ETV Bharat / sukhibhava

ಸ್ತನ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುವಲ್ಲಿ ಅಗಸೆ ಬೀಜಗಳು ಸಹಕಾರಿ

author img

By ETV Bharat Karnataka Team

Published : Dec 9, 2023, 6:04 PM IST

Consuming flaxseed can help lower the risk of breast cancer
Consuming flaxseed can help lower the risk of breast cancer

ಜಠರ ಕರುಳಿನ ಸೂಕ್ಷ್ಮಾಣುಗಳು ಮಾನವ ದೇಹದಲ್ಲಿನ ಯಾವುದೇ ಡಯಟ್​​ ಸಂಯೋಜನೆಯನ್ನು ರೂಪಾಂತರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ನ್ಯೂಯಾರ್ಕ್​: ಅಗಸೆ ​ಬೀಜಗಳನ್ನು ಸೇವಿಸುವುದರಿಂದ ಕರುಳಿನ ಬ್ಯಾಕ್ಟೀರಿಯಾಗಳನ್ನು ರೂಪಾಂತರಿಸಿ, ಸ್ತನ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ ಎಂದು ಹೊಸ ಅಧ್ಯಯನ ತೋರಿಸಿದೆ.

ಜರ್ನಲ್​ ಮೈಕ್ರೋ ಬಯೋಲಾಜಿ ಸ್ಪೆಕ್ಟ್ರಂನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಅಗಸೆ ಬೀಜದಲ್ಲಿನ ಲಿಗ್ನನ್ಸ್​​ಗಳು ಕರುಳಿನ ಸೂಕ್ಷ್ಮಾಣುಗಳು ಮತ್ತು ಮ್ಯಾಮರಿ ಗ್ಲಾಂಡ್​ ಮೈಕ್ರೋಆರ್​ಎನ್​ಗಳ (ಎಂಐಎಆರ್​ಎನ್​ಎ) ನಡುವಿನ ಪ್ರಭಾವವನ್ನು ತಿಳಿಸಿದೆ.

ಸ್ತನ ಕ್ಯಾನ್ಸರ್​​ ಜೀನ್​ಗಳನ್ನು ಈ ಎಂಐಆರ್​ಎನ್​ಎಗಳು ನಿಯಂತ್ರಿಸುತ್ತವೆ. ಇದು ವಲಸೆ ಮತ್ತು ನಿಯಂತ್ರಿತ ಕೋಶ ಪ್ರೊಲಿಫೆರೆಷನ್​ ಜೀನ್​ ಅನ್ನು ಹೊಂದಿರುತ್ತದೆ. ಜಠರ ಕರುಳಿನ ಸೂಕ್ಷ್ಮಾಣುಗಳು ಮಾನವ ದೇಹದಲ್ಲಿನ ಯಾವುದೇ ಡಯಟ್​​ ಸಂಯೋಜನೆಯನ್ನು ರೂಪಾಂತರಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ ಎಂದು ಯುನಿವರ್ಸಿಟಿ ಆಫ್​ ನೆಬ್ರಸ್ಕಾ-ಲಿಕಾಯಿನ್​ನ ಅಸಿಸ್ಟಂಟ್​ ಪ್ರೊ. ಜೆನ್ನಿಫರ್​ ಔಚುಟುಂಗ್​ ತಿಳಿಸಿದ್ದಾರೆ.

