ಗಾಳಿ ಸಹಿತ ಭಾರೀ ಮಳೆ...ವರುಣನ ಆರ್ಭಟಕ್ಕೆ ನೆಲಕಚ್ಚಿದ ಮನೆಗಳು

By

Published : Apr 23, 2020, 5:07 PM IST

thumbnail

ಚಿತ್ರದುರ್ಗ: ನಿನ್ನೆ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಮೈ ನಡುಕು ಹುಟ್ಟಿಸುವಂತಹ ದೃಶ್ಯಗಳು ಮೊಬೈಲ್​​​ನಲ್ಲಿ ಸೆರೆಯಾಗಿವೆ. ಮಳೆ ಹಾಗೂ ಗಾಳಿ ಅರ್ಭಟಕ್ಕೆ ಭರಮಸಾಗರ ಹೋಬಳಿಯ ಕೆಲ ಗ್ರಾಮಗಳು ನಲುಗಿ ಹೋಗಿದ್ದು, ರಹಮತುಲ್ಲಾ, ಗೌಸ್ ಪೀರ್ ಎಂಬವವರಿಗೆ ಸೇರಿದ ಗುಡಿಸಲಿನ ಮನೆಗಳು ನೆಲಕ್ಕೆ ಉರುಳಿವೆ. ಈ ಮೂಲಕ ಬಡ ಕುಟುಂಬಗಳು ಬೀದಿ ಪಾಲಾಗಿವೆ. ಮನೆ ಕಳೆದುಕೊಂಡವರು ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಗಂಗಸಮುದ್ರದ ಬಳಿ ಬಿರುಗಾಳಿಗೆ 8 ವಿದ್ಯುತ್ ಕಂಬಗಳು ನೆಲಕಚ್ಚಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.