ETV Bharat / health

2050ರ ಹೊತ್ತಿಗೆ ಹೆಚ್ಚಾಗಲಿದೆ ಜಾಗತಿಕ ಜೀವಿತಾವಧಿ ಆದರೆ..: - Global Life Expectancy

author img

By ETV Bharat Karnataka Team

Published : May 17, 2024, 1:21 PM IST

ಜೀವಿತಾವಧಿ ಹೆಚ್ಚಾದರೂ ಜನರು ಹೆಚ್ಚಿನ ವರ್ಷವನ್ನು ಕಳಪೆ ಆರೋಗ್ಯದಲ್ಲಿಯೇ ಕಳೆಯಬೇಕಿದೆ ಎಂದು ಅಧ್ಯಯನ ತಿಳಿಸಿದೆ.

ಜಾಗತಿಕ ಜೀವಿತಾವಧಿ
ಜಾಗತಿಕ ಜೀವಿತಾವಧಿ (IANS)

ನವದೆಹಲಿ: ಭೌಗೋಳಿಕ ರಾಜಕೀಯ, ಪರಿಸರ ಮತ್ತು ಚಯಾಪಚಯನದ ಬೆದರಿಕೆ ಹೊರತಾಗಿ ಜಾಗತಿಕ ಜೀವಿತಾವಧಿ ಹೆಚ್ಚಳ ಕಾಣಲಿದೆ ಎಂದು ಅಧ್ಯಯನವೊಂದು ಭರವಸೆ ನೀಡಿದೆ. ಅದರ ಅನುಸಾರ, ಪುರುಷರ ಜೀವಿತಾವಧಿ 4.9 ವರ್ಷ ಹೆಚ್ಚಾದರೆ, ಮಹಿಳೆಯರ ಜೀವಾವಧಿ 4.2 ವರ್ಷ ಹೆಚ್ಚಳ ಕಾಣಲಿದೆ.

ಜೀವಿತಾವಧಿ ಹೆಚ್ಚಾದರೂ ಜನರು ಹೆಚ್ಚಿನ ವರ್ಷವನ್ನು ಕಳಪೆ ಆರೋಗ್ಯದಲ್ಲಿಯೇ ಕಳೆಯಬೇಕಿದೆ ಎಂದು ಕೂಡ ತಿಳಿಸಿದೆ. ದಿ ಲ್ಯಾನ್ಸೆಟ್​ ಜರ್ನಲ್​ನಲ್ಲಿ ಪ್ರಕಟವಾದ 'ಗ್ಲೋಬಲ್​ ಬರ್ಡನ್​ ಆಫ್​ ಡಿಸೀಸ್​​ ಸ್ಟಡಿ'(ಜಿಬಿಡಿ) 2021ರ ವರದಿಯಲ್ಲಿ ಈ ವಿಷಯಗಳನ್ನು ತಿಳಿಸಲಾಗಿದೆ.

ಹೃದಯ ರಕ್ತನಾಳದ ಕಾಯಿಲೆಗಳು, ಕ್ಯಾನ್ಸರ್, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಮತ್ತು ಮಧುಮೇಹದಂತಹ ಸಾಂಕ್ರಾಮಿಕ, ತಾಯಿಯ, ನವಜಾತ ಶಿಶುಗಳು ಮತ್ತು ಪೌಷ್ಟಿಕಾಂಶದ ಕಾಯಿಲೆಗಳ, ಸಾಂಕ್ರಾಮಿಕವಲ್ಲದ ಕಾಯಿಲೆಗಳ ಎದುರಿಸುವಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿದ ಬದಲಾವಣೆ, ಸಾರ್ವಜನಿಕ ಆರೋಗ್ಯ ಮಾದರಿಗಳು ಕೂಡ ಇದಕ್ಕೆ ಕಾರಣವಾಗಿದೆ ಎಂದಿದ್ದಾರೆ.

2050ರ ಹೊತ್ತಿಗೆ ಜಾಗತಿಕ ಜೀವಿತಾವಧಿಯು 78.1ವರ್ಷಕ್ಕೆ ಏರಿಕೆ ಕಾಣುವ ನಿರೀಕ್ಷೆ ಇದೆ. ಇನ್ನು ಜಾಗತಿಕ ಆರೋಗ್ಯಯುತ ಜೀವಿತಾವಧಿಯು 2050ರ ಹೊತ್ತಿಗೆ 67.4 ವರ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ.

