ETV Bharat / entertainment

'ದಾಸವರೇಣ್ಯ ಶ್ರೀ ವಿಜಯದಾಸರು' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ - Dasavarenya Sri Vijayadasaru

author img

By ETV Bharat Karnataka Team

Published : Mar 29, 2024, 1:18 PM IST

'ದಾಸವರೇಣ್ಯ ಶ್ರೀ ವಿಜಯದಾಸರು' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
'ದಾಸವರೇಣ್ಯ ಶ್ರೀ ವಿಜಯದಾಸರು' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಎಸ್‌ಪಿಜೆ ಮೂವೀಸ್ ಬ್ಯಾನರ್‌ನಲ್ಲಿ ತ್ರಿವಿಕ್ರಮ ಜೋಶಿ ನಿರ್ಮಿಸಿರುವ 'ದಾಸವರೇಣ್ಯ ಶ್ರೀ ವಿಜಯದಾಸರು' ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಹಾಗೂ ಕಂಟೆಂಟ್ ಸಿನಿಮಾಗಳ ಮಧ್ಯೆ ಬಯೋಫಿಕ್ ಚಿತ್ರಗಳು ಕೂಡ ಇತ್ತೀಚೆಗೆ ಹೆಚ್ಚು ಗಮನ ಸೆಳೆಯುತ್ತಿವೆ. ಈ ಸಾಲಿನಲ್ಲಿ ಖ್ಯಾತ ಹರಿದಾಸರಾದ ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರ ಕುರಿತಾದ 'ದಾಸವರೇಣ್ಯ ಶ್ರೀ ವಿಜಯದಾಸರು' ಚಿತ್ರ ಕೂಡ ಒಂದು.

'ದಾಸವರೇಣ್ಯ ಶ್ರೀ ವಿಜಯದಾಸರು' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
'ದಾಸವರೇಣ್ಯ ಶ್ರೀ ವಿಜಯದಾಸರು' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಎಸ್‌ಪಿಜೆ ಮೂವೀಸ್ ಬ್ಯಾನರ್‌ನಲ್ಲಿ ತ್ರಿವಿಕ್ರಮ ಜೋಶಿ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಮಧುಸೂದನ್ ಹವಾಲ್ದಾರ್ ನಿರ್ದೇಶಿಸಿದ್ದಾರೆ. ಮಹಾಮಹಿಮರಾದ ವಿಜಯದಾಸರ ಕುರಿತಾದ ಈ ಚಿತ್ರ ಇದೀಗ ತೆರೆ ಕಾಣಲು ಸಿದ್ಧವಾಗಿದೆ. ಈ ಬಗ್ಗೆ ಚಿತ್ರತಂಡ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದೆ.

ನಿರ್ದೇಶಕ ಮಧುಸೂದನ್ ಹವಾಲ್ದಾರ್ ಮಾತನಾಡಿ, 'ಶ್ರೀಜಗನ್ನಾಥದಾಸರು' ಚಿತ್ರ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಕಳೆದ ವರ್ಷ 'ಶ್ರೀಪ್ರಸನ್ನವೆಂಕಟದಾಸರು' ಚಿತ್ರ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈಗ ಕರ್ನಾಟಕದ ಮತ್ತೊಬ್ಬ ಶ್ರೇಷ್ಠ ಹರಿದಾಸರಾದ ವಿಜಯದಾಸರ ಕುರಿತಾದ 'ದಾಸವರೇಣ್ಯ ಶ್ರೀವಿಜಯದಾಸರು' ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಎಸ್‌ಪಿಜೆ ಮೂವೀಸ್ ಲಾಂಛನದಲ್ಲಿ ತ್ರಿವಿಕ್ರಮ ಜೋಶಿ ಅವರು ಈ ಚಿತ್ರವನ್ನು ನಿರ್ಮಿಸುವುದರೊಂದಿಗೆ ವಿಜಯದಾಸರ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ವಿಜಯದಾಸರ ಪತ್ನಿ ಅರಳಮ್ಮನ ಪಾತ್ರದಲ್ಲಿ ಶ್ರೀಲತ ಅಭಿನಯಿಸಿದ್ದಾರೆ. ಪ್ರಭಂಜನ ದೇಶಪಾಂಡೆ, ವಿಜಯಾನಂದ ನಾಯಕ್, ಮಾಜಿ ಶಾಸಕರಾದ ಬಸವನಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿಜಯಕೃಷ್ಣ ಸಂಗೀತ ನೀಡದ್ದಾರೆ. ಜೆ.ಎಂ.ಪ್ರಹ್ಲಾದ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಹಂಪಿ, ಕನಕಗಿರಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ" ಎಂಬೆಲ್ಲಾ ಮಹತ್ವದ ಸಂಗತಿಗಳನ್ನು ತಿಳಿಸಿದರು.

