ETV Bharat / state

ಕಾರವಾರ ಕಡಲತೀರದಲ್ಲಿ ಅಪರೂಪದ ಜೀವಿ ಪತ್ತೆ: ಅಚ್ಚರಿಗೊಳಗಾದ ಜನ

author img

By

Published : Dec 16, 2022, 5:01 PM IST

a-rare-creature-found-on-karwar-beach
ಕಾರವಾರ ಕಡಲತೀರದಲ್ಲಿ ಪತ್ತೆಯಾದ ಅಪರೂಪದ ಜೀವಿ: ಅಚ್ಚರಿಗೊಳಗಾದ ಜನ!

ಗೂಸ್ ಬಾರ್ನಕಲ್ ಎಂಬ ಸಮುದ್ರ ಜೀವಿಯು ಪೌಷ್ಟಿಕ ಆಹಾರವಾಗಿದ್ದು, ಸ್ಪ್ಯಾನಿಶ್ ಮತ್ತು ಪೋರ್ಚುಗಲ್ ದೇಶದ ಜನರು ಖಾದ್ಯವಾಗಿ ಬಳಸುತ್ತಾರೆ.

ಕಾರವಾರ: ಇಲ್ಲಿನ ಕಡಲತೀರದಲ್ಲಿ 'ಗೂಸ್ ಬಾರ್ನಕಲ್' ಎಂಬ ವಿಶಿಷ್ಟ ಸಮುದ್ರ ಜೀವಿಯೊಂದು ಕಾಣಿಸಿಕೊಂಡಿದೆ. ಈ ಅಪರೂಪದ ಜೀವಿ ನೋಡಿದ ಜನ ಅಚ್ಚರಿಗೊಳಗಾಗಿದ್ದಾರೆ.

ನಗರದ ಟ್ಯಾಗೋರ್ ಕಡಲತೀರದಲ್ಲಿ ಕಾಣಿಸಿಕೊಂಡ ಕಡಲಜೀವಿಯ ಫೋಟೋ ವಿಡಿಯೋ ಕ್ಲಿಕ್ಕಿಸಲು ಜನ ಮುಗಿಬಿದ್ದಿದ್ದಾರೆ. ನೋಡಲು ಕಲ್ಲುಚಿಪ್ಪಿನಂತಿರುವ ಈ ಜೀವಿ ಚಿಪ್ಪೆ ಕಲ್ಲು ಜಾತಿಗೆ ಸೇರಿದ್ದಲ್ಲ. ಇದು ಸಮುದ್ರದಲ್ಲಿನ ಬಾಟಲ್​ಗಳ ಮೇಲೆ ಅಥವಾ ಬೋಟ್​ನ ಅಡಿ ಭಾಗದಲ್ಲಿ ಅಂಟಿಕೊಂಡಿರುತ್ತದೆ.

ಈ ಜೀವಿ ಸಾಮಾನ್ಯವಾಗಿ 2 ಸೆ.ಮೀ.ನಿಂದ 8 ಸೆ.ಮೀ. ವರಗೆ ಬೆಳೆಯುತ್ತದೆ. ಇದೊಂದು ಪೌಷ್ಟಿಕ ಆಹಾರವಾಗಿದ್ದು, ಸ್ಪ್ಯಾನಿಶ್ ಮತ್ತು ಪೋರ್ಚುಗಲ್ ದೇಶದ ಜನರು ಖಾದ್ಯವಾಗಿ ಬಳಕೆ ಮಾಡುತ್ತಾರೆ ಎಂದು ಕಡಲಜೀವ ಶಾಸ್ತ್ರಜ್ಞ ಶಿವಕುಮಾರ್ ಹರಗಿ ತಿಳಿಸಿದ್ದಾರೆ.

ಇದನ್ನೂ ಓದಿ:ನಾಲ್ಕು ಕಾಲಿರುವ ಹೆಣ್ಣು ಶಿಶುವಿಗೆ ಮಹಿಳೆ ಜನ್ಮ.. ಮಗು ಸಂಪೂರ್ಣ ಆರೋಗ್ಯಕರ ವೈದ್ಯರು ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.