ಹೆಣ್ಣು ಇಲಿಗಳ ಮೇಲೆ ಅಧ್ಯಯನ: ಈ ಅಧ್ಯಯನದಲ್ಲಿ ಫ್ಲೆಕ್ಸ್​ ಸೀಡ್​ನಲ್ಲಿನ ಸಮೃದ್ಧ ಅಂಶಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಮೈಕ್ರೋಬಯೋಟಾ ಮತ್ತು ಸಸ್ತನಿ ಗ್ರಂಥಿ ಎಂಐಎಆರ್​ಎನ್​ಎಗಳ ನಡುವಿನ ಸಂಬಂಧವನ್ನು ನಿರ್ವಹಿಸಬಹುದು ಎಂದು ನಿರ್ಧರಿಸಲಾಗಿದೆ. ಸಂಶೋಧಕರು ಹೆಣ್ಣು ಇಲಿಗಳಿಗೆ ಅಗಸೆ ಬೀಜದ ಲಿಗ್ನಾನ್ ಘಟಕಗಳನ್ನು ತಿನ್ನಿಸಿದರು, ಕರುಳಿನ ಸೆಕಲ್ ಮೈಕ್ರೋಬಯೋಟಾ ಪ್ರೊಫೈಲ್‌ಗಳು ಸಸ್ತನಿ ಗ್ರಂಥಿಯಲ್ಲಿನ ಮೈಆರ್‌ಎನ್‌ಎ ಅಭಿವ್ಯಕ್ತಿಗೆ ಸಂಬಂಧಿಸಿವೆ ಎಂಬುದನ್ನು ನಿರ್ಧರಿಸಿದ್ದಾರೆ.

ಹೆಣ್ಣು ಇಲಿಗಳ ಮೈಕ್ರೊಬಯೊಟೊ ಮತ್ತು ಲಿಗ್ನಾನ್​ ಮೇಲೆ ಅಗಸೆ ಬೀಜದ ಪರಿಣಾಮ ಏನು ಎಂಬುದನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ.

ಲಿಗ್ನಾನ್​ ಫೈಬರ್​ ಸಂಬಂಧಿ ಅಂಶವೂ ಅನೇಕ ಆಹಾರದಲ್ಲಿ ಪತ್ತೆಯಾಗಿದೆ. ಸ್ತನ ಕ್ಯಾನ್ಸರ್​ ಮೆನೊಪಸ್​ ಬಳಿಕ ಮಹಿಳೆಯರಲ್ಲಿ ಸಾವಿಗೆ ಕಾರಣವಾಗುತ್ತಿರುವ ಕ್ಯಾನ್ಸರ್​ ಆಗಿದೆ.

ಅಗಸೆ ಬೀಜದ ಎಣ್ಣೆ ಲಿಗ್ನಾನ್‌ಗೆ ಜೈವಿಕ ಕ್ರಿಯಾಶೀಲ ಮೆಟಾಬಾಲೈಟ್‌ಗಳನ್ನು ಬಿಡುಗಡೆ ಮಾಡಲು ಸೂಕ್ಷ್ಮಜೀವಿಯ ಸಂಸ್ಕರಣೆಯ ಅಗತ್ಯವಿರುತ್ತದೆ, ಚಯಾಪಚಯ ಕ್ರಿಯೆಯ ಸಮಯದಲ್ಲಿ ಉತ್ಪತ್ತಿಯಾಗುವ ಸಣ್ಣ-ಅಣು ರಾಸಾಯನಿಕಗಳು ರೋಗದ ಮೇಲೆ ಪ್ರಭಾವ ಬೀರುತ್ತವೆ. ಈ ಸಂದರ್ಭದಲ್ಲಿ ಆಂಟಿಟ್ಯೂಮರ್ ಪರಿಣಾಮಗಳನ್ನು ಹೊಂದಿರುತ್ತದೆ. ಈ ಫಲಿತಾಂಶಗಳು ದೃಢವಾದರೇ ಮೈಕ್ರೋಬಯೊ ಡಯಟ್​ ಮಧ್ಯಸ್ಥಿಕೆಯೊಂದಿಗೆ ಸ್ತನ ಕ್ಯಾನ್ಸರ್​ ತಡೆಯುವ ಹೊಸ ಟಾರ್ಗೆಟ್​ ಆಗಿದೆ ಎಂದು ಟೊರೊಂಟೊ ಯುನಿವರ್ಸಿಟಿಯ ಅಸಿಸ್ಟಂಟ್​ ಪ್ರೊಫೆಸರ್​ ಎಲೆನಾ ಎಂ ಕೊಮೆಲಿ ತಿಳಿಸಿದ್ದಾರೆ. (ಐಎಎನ್​ಎಸ್​​)

ಇದನ್ನೂ ಓದಿ: ಚಳಿಗಾಲದಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಗೆ ಬೇಕು ಈ ವಿಟಮಿನ್​ಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.