ಆದಾಗ್ಯೂ, 2022ರಿಂದ 2050ರ ಈ ಜೀವಿತಾವಧಿ ಮುನ್ಸೂಚಕ ಕಳೆದ ಮೂರು ದಶಕಗಳಿಗೆ ಹೋಲಿಕೆ ಮಾಡಿದರೆ ಕಡಿಮೆಯಾಗಿದೆ. ಇದಕ್ಕೆ ಕಾರಣ ಕೋವಿಡ್​ 19 ಸಾಂಕ್ರಾಮಿಕವಾಗಿದೆ ಎಂದು ಅಧ್ಯಯನ ಪತ್ತೆ ಮಾಡಿದೆ.

ಒಟ್ಟಾರೆ ಜೀವಿತಾವಧಿಯಲ್ಲಿ ಹೆಚ್ಚಳದ ಜೊತೆಗೆ, ಭೌಗೋಳಿಕವಾಗಿ ಜೀವಿತಾವಧಿಯಲ್ಲಿನ ಅಸಮಾನತೆಯು ಕಡಿಮೆಯಾಗುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಇನ್ಸುಟಿಟ್ಯೂಟ್​​ ಫಾರ್​ ಹೆಲ್ತ್​​ ಮೆಟ್ರಿಕ್ಸ್​ ಅಂಡ್​ ಎವಲ್ಯೂಷನ್​ ನಿರ್ದೇಶಕರಾದ ಕ್ರಿಸ್​ ಮುರ್ರೆ ತಿಳಿಸಿದ್ದಾರೆ.

ರೋಗದ ಮಧ್ಯಸ್ಥಿಕೆ, ಚಯಪಚಯನ ಅಪಾಯದ ಅಂಶಗಳ ನಡುವಳಿಕೆ ತಗ್ಗಿಸುವ ಗುರಿಯನ್ನು ಹೊಂದಿರುವ ನೀತಿ ಮಧ್ಯಸ್ಥಿಕೆಗಳ ಮೂಲಕ ಜಾಗತಿಕ ರೋಗದ ಹೊರೆಯಲ್ಲಿ ಕಡಿತವನ್ನು ವೇಗಗೊಳಿಸಲು ದೊಡ್ಡ ಅವಕಾಶವಿದೆ ಎಂದು ಮರ್ರೆ ತಿಳಿಸಿದ್ದಾರೆ.

ಹೆಚ್ಚುತ್ತಿರುವ ಚಯಾಪಚಯ ಮತ್ತು ಆಹಾರದ ಅಪಾಯಕಾರಿ ಅಂಶಗಳಿಂದ, ವಿಶೇಷವಾಗಿ ಅಧಿಕ ರಕ್ತದ ಸಕ್ಕರೆ, ಅಧಿಕ ಬಿಎಂಐ ಮತ್ತು ಅಧಿಕ ರಕ್ತದೊತ್ತಡದಂತಹ ವರ್ತನೆಯ ಮತ್ತು ಜೀವನಶೈಲಿ ಅಂಶಗಳಿಗೆ ಸಂಬಂಧಿಸಿದಂತಹವುಗಳನ್ನು ಮುಂದಿಟ್ಟುಕೊಂಡು ಜಾಗತಿಕ ಆರೋಗ್ಯದ ಭವಿಷ್ಯದ ಮೇಲೆ ಪ್ರಭಾವ ಬೀರಲು ನಮ್ಮ ಮುಂದೆ ಅಪಾರ ಅವಕಾಶವಿದೆ.

ಈ ಅಧ್ಯಯನವೂ ಜನರು ತಮ್ಮ ಜೀವಿತಾವಧಿಯನ್ನು ಹೆಚ್ಚು ದೀರ್ಘಕಾಲ ನಡೆಸಬಹುದು ಎಂದು ತಿಳಿಸಿದೆ. ಇದರ ಜೊತೆಗೆ ಅವರು ತಮ್ಮ ಕಳಪೆ ಆರೋಗ್ಯದ ಮೇಲೆ ಹೆಚ್ಚು ವ್ಯಯ ಮಾಡಬೇಕಾಗುತ್ತದೆ ಎಂದು ಕೂಡ ಸೂಚಿಸಿದೆ.(ಐಎಎನ್​ಎಸ್​)

ಇದನ್ನೂ ಓದಿ: ಸರಾಸರಿ ಜೀವಿತಾವಧಿ ಕಡಿಮೆ ಮಾಡಿದ ಸಾಂಕ್ರಾಮಿಕ ರೋಗಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.