ಪುನೀತ್‌ ಬರ್ತ್‌ಡೇ ದಿನವೇ 'ಕಬ್ಜ' ರಿಲೀಸ್‌; ಅಭಿಮಾನಿಗಳ ಸಂಭ್ರಮ- ವಿಡಿಯೋ

By

Published : Mar 17, 2023, 11:04 AM IST

thumbnail

ಇಂದು ಪುನೀತ್ ರಾಜ್​​ಕುಮಾರ್ ಹುಟ್ಟುಹಬ್ಬ. ಇದೇ ದಿನ ವಿಶ್ವಾದ್ಯಂತ ನಟ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಕಬ್ಜ' ಸಿನಿಮಾ ಜಗತ್ತಿನೆಲ್ಲೆಡೆ 4 ಸಾವಿರ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ 200ಕ್ಕೂ ಹೆಚ್ಚಿನ ಸ್ಕ್ರೀನ್​​ಗಳಲ್ಲಿ ತೆರೆ ಕಾಣುತ್ತಿದೆ. 

ರಾಜ್ಯದ 450 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್‌ ಆಗಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ಕಟೌಟ್​ ಹೂಗಳಿಂದ ಕಂಗೊಳಿಸುತ್ತಿತ್ತು. ಚಿತ್ರ ಮಂದಿರದೆದುರು ಮೊದಲ ದಿನದ ಶೋಗಳು ಹೌಸ್ ಫುಲ್ ಎಂದು ಬೋರ್ಡ್ ಹಾಕಲಾಗಿದೆ. ಇದೇ ಮೊದಲ ಬಾರಿಗೆ ಒಂದೇ ಕಟೌಟ್​​ನಲ್ಲಿ ಉಪೇಂದ್ರ, ಸುದೀಪ್ ಹಾಗೂ ಶಿವಣ್ಣ ಮಿಂಚಿದ್ದಾರೆ. ಈ ಕಟೌಟ್‌ನ ಎದುರು ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ.

ಕಬ್ಜ ನಿರ್ದೇಶಕ ಆರ್.ಚಂದ್ರು ಅವರ ಕನಸು 5 ಭಾಷೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹೈದರಾಬಾದ್, ಚೆನ್ನೈ, ದೆಹಲಿ ಹಾಗೂ ಮುಂಬೈ ಭಾಗದಲ್ಲಿ ಹೆಚ್ಚಿನ ಶೋಗಳು ಸಿಕ್ಕಿವೆ. ಚಿತ್ರ 1942ರ ರೌಡಿಸಂ ಕಥಾನಕ ಹೊಂದಿದೆ. ವಿಭಿನ್ನ ಟೈಟಲ್‌, ಟ್ರೇಲರ್‌ನಿಂದ ಸಿನಿಮಾ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು. 

ಇದನ್ನೂ ಓದಿ: ಕಬ್ಜ ದೊಡ್ಡ ಸಿನಿಮಾ ಆಗುತ್ತೆಂದು ಭವಿಷ್ಯ ನುಡಿದಿದ್ದ ಪುನೀತ್ ರಾಜ್​ಕುಮಾರ್

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.