ETV Bharat / state

ಚಳಿ ಜ್ವರಕ್ಕೆ ಹಾಸಿಗೆ ಹಿಡಿಯುತ್ತಿರುವ ಜನ: ಕೊರೊನಾ ಭಯಕ್ಕೆ ಮೆಡಿಕಲ್, ಖಾಸಗಿ ಆಸ್ಪತ್ರೆಗಳಿಂದಲೇ ಔಷಧ!

author img

By

Published : Jan 22, 2022, 12:46 PM IST

Updated : Jan 22, 2022, 1:57 PM IST

Medicine demand increased in Uttara Kannada district, Viral fever in Uttara Kannada district, Uttara Kannada district news, Uttara Kannada corona update, Uttara Kannada covid news, ಉತ್ತರಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗ್ತಿದೆ ಔಷಧಿಕಗಳ ಬೇಡಿಕೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ವೈರಲ್​ ಜ್ವರ, ಉತ್ತರ ಕನ್ನಡ ಜಿಲ್ಲೆಯ ಸುದ್ದಿ, ಉತ್ತರಕನ್ನಡ ಕೊರೊನಾ ಅಪ್​ಡೇಟ್​, ಉತ್ತರಕನ್ನಡ ಕೋವಿಡ್​ ಸುದ್ದಿ,
ಚಳಿ ಜ್ವರಕ್ಕೆ ಹಾಸಿಗೆ ಹಿಡಿಯುತ್ತಿರುವ ಜನ

ಕಳೆದ ಕೆಲ ದಿನಗಳಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಚಳಿ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗತೊಡಗಿದೆ. ಮೊದಲೇ ಕೊರೊನಾ ಭಯದಲ್ಲಿದ್ದ ಜನರಿಗೆ ಇದೀಗ ಇದ್ದಕ್ಕಿದ್ದಂತೆ ಮನೆ ಮಂದಿಯೆಲ್ಲ ಹಾಸಿಗೆ ಹಿಡಿಯುತ್ತಿರುವುದು ಆತಂಕ ಸೃಷ್ಟಿಸಿದ್ದು, ಬಾಧೆ ತಾಳಲಾಗದೇ ಇದೀಗ ಜನ ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್​ಗಳಿಗೆ ಮುಗಿ ಬೀಳುತ್ತಿದ್ದಾರೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಕೊರೊನಾ ಅಬ್ಬರ ಜೋರಾಗಿದೆ. ಸಾವಿರದ ಗಡಿಯಲ್ಲಿ ಕೋವಿಡ್ ಪ್ರಕರಣಗಳು ಕಂಡು ಬರುತ್ತಿದ್ದು ಸಾಕಷ್ಟು ಆತಂಕ ಸೃಷ್ಟಿಸಿದೆ. ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿಗಳ ಪಾಲನೆಗೆ ಕ್ರಮ ಕೈಗೊಂಡರೂ ಕೋವಿಡ್ ಸಂಖ್ಯೆ ಮಾತ್ರ ಇಳಿಕೆ ಕಾಣುತ್ತಿಲ್ಲ.

ಇದರ ನಡುವೆ ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಜ್ವರ, ನೆಗಡಿ, ಕೆಮ್ಮಿನಂತಹ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಪರಿಣಾಮ ನಗರ ಪ್ರದೇಶಗಳಲ್ಲಿ ಪ್ಯಾರಾಸಿಟಾಮೊಲ್, ಡೋಲೋ-650 ಯಂತಹ ಮೆಡಿಸಿನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಚಳಿ ಜ್ವರಕ್ಕೆ ಹಾಸಿಗೆ ಹಿಡಿಯುತ್ತಿರುವ ಜನ

ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಲ್ಲಿ ಚಳಿಯ ವಾತಾವರಣವಿದ್ದು, ಈ ಬಾರಿ ಕರಾವಳಿ ತಾಲೂಕುಗಳಲ್ಲೂ ಸಹ ಹಿಂದೆಂದಿಗಿಂತ ಹೆಚ್ಚು ಚಳಿ ಬೀಳುತ್ತಿದೆ. ಇದರಿಂದಾಗಿ ಒಂದೆಡೆ ಕೊರೊನಾ ಭೀತಿಯ ನಡುವೆ ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳು ಬಹುತೇಕರಲ್ಲಿ ಕಂಡು ಬರುತ್ತಿದ್ದು, ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತಿದೆ.

ಬಹುತೇಕ ಎಲ್ಲರ ಮನೆಗಳಲ್ಲೂ ಇಂತಹ ಲಕ್ಷಣಗಳ ಜನರು ಕಂಡು ಬರುವಂತಾಗಿದ್ದು, ಇಂತಹವರು ಆಸ್ಪತ್ರೆಗಳಿಗೆ ತೆರಳುವ ಬದಲು ಮೆಡಿಕಲ್‌ಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಕಳೆದೊಂದು ವಾರದಿಂದ ಡೋಲೋ 650, ಪ್ಯಾರಾಸಿಟಾಮೊಲ್ ಮಾತ್ರೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ನಗರ ಪ್ರದೇಶದ ಮೆಡಿಕಲ್‌ವೊಂದರಲ್ಲೇ ದಿನಕ್ಕೆ 200 ರಿಂದ 250 ಗುಳಿಗೆ ಸ್ಟ್ರೀಪ್‌ಗಳು ಮಾರಾಟವಾಗುತ್ತಿವೆ.

