ETV Bharat / state

ತುಮಕೂರಲ್ಲಿ ಕಾಂಡೋಮ್​ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್​.. ಲಾಡ್ಜ್​ನಲ್ಲಿ ಸುರಂಗದೊಳಗೆ ವೇಶ್ಯಾವಾಟಿಕೆ ದಂಧೆ

author img

By

Published : Sep 21, 2021, 2:06 PM IST

Updated : Sep 21, 2021, 4:01 PM IST

tumkur
ಪೊಲೀಸ್​ ದಾಳಿ ವೇಳೆ ಸುರಂಗ ಪತ್ತೆ

ಇತ್ತೀಚೆಗೆ ತುಮಕೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಬಳಿ ರಾಶಿ ರಾಶಿ ಕಾಂಡೋಮ್​ಗಳು ಪತ್ತೆಯಾಗಿದ್ದವು. ಇದರ ಜಾಡು ಹಿಡಿದ ಹೋದ ಪೊಲೀಸರು ವೇಶ್ಯಾವಾಟಿಕೆ ದಂಧೆಯನ್ನು ಪತ್ತೆಹಚ್ಚಿದ್ದಾರೆ.

ತುಮಕೂರು: ಇಲ್ಲಿನ ರಿಂಗ್ ರಸ್ತೆಯ ಲಾಡ್ಜ್​ವೊಂದರ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಪೊಲೀಸರು ದಾಳಿ ನಡೆಸಿದ್ದು, ವೇಶ್ಯಾವಾಟಿಕೆ ನಡೆಸಲು ಕಳ್ಳಮಾರ್ಗವಾಗಿದ್ದ ಸುರಂಗವೊಂದನ್ನು ಪತ್ತೆಹಚ್ಚಿದ್ದಾರೆ. ಈ ಸುರಂಗದಲ್ಲಿ ಅಡಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಸುರಂಗದೊಳಗೆ ಇಬ್ಬರು ಮಹಿಳೆ ಹಾಗೂ ಓರ್ವ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಅಡಗಿಕೊಂಡಿದ್ದರು ಎಂದು ತಿಳಿದುಬಂದಿದೆ.

ಲಾಡ್ಜ್​ನಲ್ಲಿ ಸುರಂಗದೊಳಗೆ ವೇಶ್ಯಾವಾಟಿಕೆ ದಂಧೆ

ಇತ್ತೀಚೆಗೆ ಈ ಲಾಡ್ಜ್ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್‌ಗಳು ಪತ್ತೆ ಆಗಿದ್ದವು. ವಿಷಯ ತಿಳಿದು ತನಿಖೆ ಆರಂಭಿಸಿದ್ದ ಒಡನಾಡಿ ಸಂಸ್ಥೆ ನಿಖರ ಮಾಹಿತಿ ಅನ್ವಯ ಲಾಡ್ಜ್​ ಮೇಲೆ ಪೊಲೀಸರ ಸಹಾಯದೊಂದಿಗೆ ದಾಳಿ ನಡೆಸಿದೆ.

ಇದನ್ನು ಓದಿ: ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿವೆ ರಾಶಿ ರಾಶಿ ಕಾಂಡೋಮ್​ಗಳು!

ಈಗಾಗಲೇ ಘಟನೆ ಸಂಬಂಧ ಒಟ್ಟು ಐವರನ್ನು ಬಂಧಿಸಿದ್ದು, ಲಾಡ್ಜ್​ನ್ನು ವಶಕ್ಕೆ ಪಡೆದ ತುಮಕೂರು ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Last Updated :Sep 21, 2021, 4:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.