ETV Bharat / sports

SAFF Championships: ಕುವೈತ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತಕ್ಕೆ ಗೆಲುವು: 9ನೇ ಬಾರಿಗೆ ಪ್ರಶಸ್ತಿ ಗರಿ

author img

By

Published : Jul 4, 2023, 10:47 PM IST

Updated : Jul 4, 2023, 11:03 PM IST

ಬೆಂಗಳೂರಿನ ಶ್ರೀಕಂಠೀರವ ಸ್ಟೇಡಿಯಂನಲ್ಲಿ ನಡೆದ ಸ್ಯಾಫ್​ ಚಾಂಪಿಯನ್​ಶಿಪ್​ನ ಫೈನಲ್​ನಲ್ಲಿ ಭಾರತ ತಂಡ ಗೆದ್ದು, ಒಂಬತ್ತನೇ ಬಾರಿಗೆ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

Etv Bharat
Etv Bharat

ಬೆಂಗಳೂರು: ಸ್ಯಾಫ್​ ಚಾಂಪಿಯನ್​ಶಿಪ್​ನ ಫೈನಲ್​ನಲ್ಲಿ ಭಾರತ ಪುರುಷರ ತಂಡ ರೋಚಕ ಗೆಲುವು ಸಾಧಿಸಿದೆ. ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ 5-4 ಗೋಲುಗಳಿಂದ ಕುವೈತ್ ತಂಡವನ್ನು ಸೋಲಿಸಿ ಒಂಬತ್ತನೇ ಬಾರಿಗೆ ಸ್ಯಾಫ್​ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದುಕೊಂಡಿದೆ.

ಬೆಂಗಳೂರಿನ ಶ್ರೀಕಂಠೀರವ ಸ್ಟೇಡಿಯಂನಲ್ಲಿ ಇಂದು ಭಾರತ ಮತ್ತು ಕುವೈತ್ ತಂಡಗಳು ಫೈನಲ್​ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಎರಡೂ ತಂಡಗಳು ರೋಚಕ ಹಣಾಹಣಿ ನಡೆಸಿದವು. ಮೊದಲಾರ್ಧದಲ್ಲಿ ಪ್ರಬಲ ಪೈಪೋಟಿ ನುಡುವೆ ತಲಾ ಒಂದು ಗೋಲು ಗಳಿಸಲು ಮಾತ್ರ ಸಾಧ್ಯವಾಯಿತು. ನಂತರ ಹೆಚ್ಚುವರಿ ಸಮಯದ ಅಂತ್ಯಕ್ಕೆ ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ 5-4ರಿಂದ ಕುವೈಟ್ ತಂಡವನ್ನು ಮಣಿಸಿತು. ಗುರ್‌ಪ್ರೀತ್ ಸಿಂಗ್ ಸಂಧು ಪೆನಾಲ್ಟಿಗಳನ್ನು ಉಳಿಸುವ ಮೂಲಕ ಹಾಲಿ ಚಾಂಪಿಯನ್​ ಪಟ್ಟವನ್ನು ಉಳಿಸಿಕೊಳ್ಳುವಂತೆ ಮಾಡಿದರು.

ಈ ಗೆಲುವಿನೊಂದಿಗೆ ಭಾರತ ಒಂಬತ್ತನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಈ ಮೊದಲು 1993, 1997, 1999, 2005, 2009, 2011, 2015, ಹಾಗೂ 2021ರಲ್ಲಿ ಭಾರತ ಫುಟ್ಬಾಲ್​ ತಂಡ ಸ್ಯಾಫ್​ ಚಾಂಪಿಯನ್​ಶಿಪ್​ ಗೆದ್ದಿತ್ತು. ಸೆಮಿಫೈನಲ್​ನಲ್ಲಿ ಮಣಿಸಿ ಭಾರತ 13ನೇ ಬಾರಿಗೆ ಫೈನಲ್​ಗೆ ಪ್ರವೇಶಿಸಿತ್ತು. ಸೆಮಿಫೈನಲ್​ನಲ್ಲೂ 120 ನಿಮಿಷಗಳ ಗೋಲುರಹಿತ ಆಟದಿಂದಾಗಿ ಕೊನೆಗೆ ಪೆನಾಲ್ಟಿ ಶೂಟೌಟ್​ ಪಂದ್ಯಕ್ಕೆ ಹೋಗಿತ್ತು. ಇದರಲ್ಲಿ ಭಾರತ ತನ್ನ ಅದ್ಭುತ ಕಾಲ್ಚಳಕ ಪ್ರದರ್ಶಿಸಿ 4-2ರಿಂದ ಪಂದ್ಯ ಗೆದ್ದಿತ್ತು. ಮತ್ತೊಂದು ಸೆಮಿಫೈನಲ್​ನಲ್ಲಿ ಬಾಂಗ್ಲಾದೇಶವನ್ನು ಕುವೈತ್​ 1-0 ಗೋಲಿನಿಂದ ಸೋಲಿಸಿ ಫೈನಲ್​ಗೆ ಬಂದಿತ್ತು.

ಇದನ್ನೂ ಓದಿ: Mark Taylor: 50 ವರ್ಷಗಳ ಟಾಪ್ 5 ಕ್ರಿಕೆಟಿಗರ ಪಟ್ಟಿಯಲ್ಲಿ ಇಬ್ಬರು ಭಾರತೀಯ ಬ್ಯಾಟರ್​ಗಳ ಹೆಸರು ಸೂಚಿಸಿದ ಟೇಲರ್

Last Updated :Jul 4, 2023, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.