ETV Bharat / health

ಭಾರತ ಸೇರಿ ಆಗ್ನೇಯ ಏಷ್ಯಾದ 294 ಮಿಲಿಯನ್​ ಜನರಲ್ಲಿ ಅಧಿಕ ರಕ್ತದೊತ್ತಡ! ಕಾರಣವೇನು? ನಿಯಂತ್ರಣ ಹೇಗೆ ಗೊತ್ತೇ? - Hypertension

author img

By ETV Bharat Karnataka Team

Published : May 17, 2024, 10:25 AM IST

ಅನಿಯಂತ್ರಿತ ರಕ್ತದೊತ್ತಡವು ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಮತ್ತು ಅಕಾಲಿಕ ಸಾವಿಗೂ ಕಾರಣವಾಗಬಹುದು ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ (IANS)

ನವದೆಹಲಿ: ಭಾರತ ಸೇರಿದಂತೆ ಆಗ್ನೇಯ ಏಷ್ಯಾ ದೇಶಗಳಲ್ಲಿ ಸುಮಾರು 294 ಮಿಲಿಯನ್ ಜನರು ಅಧಿಕ ರಕ್ತದೊತ್ತಡದೊಂದಿಗೆ ಜೀವಿಸುತ್ತಿದ್ದಾರೆ ಎಂದು ಆಗ್ನೇಯ ಏಷ್ಯಾದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಸೈಮಾ ವಾಝೆದ್​​ ಮಾಹಿತಿ ನೀಡಿದ್ದಾರೆ.

ಪ್ರತೀ ವರ್ಷ ಮೇ 17ರಂದು ವಿಶ್ವ ಅಧಿಕ ರಕ್ತದೊತ್ತಡ ದಿನಾಚರಿಸಲಾಗುತ್ತದೆ. ಈ ದಿನದ ಮೂಲಕ ಸದ್ದಿಲ್ಲದೆ ಜನರನ್ನು ಕಾಡುವ ಈ ಆರೋಗ್ಯ ಸಮಸ್ಯೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ಮತ್ತು ಅದನ್ನೆದುರಿಸುವ ಕುರಿತ ಕ್ರಮಗಳನ್ನು ತಿಳಿಸಿಕೊಡಲಾಗುತ್ತದೆ. ಈ ವರ್ಷದ ವಿಶ್ವ ಅಧಿಕ ರಕ್ತದೊತ್ತಡ ದಿನದ ಧ್ಯೇಯ ವಾಕ್ಯ ರಕ್ತದೊತ್ತಡದ ನಿಖರ ಅಳತೆ, ನಿಯಂತ್ರಣ, ಹೆಚ್ಚು ಕಾಲ ಬದುಕಿ ಎಂಬುದಾಗಿದೆ.

ಈ ಸಮಸ್ಯೆಯಲ್ಲಿ ಆರಂಭಿಕ ಪತ್ತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ಅರ್ಧದಷ್ಟು ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ. ವಯಸ್ಕರಲ್ಲಿ ಅರ್ಧದಷ್ಟು ಜನರಿಗೆ ಯಾವುದೇ ಮಾಹಿತಿ ಇಲ್ಲ. ಅಲ್ಲದೇ ಪ್ರತೀ 6ರಲ್ಲಿ ಒಬ್ಬ ವ್ಯಕ್ತಿಯಲ್ಲಿ ರಕ್ತದೊತ್ತಡ ನಿಯಂತ್ರಣದಲ್ಲಿಲ್ಲ. ಅನಿಯಂತ್ರಿತ ರಕ್ತದೊತ್ತಡವು ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಮತ್ತು ಅಕಾಲಿಕ ಸಾವಿಗೆ ಕಾರಣವಾಗಬಹುದು ಎನ್ನುತ್ತಾರೆ ಸೈಮಾ ವಾಝೆದ್​​.

ಅಧಿಕ ರಕ್ತದೊತ್ತಡಕ್ಕೆ ಕಾರಣವೇನು?: ಹೆಚ್ಚು ಉಪ್ಪಿನ ಅಂಶದ ಆಹಾರ ಸೇವನೆ, ತಂಬಾಕು ಮತ್ತು ಆಲ್ಕೋಹಾಲ್ ಸೇವನೆ, ಅನಾರೋಗ್ಯಕರ ಆಹಾರ ಅಭ್ಯಾಸ, ದೈಹಿಕ ನಿಷ್ಕ್ರಿಯತೆ, ಒತ್ತಡ ಮತ್ತು ವಾಯು ಮಾಲಿನ್ಯವೇ ಇದಕ್ಕೆ ಕಾರಣವಾಗಿದೆ.

ಟ್ರಾನ್ಸ್ ಫ್ಯಾಟ್‌ ಸೇವನೆ ನಿಯಂತ್ರಿಸಿ: ಅಧಿಕ ರಕ್ತದೊತ್ತಡ ನಿಯಂತ್ರಿಸುವ ಸಲುವಾಗಿ ಕೆಲವು ದೇಶಗಳು ತಮ್ಮ ರಾಷ್ಟ್ರೀಯ ಆಹಾರ ಪೂರೈಕೆ ಸರಪಳಿಗಳಿಂದ 'ಟ್ರಾನ್ಸ್ ಕೊಬ್ಬಿನಾಮ್ಲ'ಗಳನ್ನು ತೊಡೆದುಹಾಕಲು ಕ್ರಮ ಕೈಗೊಂಡಿವೆ.

ಇನ್ನು ಕೆಲವು ದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ನಿರ್ವಹಣೆಯನ್ನು ಸುಧಾರಿಸಲು ರಾಷ್ಟ್ರೀಯ ಗುರಿಗಳನ್ನು ಹೊಂದಿವೆ.(ಐಎಎನ್​ಎಸ್​)

ಇದನ್ನೂ ಓದಿ: ಭಾರತದಲ್ಲಿ ನಾಲ್ವರಲ್ಲಿ ಒಬ್ಬರಿಗಿದೆ ಬಿಪಿ; ಹೃದಯಾಘಾತಕ್ಕೂ ಕಾರಣವಾಗುತ್ತದೆ ಈ ಅಧಿಕ ರಕ್ತದೊತ್ತಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.