ETV Bharat / sukhibhava

ಚಳಿಗಾಲದಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಗೆ ಬೇಕು ಈ ವಿಟಮಿನ್​ಗಳು

author img

By ETV Bharat Karnataka Team

Published : Dec 6, 2023, 12:51 PM IST

ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವಲ್ಲಿ ಆಹಾರದ ಪಾತ್ರವೂ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ತಜ್ಞರು ನಿತ್ಯ ಹಲವು ವಿಟಮಿನ್​ ಹೊಂದಿರುವ ಆಹಾರಗಳನ್ನು ಸೇವಿಸಬೇಕು.

these-vitamins-are-needed-to-boost-your-immune-system
these-vitamins-are-needed-to-boost-your-immune-system

ಹೈದರಾಬಾದ್​: ಅನೇಕ ರೋಗ ಮತ್ತು ಅಸ್ವಸ್ಥತೆಗಳಿಂದ ನಮ್ಮ ದೇಹವನ್ನು ರಕ್ಷಿಸುವಲ್ಲಿ ರೋಗ ನಿರೋಧಕ ಶಕ್ತಿ (ಇಮ್ಯೂನಿಟಿ) ಪಾತ್ರ ಪ್ರಮುಖವಾಗಿದೆ. ಈ ಇಮ್ಯೂನಿಟಿ ಬಲವಾಗಿದ್ದು, ವೈರಸ್​​​ ಮತ್ತು ಬ್ಯಾಕ್ಟೀರಿಯಗಳು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ಸಾಧ್ಯವಿಲ್ಲ. ಇಂತಹ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುವಲ್ಲಿ ಆಹಾರದ ಪಾತ್ರವೂ ಪ್ರಮುಖವಾಗಿದೆ. ಈ ಹಿನ್ನೆಲೆ ತಜ್ಞರು ನಿತ್ಯ ಹಲವು ವಿಟಮಿನ್​ ಹೊಂದಿರುವ ಆಹಾರಗಳನ್ನು ಸೇವಿಸಬೇಕು. ಇದರಿಂದಲೇ ಆರೋಗ್ಯಯುತವಾಗಿ ಇರಲು ಸಾಧ್ಯ ಎಂದು ಸಲಹೆ ನೀಡುತ್ತಾರೆ. ಯಾವ ವಿಟಮಿನ್​ ಯಾವ ರೀತಿ ಸಹಾಯ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ

ವಿಟಮಿನ್​ ಸಿ: ವಿಟಮಿನ್​ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುವಲ್ಲಿ ಪ್ರಮುಖವಾಗಿದೆ. ಈ ವಿಟಮಿನ್​ ಕೊರತೆ ಹೊಂದಿರುವ ಜನರು ಆನಾರೋಗ್ಯದಿಂದ ಬಳಲುವ ಸಾಧ್ಯತೆ ಹೆಚ್ಚಿದೆ. ಇದೇ ಕಾರಣಕ್ಕೆ ತಜ್ಞರು ವಿಟಮಿನ್​ ಸಿ ಹೆಚ್ಚಿರುವ ಆಹಾರ ಸೇವಿಸಬೇಕು ಎನ್ನುತ್ತಾರೆ. ಸಿಟ್ರಸ್​ ಹಣ್ಣುಗಳಲ್ಲಿ ಅಂದರೆ, ನಿಂಬೆ, ಕಿತ್ತಳೆಯಂತಹ ಆಹಾರದಲ್ಲಿ ವಿಟಮಿನ್​ ಸಿ ಹೆಚ್ಚಿರುತ್ತದೆ. ಇದರ ಜೊತೆಗೆ ದೊಡ್ಡ ಮೆಣಸಿನಕಾಯಿ, ಲೆಟಿಸ್​ನಂತಹ ಆಹಾರಗಳನ್ನು ಸೇವಿಸಬಹುದು. ಇವು ಕೇವಲ ವಿಟಮಿನ್​ ಸಿ ಯಿಂದ ದೇಹವನ್ನು ರಕ್ಷಿಸುವ ಜೊತೆಗೆ ದೇಹದಲ್ಲಿ ಕೆಟ್ಟ ಕೊಬ್ಬು ಸಂಗ್ರಹವನ್ನು ಶೇಖರಣೆ ಆಗುವುದನ್ನು ತಡೆಯುತ್ತದೆ.