'ದಾಸವರೇಣ್ಯ ಶ್ರೀ ವಿಜಯದಾಸರು' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
'ದಾಸವರೇಣ್ಯ ಶ್ರೀ ವಿಜಯದಾಸರು' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ನಿರ್ಮಾಪಕ‌ ಹಾಗೂ ನಟ ತ್ರಿವಿಕ್ರಮ ಜೋಶಿ ಮಾತನಾಡಿ, ಕನ್ನಡದಲ್ಲಿ ನವಕೋಟಿ ನಾರಾಯಣ, ಭಕ್ತ ಕನಕದಾಸ ಚಿತ್ರದ ನಂತರ ಹರಿದಾಸರ ಕುರಿತಾದ ಯಾವುದೇ ಚಿತ್ರ ತೆರೆ ಕಂಡಿಲ್ಲ. ಸುಮಾರು ವರ್ಷಗಳ ನಂತರ 'ಶ್ರೀಜಗನ್ನಾಥದಾಸರು' ಚಿತ್ರ ತೆರೆಗೆ ಬಂತು. ಆನಂತರ 'ಶ್ರೀಪ್ರಸನ್ನವೆಂಕಟದಾಸರು', ಈಗ 'ದಾಸವರೇಣ್ಯ ಶ್ರೀ ವಿಜಯದಾಸರು' ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ನಾನು ಮೂಲತಃ ಇಂಜಿನಿಯರ್ ಹಾಗೂ ಉದ್ಯಮಿ. ಹಲವು ವರ್ಷಗಳಿಂದ ರಾಜಕೀಯದಲ್ಲೂ ಸಕ್ರಿಯನಾಗಿದ್ದೇನೆ. 'ದಾಸವರೇಣ್ಯ ಶ್ರೀ ವಿಜಯದಾಸರು' ಚಿತ್ರವನ್ನು ನಿರ್ಮಾಣ ಮಾಡಿ, ವಿಜಯದಾಸರ ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ. ದುಡ್ಡು ಮಾಡುವ ಚಿತ್ರ ಮಾಡದೇ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರ ನೀಡುವ ಹಂಬಲದಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ. 'ಶ್ರೀಜಗನ್ನಾಥದಾಸರು' ಚಿತ್ರ ತೆರೆಕಂಡಾಗ ಜನರು ಭಕ್ತಿಪರವಶರಾಗಿ ನೋಡಿದ್ದನ್ನು ಕಂಡಿದ್ದೇನೆ. ಈ ಚಿತ್ರಕ್ಕೂ ಈಗಾಗಲೇ ವಿದೇಶದಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಈ ಚಿತ್ರಕ್ಕೆ ತಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

'ದಾಸವರೇಣ್ಯ ಶ್ರೀ ವಿಜಯದಾಸರು' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
'ದಾಸವರೇಣ್ಯ ಶ್ರೀ ವಿಜಯದಾಸರು' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಚಿತ್ರದಲ್ಲಿ ಅಭಿನಯಿಸಿರುವ ಶ್ರೀಲತಾ, ವಿಜಯಾನಂದ ನಾಯಕ್ ಹಾಗೂ ವಿತರಕರಾದ ರಾಜು ಮತ್ತು ಆನಂದ್ ಉಪಸ್ಥಿತಿ ಇದ್ದರು‌. ಟ್ರೈಲರ್​ನಿಂದ ಗಮನ ಸೆಳೆಯುತ್ತಿರುವ 'ದಾಸವರೇಣ್ಯ ಶ್ರೀ ವಿಜಯದಾಸರು' ಏಪ್ರಿಲ್ 12ರಂದು ತೆರೆಗೆ ಬರಲಿದೆ.

ಇದನ್ನೂ ಓದಿ: ರಗಡ್ ಯಂಗ್ ಹೀರೋಗಳ ಖಾಲಿತನ 'ಯುವ' ನೀಗಿಸ್ತಾರೆ: ನಿರ್ದೇಶಕ ಸಂತೋಷ್ ಆನಂದ್ ರಾಮ್ - Yuva Film

ETV Bharat Logo

Copyright © 2024 Ushodaya Enterprises Pvt. Ltd., All Rights Reserved.