ಬೆಳ್ತಂಗಡಿ: ಮನೆಯಂಗಳದಲ್ಲಿ ಸುತ್ತಾಡಿದ ಚಿರತೆ- ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

By

Published : Jun 12, 2022, 1:19 PM IST

thumbnail

ಬೆಳ್ತಂಗಡಿ: ತಾಲೂಕಿನ ಬಳಂಜ ಗ್ರಾಮದ ಪರಾರಿ ರಾಮಣ್ಣ ಪೂಜಾರಿ ಎಂಬುವರ ಮನೆಯ ಅಂಗಳದಲ್ಲಿ ರಾತ್ರಿ ಚಿರತೆ ಅಲೆದಾಡುತ್ತಿದ್ದ ದೃಶ್ಯ ಅವರ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಜೂ.2 ರಂದು ಸುಲ್ಕೇರಿ ಸಮೀಪ ನಾವರ ಗ್ರಾಮದಲ್ಲಿ ವಸಂತ ಕೋಟ್ಯಾನ್ ಎಂಬುವರ ಮನೆಯ ಹಿಂಬದಿ ಬಾವಿಗೆ ಚಿರತೆ ಬಿದ್ದಿತ್ತು. ಕಾರ್ಕಳ ಅರಣ್ಯ ಇಲಾಖೆ ತಂಡ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದರು. ಈ ಪ್ರದೇಶದಲ್ಲಿ ಆಗಾಗ ಚಿರತೆಗಳು ಪ್ರತ್ಯಕ್ಷವಾಗುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಚಿರತೆ ಸೆರೆಗಾಗಿ ಬೋನ್ ಅಳವಡಿಕೆ ಮಾಡಿದ್ದೇವೆ. ಶೀಘ್ರವಾಗಿ ಸೆರೆ ಹಿಡಿಯಲಾಗುವುದು ಎಂದು ಅಳದಂಗಡಿ ಉಪ ವಲಯ ಅರಣ್ಯಾಧಿಕಾರಿ ಸುರೇಶ್ ತಿಳಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.