ಚಾಮುಂಡಿ ಬೆಟ್ಟ ತಪ್ಪಲಿನ ಶಾಮಿಯಾನ ಗೋದಾಮಿನಲ್ಲಿ ಬೆಂಕಿ- ವಿಡಿಯೋ

By

Published : Jun 1, 2023, 10:44 AM IST

thumbnail

ಮೈಸೂರು:  ಇಂದು ಬೆಳಗ್ಗೆ ಮೈಸೂರು ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಸಂಗಮ್ ಶಾಮಿಯಾನ ಹಾಗೂ ಡೆಕೋರೆಟೆಡ್‌ ಗೋದಾಮಿನಲ್ಲಿ ಬೆಂಕಿ ಅನಹಾತು ಸಂಭವಿಸಿದೆ. ಜ್ವಾಲೆಗೆ ಅಪಾರ ಮೌಲ್ಯದ ಶಾಮಿಯಾನ ಹಾಗೂ ಡೆಕೋರೇಷನ್ ವಸ್ತುಗಳು ನಾಶವಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಸತತ ಕಾರ್ಯಾಚರಣೆ ನಡೆಸಿ ಬೆಂಕಿ‌ ನಂದಿಸಿದ್ದಾರೆ.

ಈ ಗೋಡಾನ್ ಮೈಸೂರು ನಗರದ ಷರಿಫ್ ಎಂಬವರ ಅಳಿಯನಿಗೆ ಸೇರಿದ್ದಾಗಿದೆ. ಇವರು ನಗರದಲ್ಲಿ ಸಮಾರಂಭಗಳಿಗೆ ಶಾಮಿಯಾನ ಹಾಗೂ ಸ್ಟೇಜ್ ಹಾಕುವುದರಲ್ಲಿ ಪ್ರಸಿದ್ದಿ ಪಡೆದಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಶಾಮಿಯಾನ ಸಾಮಾಗ್ರಿಗಳನ್ನು ಹೊಂದಿದ್ದರು. 

ಸ್ಥಳಕ್ಕೆ ಮೈಸೂರು ನಗರದ ಸರಸ್ವತಿಪುರಂ, ಹೆಬ್ಬಾಳ ಹಾಗೂ ಬನ್ನಿಮಂಟಪದ ಅಗ್ನಿ ಶಾಮಕ ವಾಹನಗಳು ಸಿಬ್ಬಂದಿಯೊಂದಿಗೆ ಆಗಮಿಸಿ, ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸುವ ಕಾರ್ಯ ನಡೆಸಿ ಯಶಸ್ವಿಯಾದರು. ಸುತ್ತಮುತ್ತಲಿನ ಪ್ರದೇಶಗಳಿಗೆ ಬೆಂಕಿ ಹರಡದಂತೆ ಅಗ್ನಿ ಶಾಮಕ ದಳದವರು ತಪ್ಪಿಸಿದ್ದಾರೆ. ಕೃಷ್ಣ ರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ನಾಯಿಗಾಗಿ ಹವಣಿಸಿ ಬೋನಿಗೆ ಬಿದ್ದ ಚಿರತೆ- ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.