ETV Bharat / bharat

ಹಳಿ ತಪ್ಪಿದ ಗೂಡ್ಸ್ ರೈಲು: 4 ಬೋಗಿಗಳು ಪಲ್ಟಿ

author img

By

Published : Jan 22, 2022, 11:11 AM IST

ಇಂದು ಮುಂಜಾನೆ ಸಿಮೆಂಟ್ ಮೂಟೆಗಳನ್ನು ತುಂಬಿಕೊಂಡು ಆಗ್ರಾದಿಂದ ದೆಹಲಿಗೆ ಹೋಗುತ್ತಿದ್ದ ಗೂಡ್ಸ್ ರೈಲು ಕೊತ್ವಾಲಿ ಪ್ರದೇಶದಲ್ಲಿ ಹಳಿ ತಪ್ಪಿದ್ದು, ನಾಲ್ಕು ಬೋಗಿಗಳು ಪಲ್ಟಿಯಾಗಿವೆ.

ಗೂಡ್ಸ್ ರೈಲು ಪಲ್ಟಿ
ಗೂಡ್ಸ್ ರೈಲು ಪಲ್ಟಿ

ಮಥುರಾ(ಉತ್ತರ ಪ್ರದೇಶ): ಕೊತ್ವಾಲಿ ಪ್ರದೇಶದಲ್ಲಿ ಗೂಡ್ಸ್ ರೈಲು ಹಳಿತಪ್ಪಿದೆ. ಘಟನೆಯಲ್ಲಿ ರೈಲಿನ ನಾಲ್ಕು ಬೋಗಿಗಳು ಪಲ್ಟಿಯಾಗಿದ್ದು, ಪರಿಣಾಮ ಆಗ್ರಾ - ದೆಹಲಿ ರೈಲು ಮಾರ್ಗ ಅಸ್ತವ್ಯಸ್ತಗೊಂಡಿದೆ.

ಇಂದು ಮುಂಜಾನೆ ಘಟನೆ ಸಂಭವಿಸಿದೆ. ಗೂಡ್ಸ್ ರೈಲು ಪಲ್ಟಿಯಾದ ಬಗ್ಗೆ ಮಾಹಿತಿ ಪಡೆದ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತು ಆರ್‌ಪಿಎಫ್ ತಂಡ ಸ್ಥಳಕ್ಕೆ ಧಾವಿಸಿ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೂಡ್ಸ್ ರೈಲು ಪಲ್ಟಿ
ಗೂಡ್ಸ್ ರೈಲು ಪಲ್ಟಿ

ಸಿಮೆಂಟ್ ಮೂಟೆಗಳನ್ನು ತುಂಬಿಕೊಂಡು ಗೂಡ್ಸ್ ರೈಲು ಆಗ್ರಾದಿಂದ ದೆಹಲಿಗೆ ಹೋಗುತ್ತಿತ್ತು. ರೈಲು ಬೋಗಿಗಳು ಪಲ್ಟಿಯಾಗಿದ್ದರಿಂದ ಹಳಿ ಹಾಳಾಗಿದ್ದು, ಸ್ಥಳದಲ್ಲಿ ಜೆಸಿಬಿ ಹಾಗೂ ರೈಲ್ವೆ ತಂಡದಿಂದ ದುರಸ್ತಿ ಕಾರ್ಯಾಚರಣೆ ನಡೆಯುತ್ತಿದೆ.

ಗೂಡ್ಸ್ ರೈಲು ಪಲ್ಟಿ
ಗೂಡ್ಸ್ ರೈಲು ಪಲ್ಟಿ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.