ETV Bharat / sukhibhava

ತೂಕ ನಿರ್ವಹಣೆಯಲ್ಲಿ ಡಯಟ್​ಗಿಂತ ಹೆಚ್ಚು ಪರಿಣಾಮಕಾರಿ ದೈಹಿಕ ಚಟುವಟಿಕೆ

author img

By

Published : May 2, 2023, 11:45 AM IST

ದೇಹದ ತೂಕ ನಿರ್ವಹಣೆ ಮಾಡಲು ಹಲವರು ಹಲವು ರೀತಿಯ ವಿಧಾನಗಳನ್ನು ಆರಿಸಿಕೊಳ್ಳುವುದನ್ನು ನಾವು ಕಾಣುತ್ತೇವೆ. ಇದರಲ್ಲಿ ಡಯಟ್​, ದೈಹಿಕ ಚಟುವಟಿಕೆಗಳು ಪ್ರಮುಖವಾಗಿವೆ.

physical-activity-is-more-effective-than-diet-in-weight-management
physical-activity-is-more-effective-than-diet-in-weight-management

ದೇಹದ ತೂಕ ನಷ್ಟವಾದ ಬಳಿಕ ಮತ್ತೆ ತೂಕ ಹೆಚ್ಚಳಗೊಳ್ಳದಂತೆ ಕಾಪಾಡುವುದು ಕೂಡ ಒಂದು ಸವಾಲಿನ ಕೆಲಸ. ಇದಕ್ಕಾಗಿ ಅನೇಕರು ಡಯಟ್​ ಮೊರೆ ಹೋದರೆ, ಮತ್ತೆ ಕೆಲವರು ದೈಹಿಕ ಚಟುವಟಿಕೆಗೆ ಆದ್ಯತೆ ನೀಡುತ್ತಾರೆ. ಆದರೆ, ಡಯಟ್​ಗಿಂತಲೂ ಹೆಚ್ಚಾಗಿ ದೈಹಿಕ ಚಟುವಟಿಕೆಗಳು ತೂಕ ಕಳೆದುಕೊಳ್ಳುವಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಹೊಸ ಅಧ್ಯಯನ ತಿಳಿಸಿದೆ. ಕೊಲರಾಡೊ ವಿಶ್ವವಿದ್ಯಾಲಯದ ಅನ್​ಸ್ಚುಟ್ಜ್​ ಮತ್ತು ಸ್ವಾಸ್ಥ್ಯ ಕೆಂದ್ರ ಈ ಅಧ್ಯಯನ ನಡೆಸಿದೆ.

ಅಧ್ಯಯನದಲ್ಲಿ ಜನರು ದೀರ್ಘಕಾಲ ತೂಕ ಉಳಿಸಿಕೊಳ್ಳಲು ಏಕೆ ಕಷ್ಟಪಡುತ್ತಾರೆ ಎಂಬುದರ ಕುರಿತು ತಿಳಿಸಲಾಗಿದೆ. ಇಲ್ಲಿ ಯಶಸ್ವಿಯಾಗಿ ತೂಕ ಕಳೆದುಕೊಳ್ಳುವ ಮಂದಿ ಮತ್ತೆ ತೂಕ ಹೆಚ್ಚಳವಾಗದಂತೆ ತಡೆಯಲು ದೈಹಿಕ ಚಟುವಟಿಕೆಯಲ್ಲಿ ತೊಡಗುತ್ತಾರೆ. ಇವುಗಳ ನಡುವಿನ ಸಂಬಂಧಗಳ ಪುರಾವೆ ಒದಗಿಸಲು ಬದಲಿ ವ್ಯಾಯಾಮ ಪ್ರಮುಖ ಪಾತ್ರವಹಿಸುತ್ತದೆ ಎಂದು ಅಧ್ಯಯನ ಸ್ಪಷ್ಟಪಡಿಸುತ್ತದೆ ಎಂದು ಡೇನಿಯಲ್​ ಒಸ್ಟೆನ್​ಡಾರ್ಫ್​ ತಿಳಿಸಿದ್ದಾರೆ.