ವಿಟಮಿನ್​ ಬಿ6: ವಿಟಮಿನ್​ ಬಿ6 ದೇಹದ ರೋಗ ನಿರೋಧಕ ವ್ಯವಸ್ಥೆ ಕಾರ್ಯಾಚರಣೆ ಸುಧಾರಣೆ ಮಾಡುತ್ತದೆ. ಇದು ಹೊರಗಿನ ಸೋಂಕಿನಿಂದ ದೇಹವನ್ನು ರಕ್ಷಿಸುತ್ತದೆ. ವಿಟನಿಮ್​ ಬಿ6 ಬಾಳೆ ಹಣ್ಣು, ಆಲೂಗಡ್ಡೆ, ಕೋಳಿ ಮಾಂಸ, ಮೀನು ಮತ್ತು ಕಾಳುಗಳಲ್ಲಿ ಹೆಚ್ಚಿದ್ದು, ಅವುಗಳನ್ನು ಆಹಾರದ ಭಾಗವಾಗಿಸುವುದರಿಂದ ಪ್ರಯೋಜನವನ್ನು ಪಡೆಯಬಹುದು.

ವಿಟಮಿನ್​ ಇ: ವಿಟಮಿನ್​ ಇ ದೇಹಕ್ಕೆ ಪ್ರಭಾವಶಾಲಿ ಆ್ಯಂಟಿಆಕ್ಸಿಡೆಂಟ್​ ರೀತಿ ವರ್ತಿಸುತ್ತದೆ. ಇದು ಬ್ಯಾಕ್ಟೀರಿಯಾ, ವೈರಸ್​ ಮತ್ತು ಇತರ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಅಲ್ಲದೇ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದಂತೆ ತಡೆಯುತ್ತದೆ. ವಿಟಮಿನ್​ ಇ, ಸೂರ್ಯಕಾಂತಿ, ಬೀಜಗಳು, ಕಾಳುಗಳು, ಬಾದಾಮಿ, ಲೆಟಿಸ್​, ನಟ್ಸ್​​ ಮುಂತಾದವುಗಳಲ್ಲಿ ಸಮೃದ್ಧವಾಗಿದೆ.

ವಿಟಮಿನ್​ ಎ: ಊರಿಯುತ ವಿರೋಧಿ ಗುಣವೊಂದಿರುವ ಈ ವಿಟಮಿನ್​ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್​ ಎ ಕಣ್ಣಿನ ಆರೋಗ್ಯ ವೃದ್ಧಿಗೆ ಸಹಾಯಕವಾಗಿದೆ. ಕ್ಯಾರೆಟ್​, ಕಲ್ಲಂಗಡಿ, ಕುಂಬಳಕಾಯಿ ಸೇರಿದಂತೆ ಹಲವುಗಳಲ್ಲಿ ವಿಟಮಿನ್​ ಎ ಸಮೃದ್ಧವಾಗಿ ಸಿಗುತ್ತದೆ.

ವಿಟಮಿನ್​ ಡಿ: ಊರಿಯುತ ವಿರೋಧಿ ಮತ್ತು ಇಮ್ಯುನೊರೆಗ್ಯುಲೇಟರಿ ಗುಣ ವಿಟಮಿನ್​ ಡಿ ಅಲ್ಲಿ ಇದ್ದು, ಇದು ಕೂಡ ರೋಗ ನಿರೋಧಕ ವ್ಯವಸ್ಥೆಯ ಕಾರ್ಯಾಚರಣೆ ಕ್ರಿಯಾಶೀಲವಾಗಿರಲು, ರಕ್ಷಿಸಲು ಸಹಾಯ ಮಾಡುತ್ತದೆ. ವಿಟಮಿನ್​ ಡಿ ನೈಸರ್ಗಿಕವಾಗಿ ಸೂರ್ಯನಿಂದ ಲಭ್ಯವಾಗುತ್ತದೆ. ಈ ಹಿನ್ನೆಲೆ ಪ್ರತಿನಿತ್ಯ ಅರ್ಥಗಂಟೆ ಸೂರ್ಯನ ಅಡಿ ನಿಲ್ಲಬೇಕು. ಇದರ ಹೊರತಾಗಿ ಮೀನು, ಹಾಲು, ಕಾಳು ಮುಂತಾದವುಗಳಲ್ಲಿ ಲಭ್ಯವಿದೆ. ವಿಟಮಿನ್​ ಡಿ ಮೂಳೆಯ ಆರೋಗ್ಯ ಬಲಗೊಳಿಸುತ್ತದೆ

(ಸೂಚನೆ: ಈ ವಿಟಮಿನ್​ಗಳ ಕೊರತೆಯನ್ನು ನೀವು ಅನುಭವಿಸುತ್ತಿದ್ದು, ಅವುಗಳನ್ನು ಪೂರಕಗಳಲ್ಲಿ ಸೇವಿಸುವ ಮುನ್ನ ವೈದ್ಯರ ಸಲಹೆಯನ್ನು ಪಡೆದು ಮುಂದುವರೆಯುವುದು ಅಗತ್ಯ).

ಇದನ್ನೂ ಓದಿ: ವಿಟಮಿನ್​ ಡಿ ಪೂರಕಗಳು ಮಕ್ಕಳಲ್ಲಿ ಅಸ್ತಮಾ ತಡೆಯುವಲ್ಲಿ ಸಹಾಯಕವಾಗಬಲ್ಲವಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.