ETV Bharat / state

ಗಾಯಾಳುವನ್ನ ಜೀಪ್​​ನಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮುದ್ದೇಬಿಹಾಳ ಪೊಲೀಸರು

author img

By

Published : May 26, 2021, 10:03 PM IST

muddebihala-police-transported-the-victim-to-hospital-in-jeep
ಮಾನವೀಯತೆ ಮೆರೆದ ಮುದ್ದೇಬಿಹಾಳ ಪೊಲೀಸರು

ರಕ್ತಸ್ರಾವ ತಡೆಯುವುದಕ್ಕಾಗಿ ಪಟ್ಟಣದ ಯುವಕರಾದ ಜಾಕೀರ್​ ಬಾಗವಾನ, ಯಮನೂರಿ ಮೇಲಿನಮನಿ ತಮ್ಮಲ್ಲಿದ್ದ ಕರವಸ್ತ್ರವನ್ನೇ ಆತನ ತಲೆಗೆ ಬಿಗಿದು ಕಟ್ಟಿ ರಕ್ತಸ್ರಾವ ನಿಲ್ಲುವಂತೆ ಮಾಡಿದರು. ತಕ್ಷಣ ಆ್ಯಂಬುಲೆನ್ಸ್​​​​​​ ಕರೆ ಮಾಡಿದ್ದು, ಬರುವುದು ವಿಳಂಬವಾಗುತ್ತಿರುವುದನ್ನು ಅರಿತು ಆತನನ್ನು ಪೊಲೀಸ್ ಜೀಪಿನಲ್ಲಿಯೇ ಆಸ್ಪತ್ರೆಗೆ ಕರೆದೊಯ್ದರು.

ಮುದ್ದೇಬಿಹಾಳ: ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಮೂರ್ಛೆ ಹೋಗಿ ಬಿದ್ದು, ತಲೆ ಒಡೆದುಕೊಂಡು ರಕ್ತಸ್ರಾವದಿಂದ ಬಳಲುತ್ತಿದ್ದ ವೇಳೆ ಪೊಲೀಸರೇ ಸ್ವತಃ ತಮ್ಮ ಜೀಪಿನಲ್ಲಿ ಕೂಡಿಸಿಕೊಂಡು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದು ಮಾನವೀಯತೆ ಮೆರೆದ ಘಟನೆ ನಡೆದಿದೆ.

ಮಾನವೀಯತೆ ಮೆರೆದ ಮುದ್ದೇಬಿಹಾಳ ಪೊಲೀಸರು

ಓದಿ: ದೊರೆಸ್ವಾಮಿ ಅಗಲಿಕೆ ತೀವ್ರ ನೋವುಂಟುಮಾಡಿದೆ: ಸಾಲುಮರದ ತಿಮ್ಮಕ್ಕ ಸಂತಾಪ

ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿ ತಾಲೂಕಿನ ಬಿಜ್ಜೂರ ಗ್ರಾಮದ ವ್ಯಕ್ತಿ ಶಿವಪ್ಪ ಚಲವಾದಿ ಎಂಬಾತನಿಗೆ ಫಿಟ್ಸ್​​ನಿಂದ ರಸ್ತೆಯಲ್ಲಿ ಬಿದ್ದಿದ್ದಾನೆ. ಈ ರಭಸಕ್ಕೆ ಆತನ ತಲೆ ಒಡೆದು ರಕ್ತಸ್ರಾವವಾಗಿದೆ. ಇದನ್ನು ಗಮನಿಸಿ ಸ್ಥಳೀಯರು ತಕ್ಷಣ ಬಸವೇಶ್ವರ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಎ.ಬಿ.ಟಕ್ಕಳಕಿ, ಸಿಬ್ಬಂದಿ ಶಿವಾನಂದ ಮಟ್ಟಿಹಾಳ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಅಧ್ಯಕ್ಷ ಅರುಣ ಪಾಟೀಲ್​ ಮೊದಲಾದವರು ಆತನನ್ನು ನಿಲ್ದಾಣದಲ್ಲಿ ಕೆಲಕಾಲ ಕರೆದುಕೊಂಡು ಹೋಗಿ ಕೂಡಿಸಿದರು.

ರಕ್ತಸ್ರಾವ ತಡೆಯುವುದಕ್ಕಾಗಿ ಪಟ್ಟಣದ ಯುವಕರಾದ ಜಾಕೀರ ಬಾಗವಾನ, ಯಮನೂರಿ ಮೇಲಿನಮನಿ ತಮ್ಮಲ್ಲಿದ್ದ ಕರವಸ್ತ್ರವನ್ನೇ ಆತನ ತಲೆಗೆ ಬಿಗಿದು ಕಟ್ಟಿ ರಕ್ತಸ್ರಾವ ನಿಲ್ಲುವಂತೆ ಮಾಡಿದರು. ತಕ್ಷಣ ಆ್ಯಂಬುಲೆನ್ಸ್​​​​​​ಗೆ​ ಕರೆ ಮಾಡಿದ್ದು, ಬರುವುದು ವಿಳಂಬವಾಗುತ್ತಿರುವುದನ್ನು ಅರಿತು ಆತನನ್ನು ಪೊಲೀಸ್ ಜೀಪಿನಲ್ಲಿಯೇ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಿದ ಬಳಿಕ ಆತನನ್ನು ಮರಳಿ ಊರಿಗೆ ತೆರಳುವಂತೆ ಪೊಲೀಸರು ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.