ETV Bharat / state

ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ್ದ "ದಂಡಿ" ಸತ್ಯಾಗ್ರಹ ಬೆಳ್ಳಿತೆರೆಗೆ: ಉತ್ತರ ಕನ್ನಡದಲ್ಲಿ ಚಿತ್ರೀಕರಣ

author img

By

Published : Mar 18, 2021, 6:56 PM IST

ದಂಡಿ
ದಂಡಿ

ಉಪ್ಪಿನ ಸತ್ಯಾಗ್ರಹದಂತಹ ಚಳುವಳಿ ವೇಳೆ ಮಹಾತ್ಮ ಗಾಂಧೀಜಿಯೊಂದಿಗೆ ಹೋರಾಟಕ್ಕೆ ಧುಮುಕಿದ್ದ ಇಲ್ಲಿನ ಅದೆಷ್ಟೋ ಮಂದಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಇದೀಗ ಈ ಸ್ವಾತಂತ್ರ್ಯ ಸಂಗ್ರಾಮ ದಂಡಿ ರೂಪದಲ್ಲಿ ಬೆಳ್ಳಿತೆರೆಯಲ್ಲಿ ಮೂಡಿಬರಲಿದ್ದು, ಜಿಲ್ಲೆಯಲ್ಲಿ ಇಂದಿನಿಂದ ಚಿತ್ರತಂಡ ಚಿತ್ರೀಕರಣ ಪ್ರಾರಂಭಿಸಿದೆ.

ಕಾರವಾರ: ಸ್ವಾತಂತ್ರ್ಯ ಚಳುವಳಿಗೆ ಜಿಲ್ಲೆ ನೀಡಿದ್ದ ಕೊಡುಗೆಯನ್ನು ಸಾಕ್ಷೀಕರಿಸುವ ನಿಟ್ಟಿನಲ್ಲಿ "ದಂಡಿ"‌ ಬೆಳ್ಳಿತೆರೆ ಬರಲು ಸಿದ್ಧವಾಗುತ್ತಿದೆ.

ಉಪ್ಪಿನ ಸತ್ಯಾಗ್ರಹದಂತಹ ಚಳುವಳಿ ವೇಳೆ ಮಹಾತ್ಮ ಗಾಂಧೀಜಿಯೊಂದಿಗೆ ಹೋರಾಟಕ್ಕೆ ಧುಮುಕಿದ್ದ ಇಲ್ಲಿನ ಅದೆಷ್ಟೋ ಮಂದಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಇದೀಗ ಸ್ವಾತಂತ್ರ್ಯ ಸಂಗ್ರಾಮ ದಂಡಿ ರೂಪದಲ್ಲಿ ಬೆಳ್ಳಿತೆರೆಯಲ್ಲಿ ಮೂಡಿಬರಲಿದ್ದು, ಜಿಲ್ಲೆಯಲ್ಲಿ ಇಂದಿನಿಂದ ಚಿತ್ರತಂಡ ಚಿತ್ರೀಕರಣ ಪ್ರಾರಂಭಿಸಿದೆ.

ಹೊನ್ನಾವರದ ಮೂಡ ಗಣಪತಿ ದೇವಸ್ಥಾನದಲ್ಲಿ ದಂಡಿ ಚಿತ್ರತಂಡದ ಸದಸ್ಯರು ವಿಶೇಷ ಪೂಜೆ ಸಲ್ಲಿಸಿದರು‌. ಚಿತ್ರದಲ್ಲಿ ಹಿರಿಯ ನಟಿ ತಾರಾ ಅನುರಾಧಾ, ಸುಚೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಉತ್ತರ ಕನ್ನಡದಲ್ಲಿ ನಡೆದಿದ್ದ ಸ್ವಾತಂತ್ರ್ಯ ಹೋರಾಟದ ಕಥಾ ಹಂದರವನ್ನ ಹೊಂದಿದೆ. ಅದರಲ್ಲೂ ವಿಶೇಷವಾಗಿ ಅಹಿಂಸಾ ಮಾರ್ಗದ ಹೋರಾಟ ಎನಿಸಿಕೊಂಡಿದ್ದ ಉಪ್ಪಿನ ಸತ್ಯಾಗ್ರಹ ಸಂದರ್ಭದ ಚಿತ್ರಣವನ್ನು ದಂಡಿ ಕಟ್ಟಿಕೊಡಲಿದ್ದು, ವಿನೂತನವಾಗಿ ತೆರೆಯ ಮೇಲೆ ಮೂಡಿಬರುವ ನಿರೀಕ್ಷೆ ಇದೆ ಎಂದು ನಟಿ ತಾರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ್ದ "ದಂಡಿ" ಸತ್ಯಾಗ್ರಹ ಬೆಳ್ಳಿತೆರೆಗೆ

ದಂಡಿ ಚಿತ್ರ ಡಾ. ರಾಜಶೇಖರ ಮಠಪತಿ ಅವರ ಕಾದಂಬರಿ ಆಧಾರಿತ ಚಿತ್ರವಾಗಿದ್ದು, ವಿಶಾಲರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಕಲ್ಯಾಣಿ ಪ್ರೊಡಕ್ಷನ್‌ನ ಚೊಚ್ಚಲ ಚಿತ್ರವಾಗಿದ್ದು, ಉಷಾರಾಣಿ ಎಸ್.ಸಿ. ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನಿರ್ಮಾಪಕಿಯ ಪುತ್ರ ಯುವಾನ್ ದೇವ್ ನಾಯಕ‌ ನಟನಾಗಿದ್ದು, ಶಾಲಿನಿ ಭಟ್ ನಾಯಕಿಯಾಗಿ ಮೊದಲ ಬಾರಿಗೆ ತೆರೆಯ ಮೇಲೆ ಬರುತ್ತಿದ್ದಾರೆ.

ಜಿಲ್ಲೆಯ ಹೊನ್ನಾವರ, ಸಿದ್ದಾಪುರ, ಬಾರ್ಡೋಲಿ ಖ್ಯಾತಿಯ ಅಂಕೋಲಾದ ಗ್ರಾಮೀಣ ಭಾಗಗಳಲ್ಲಿ ಮುಂದಿನ ಒಂದು ತಿಂಗಳು ಚಿತ್ರೀಕರಣ ನಡೆಯಲಿದ್ದು, ಚಿತ್ರದಲ್ಲಿ ಉತ್ತರ ಕನ್ನಡದ ಸೊಗಡನ್ನೇ ಸಾಧ್ಯವಾದಷ್ಟು ಮಟ್ಟಿಗೆ ಕಟ್ಟಿಕೊಡುವ ಆಶಯವನ್ನು ಹೊಂದಿರೋದಾಗಿ ನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ.. ಹುಟ್ಟೂರಿನಲ್ಲಿ 'ರಾಬರ್ಟ್​' ಸಿನಿಮಾ ನೋಡಿದ ಆಶಾಭಟ್​​​​​​ ಹೇಳಿದ್ದೇನು...?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.