ETV Bharat / state

ನಕಲಿ ಬಾಂಬ್ ಪತ್ತೆ ಬೆನ್ನಲ್ಲೇ ಹೆಚ್ಚಿದ ಆತಂಕ: ಉತ್ತರ ಕನ್ನಡ ಜಿಲ್ಲಾದ್ಯಂತ ಬಿಗಿ‌ ತಪಾಸಣೆ

author img

By

Published : Oct 29, 2021, 6:08 PM IST

security tightened across Uttara Kannada
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬಿಗಿ‌ ತಪಾಸಣೆ

ನಕಲಿ ಬಾಂಬ್​​ ಪತ್ತೆಯಾದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಾದ ಕಾರವಾರ ಹಾಗೂ ಭಟ್ಕಳದಲ್ಲಿ ಆ್ಯಂಟಿ ಸಬೋಟೇಜ್ ಚೆಕ್ ಟೀಂ ತೀವ್ರ ತಪಾಸಣೆ ನಡೆಸುತ್ತಿದೆ.

ಕಾರವಾರ: ಕುಮಟಾ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಗುಡ್ಡದಲ್ಲಿ ನಕಲಿ ಬಾಂಬ್​​ ಪತ್ತೆಯಾದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ‌ ಆ್ಯಂಟಿ ಸಬೋಟೇಜ್ ಚೆಕ್ ಟೀಂ (ASC) ತೀವ್ರ ತಪಾಸಣೆ ನಡೆಸುತ್ತಿದೆ.

ಉತ್ತರ ಕನ್ನಡ ಜಿಲ್ಲಾದ್ಯಂತ ಬಿಗಿ‌ ತಪಾಸಣೆ

ಕಳೆದ ಎರಡು ದಿನಗಳ‌ ಹಿಂದೆ ಕುಮಟಾದ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದಲ್ಲಿ ಪತ್ತೆಯಾದ ಹುಸಿ ಬಾಂಬ್ ಸಾಕಷ್ಟು ಆತಂಕ ಸೃಷ್ಟಿಯಾಗಿತ್ತು. ಬಳಿಕ ಮಂಗಳೂರಿನಿಂದ ಬಂದ ಬಾಂಬ್ ನಿಷ್ಕ್ರಿಯ ದಳವು ಬಾಂಬ್ ಪರಿಶೀಲಿಸಿ ನಿಷ್ಕ್ರಿಯಗೊಳಿಸಿದಾಗ ನಕಲಿ ಎಂಬುದು ಸಾಬೀತಾಗಿತ್ತು.

ಸದ್ಯ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಾದ ಕಾರವಾರ ಹಾಗೂ ಭಟ್ಕಳದಲ್ಲಿ ಆ್ಯಂಟಿ ಸಬೋಟೇಜ್ ಚೆಕ್ ಟೀಂ ತೀವ್ರ ತಪಾಸಣೆ ನಡೆಸುತ್ತಿದೆ. ಪ್ರಮುಖವಾಗಿ ಭಟ್ಕಳ ರೈಲ್ವೆ ಸ್ಟೇಷನ್, ರೈಲ್ವೆ ಟ್ರ್ಯಾಕ್ ಹಾಗೂ ರೈಲ್ವೆ ಹಳಿ ಸಾಗುವ ಟನಲ್‌ಗಳಲ್ಲಿ ಶ್ವಾನದಳದೊಂದಿಗೆ ತೆರಳಿ ತಪಾಸಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಬೆಚ್ಚಿ ಬೀಳಿಸಿದ್ದ ನಕಲಿ ಬಾಂಬ್: ವಿದ್ಯಾರ್ಥಿಗಳ ಮೇಲೆ ಪೊಲೀಸರ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.