಿ ಭೂಮಿ ತೆರೆದುಕೊಂಡರೆ 30 ವರ್ಷದವರೆಗೆ ತೀವ್ರ ಬರಗಾಲಕ್ಕೆ ಒಡ್ಡುವಂತೆ ಮಾಡುತ್ತದೆ ಎಂದು ಎಚ್ಚರಿಸಿದೆ.

ಆದಾಗ್ಯೂ, 1.5 ಡಿಗ್ರಿ ಸೆಲ್ಸಿಯಸ್​​ಗೆ ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವುದರಿಂದ ಕೃಷಿ ಭೂಮಿಯ ಬರಕ್ಕೆ ಒಡ್ಡಿಕೊಳ್ಳುವುದನ್ನು ಭಾರತದಲ್ಲಿ ಶೇ.21 ಮತ್ತು ಇಥಿಯೋಪಿಯಾದಲ್ಲಿ ಶೇ.61ರಷ್ಟು ಕಡಿಮೆ ಮಾಡಬಹುದು. ಇದರಿಂದ ಹಿಮಾಲಯದ ಕೆಳಗಿನ ಪ್ರದೇಶದಲ್ಲಿ ನೀರಿನ ಕರುಗಿವಿಕೆಯಿಂದಾಗುವ ಹರಿವಿನ ಪ್ರವಾಹದಿಂದ ಉಂಟಾಗುವ ಆರ್ಥಿಕ ಹಾನಿ ಕಡಿಮೆಯಾಗುತ್ತದೆ ಎಂದು ವರದಿ ಹೇಳುತ್ತದೆ.(ಪಿಟಿಐ)

ಇದನ್ನೂ ಓದಿ: ಜಾಗತಿಕ ತಾಪಮಾನ ಹೆಚ್ಚಳದಿಂದ ಮಾನವ ಕುಲಕ್ಕೆ ಗಂಡಾಂತರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.