ಯಶಸ್ವಿಯಾಗಿ ತೂಕ ನಷ್ಟಕ್ಕೆ ಒಳಗಾದವರು ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗುವ ಮೂಲಕ ಶಕ್ತಿ, ಸಮತೋಲನವನ್ನು ಕಾಪಾಡುವುದರೊಂದಿಗೆ ಮತ್ತೆ ತೂಕ ಹೆಚ್ಚಳವಾಗದಂತೆ ನೋಡಿಕೊಳ್ಳುತ್ತಾರೆ. ಅಧ್ಯಯನಲ್ಲಿ ಯಶಸ್ವಿ ತೂಕ ನಷ್ಟ ಎಂದರೆ ವ್ಯಕ್ತಿಯೊಬ್ಬರು ಒಂದು ವರ್ಷದವರೆಗೆ 30 ಪೌಂಡ್ ಅಥವಾ ಅದಕ್ಕಿಂತ ಹೆಚ್ಚು ಕಡಿಮೆ ದೇಹದ ತೂಕ ನಿರ್ವಹಣೆ ಮಾಡುವುದಾಗಿದೆ.

ಈ ಕುರಿತು ನಡೆಸಿದ ಸಂಶೋಧನೆಯಲ್ಲಿ ಸ್ಥೂಲಕಾಯತೆ ಹೊಂದಿರುವವರು ಮತ್ತು ಯಶಸ್ವಿ ತೂಕ ನಷ್ಟ ಹೊಂದಿರುವವರು ಒಂದು ದಿನದಲ್ಲಿ ಒಂದೇ ರೀತಿಯ ಆಹಾರವನ್ನು ಸೇವಿಸಿರುತ್ತಾರೆ. ತೂಕ ನಿರ್ವಹಣೆಯಲ್ಲಿ ಹೆಚ್ಚಿನ ಮಟ್ಟದ ದೈಹಿಕ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸಿದೆ ಎಂದು ವಿಕ್ಟೋರಿಯಾ ಎ ಕ್ಯಾಟೆನಚಿ ತಿಳಿಸಿದ್ದಾರೆ.

ದೈಹಿಕ ಚಟುವಟಿಕೆಯ ಪ್ರಾಮುಖ್ಯತೆ: ಸಾಮಾನ್ಯ ದೇಹದ ತೂಕ ನಿಯಂತ್ರಣದೊಂದಿಗೆ, ಅಧಿಕ ಬೊಜ್ಜು ಹೊಂದಿರುವವರ ನಿಯಂತ್ರಣವನ್ನು ನಡೆಸಲಾಗಿದೆ. ಈ ಎರಡು ಗುಂಪುಗಳನ್ನು ಯಶಸ್ವಿ ತೂಕ ನಿರ್ವಹಣೆ ಸಾಮ್ಯತೆ ತಿಳಿಯಲಾಗಿದೆ. ಈ ವೇಳೆ ದೈಹಿಕ ಚಟುವಟಿಕೆಯಲ್ಲಿ ತೊಡಗಿರುವವರು 150 ಪೌಂಡ್​ ತೂಕ ಹೊಂದಿದ್ದರೆ, ಸ್ಥೂಲಕಾಯತೆ ಹೊಂದಿರುವ ನಿಯಂತ್ರಣ ಗುಂಪು 213 ಪೌಂಡ್​ ದೇಹ ತೂಕ ಹೊಂದಿದ್ದರು.

ಗೋಲ್ಡ್​ ಸ್ಯಾಂಡರ್ಡ್​ ಡಬ್ಲಿ ಲೇಬೆಲ್ಡ್​ ವಾಟರ್​​ ಮಾದರಿ ಬಳಸಿಕೊಂಡು ಅಧ್ಯಯನ ನಡೆಸಲಾಗಿದೆ. ಇದರಲ್ಲಿ ವ್ಯಕ್ತಿ ಎರಡು ವಾರಗಳ ಕಾಲ ಲೇಬಲ್​ ಮಾಡಿದ ನೀರನ್ನು ಸೇವಿಸಿದ ಬಳಿಕ ಪರೀಕ್ಷೆ ನಡೆಸಿ, ಅವರ ಶಕ್ತಿಯ ವೆಚ್ಚವನ್ನು ಅಳೆಯಲಾಗಿದೆ. ಈ ಡಬ್ಲಿ ಲೇಬಲ್ಡ್​ ನೀರಿನಲ್ಲಿ ಜಲಜನಕ ಮತ್ತು ಆಕ್ಸಿಜನ್​ ಪ್ರಮಾಣ ಬದಲಾಯಿಸಲಾಗಿದೆ. ಈ ಮಾದರಿಯೂ ದೈನಂದಿನ ಶಕ್ತಿಯ ವೆಚ್ಚವಾಗಿದೆ.

ಇದನ್ನೂ ಓದಿ: ಮಾನಸಿಕ ಆರೋಗ್ಯಕ್ಕೆ ಔಷಧಕ್ಕಿಂತ ಪರಿಣಾಮಕಾರಿ ದೈಹಿಕ ಚಟುವಟಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.