'ಭಾರತ ಒಂದು ಸುಂದರ ದೇಶ...': ಕೋಲ್ಕತ್ತಾದಲ್ಲಿ ವಿಶ್ವಕಪ್‌ ವಿಜೇತ ಅರ್ಜೆಂಟೀನಾ ತಂಡದ ಗೋಲ್‌ಕೀಪರ್‌ ಮಾರ್ಟಿನೆಜ್ ಸಂತಸ

By

Published : Jul 5, 2023, 8:34 AM IST

thumbnail

ಕೋಲ್ಕತ್ತಾ: ಸೌದಿ ಅರೇಬಿಯಾದಲ್ಲಿ ನಡೆದ ಫಿಫಾ ವಿಶ್ವಕಪ್​ನಲ್ಲಿ ಪೆನಾಲ್ಟಿ ಶೂಟೌಟ್ ಮೂಲಕ ತಡೆಗೋಡೆಯಾಗಿ ನಿಂತು ಅರ್ಜೆಂಟೀನಾ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಜಾನುಬಾಹು ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಅವರು ಮಂಗಳವಾರ ಕೋಲ್ಕತ್ತಾದ ಮೋಹನ್ ಬಗಾನ್ ಕ್ಲಬ್‌ನಲ್ಲಿ ಪೀಲೆ-ಮರಡೋನಾ-ಸೋಬರ್ಸ್ ಗೇಟ್ ಉದ್ಘಾಟಿಸಿದರು.

ಎಮಿಲಿಯಾನೊ ಮಾರ್ಟಿನೆಜ್ ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು. ಫುಟ್ಬಾಲ್ ತಾರೆಗೆ ಜೈಕಾರ ಹಾಕಿ ಬರಮಾಡಿಕೊಂಡರು.

ಇಲ್ಲಿನ ಮೋಹನ್​ ಬಗಾನ್​ ಕ್ರೀಡಾಂಗಣದಲ್ಲಿನ ಗೇಟ್​ಗೆ ಫುಟ್ಬಾಲ್​ ದಂತಕಥೆಗಳಾದ ಪೀಲೆ, ಡಿಯಾಗೋ ಮರಡೋನಾ, ಗಾರ್ಫೀಲ್ಡ್ ಸೋಬರ್ಸ್ ಅವರ ಹೆಸರಿಡಲಾಗಿದೆ. ಇದರ ಉದ್ಘಾಟನೆಗೆ ಎಮಿಲಿಯಾನೊ ಮಾರ್ಟಿನೆಜ್ ಅವರನ್ನು ಆಹ್ವಾನಿಸಲಾಗಿತ್ತು. ಹೀಗಾಗಿ ಜುಲೈ 3ರಿಂದ ಅವರು ಭಾರತ ಪ್ರವಾಸದಲ್ಲಿದ್ದಾರೆ.

"ಭಾರತಕ್ಕೆ ಬರುವುದು ಸಂತೋಷದ ವಿಷಯ. ನಿಜಕ್ಕೂ ನಾನು ಉತ್ಸುನಾಗಿದ್ದೇನೆ. ಇದು ಒಂದು ಕನಸು. ಭಾರತ ಒಂದು ಸುಂದರ ದೇಶ" ಎಂದು ಮಾರ್ಟಿನೆಜ್ ಹೊಗಳಿದರು. ಮೋಹನ್​ ಬಗಾನ್​ ಫುಟ್ಬಾಲ್​ ಕ್ಲಬ್​​ನಲ್ಲಿ ಇದಕ್ಕೂ ಮೊದಲು ಅರ್ಜೆಂಟೀನಾದ ಡಿಯಾಗೋ ಮರಡೋನಾ 11 ನಿಮಿಷಗಳ ಕಾಲ ಆಟವಾಡಿ ಮ್ಯಾಜಿಕ್ ಮಾಡಿದ್ದರು. ಇದೀಗ ಮತ್ತೊಬ್ಬ ಅರ್ಜೆಂಟೀನಾ ಆಟಗಾರ ಕ್ಲಬ್​ನಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ: SAFF Championships: ಕುವೈತ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತಕ್ಕೆ ಗೆಲುವು: 9ನೇ ಬಾರಿಗೆ ಪ್ರಶಸ್ತಿ ಗರಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.