ಓದಿ: 'ಯುದ್ಧ ಮುಂದುವರೆದಿದೆ.. ಈಗ ಎಂಎಸ್​ಪಿ ಸರದಿ' ಎಂದು ವಿವಾಹ ಆಮಂತ್ರಣ ಪತ್ರದಲ್ಲಿ ಮುದ್ರಿಸಿದ ಯುವಕ

ಇನ್ನು ಜಿಲ್ಲೆಯಲ್ಲಿ ಸದ್ಯ 2,412 ಸಕ್ರಿಯ ಸೋಂಕಿತರಿದ್ದು, ಈ ಪೈಕಿ 2,316 ಮಂದಿ ಮನೆಗಳಲ್ಲಿಯೇ ಐಸೋಲೇಶನ್‌ನಲ್ಲಿದ್ದಾರೆ. ಅದರಲ್ಲೂ ಜಿಲ್ಲೆಯಲ್ಲಿ ಮೂರನೇಯ ಅಲೆಯಲ್ಲಿ ಇದುವರೆಗೆ ಪತ್ತೆಯಾದ ಪ್ರಕರಣಗಳ ಪೈಕಿ ಕಾರವಾರದಲ್ಲೇ 700ಕ್ಕೂ ಅಧಿಕ ಮಂದಿ ಸೋಂಕಿತರಿದ್ದಾರೆ.

ಹೀಗಾಗಿ ಹೋಂ ಐಸೋಲೇಶನ್‌ನಲ್ಲಿ ಹೆಚ್ಚಿನವರು ಇರುವುದರಿಂದಾಗಿಯೇ ನಗರದಲ್ಲಿ ಜ್ವರ, ನೆಗಡಿ, ಕೆಮ್ಮಿನಂತಹ ಲಕ್ಷಣಗಳು ಜನರಲ್ಲಿ ಕಂಡುಬರುತ್ತಿದ್ದು, ಕೊರೊನಾ ಸೋಂಕು ಸಮುದಾಯಕ್ಕೂ ಹಬ್ಬುತ್ತಿದ್ಯಾ ಅನ್ನೋ ಆತಂಕ ಜನರಲ್ಲಿ ಮನೆ ಮಾಡುವಂತಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದರೆ ಈಗಾಗಲೇ ಜಿಲ್ಲೆಯಲ್ಲಿ ಕಂಡು ಬರುತ್ತಿರುವ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಿಗೆ ಇದ್ದು, ನಿತ್ಯ 5 ರಿಂದ 6 ಸಾವಿರ ಕೋವಿಡ್ ತಪಾಸಣೆಯನ್ನ ನಡೆಸಲಾಗುತ್ತಿದೆ. ಅಲ್ಲದೇ ಹೋಂ ಐಸೋಲೇಶನ್ ಇರುವವರನ್ನ ಪ್ರತಿನಿತ್ಯ ಪರಿಶೀಲಿಸುವ ಮೂಲಕ ಹೆಚ್ಚಿನ ನಿಗಾ ಇರಿಸಲಾಗಿದ್ದು, ಕ್ಲಸ್ಟರ್‌ಗಳು ಕಂಡು ಬಂದಲ್ಲಿ ತಪಾಸಣೆಯನ್ನ ನಡೆಸಲಾಗುತ್ತಿದೆ ಅಂತಾರೇ ಜಿಲ್ಲಾಧಿಕಾರಿ.

ಓದಿ: ಹಳಿ ತಪ್ಪಿದ ಗೂಡ್ಸ್ ರೈಲು: 4 ಬೋಗಿಗಳು ಪಲ್ಟಿ

ಒಟ್ಟಾರೇ ಕೊರೊನಾ ಅಬ್ಬರದ ನಡುವೆ ಹವಾಮಾನ ವೈಪರೀತ್ಯದಿಂದಲೋ ಏನೋ ಜಿಲ್ಲೆಯಲ್ಲಿ ಮಾತ್ರ ಜ್ವರ, ನೆಗಡಿಯಂತಹ ಅನಾರೋಗ್ಯ ಸಮಸ್ಯೆಯೂ ಜನರನ್ನ ಕಾಡುತ್ತಿದೆ. ಇದರ ಪರಿಣಾಮ ಔಷಧಗಳಿಗೆ ಬೇಡಿಕೆ ಹೆಚ್ಚಾಗುವಂತಾಗಿರೋದಂತೂ ಸತ್ಯ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated :Jan 22, 2022, 1:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.