ETV Bharat / state

ರಾಮನಗರ, ಚನ್ನಪಟ್ಟಣ ನಗರಸಭೆಯ ಚುನಾವಣೆ ಬಗ್ಗೆ ಮಾಹಿತಿ ನೀಡಿದ ಡಿಸಿ

author img

By

Published : Apr 20, 2021, 6:18 AM IST

ರಾಮನಗರದಲ್ಲಿ ಕೊರೊನಾ ನಿಯಂತ್ರಣ ಮತ್ತು ಮುಂಬರುವ ಚುನಾವಣೆ ಬಗ್ಗೆ ಡಿಸಿ ಸಭೆ ನಡೆಸಿದರು.

DC held election and corona meeting, DC held election and corona meeting in Ramanagar, Ramanagar news, ಕೊರೊನಾ ಮತ್ತು ಚುನವಾಣೆ ಬಗ್ಗೆ ಡಿಸಿ ಸಭೆ, ರಾಮನಗರದಲ್ಲಿ ಕೊರೊನಾ ಮತ್ತು ಚುನವಾಣೆ ಬಗ್ಗೆ ಡಿಸಿ ಸಭೆ, ರಾಮನಗರ ಸುದ್ದಿ,

ರಾಮನಗರ: ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಯ ಒಟ್ಟು 62 ವಾರ್ಡ್​ಗಳಲ್ಲಿ ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಕೆ. ತಿಳಿಸಿದರು.

ಅವರು ನಿನ್ನೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್​​ 30ರ ಚುನಾವಣೆ ನಡೆಯುವ ನಗರಸಭೆ ವ್ಯಾಪ್ತಿಯಲ್ಲಿ ಮಾತ್ರ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಸದರಿ ಚುನಾವಣೆಯ ಮತದಾನವು ಇದೆ 27 ರಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಯಲಿದೆ. ಅದರನ್ವಯ ಚುನಾವಣೆ ನಡೆಸಲು ಜಿಲ್ಲಾಡಳಿತವು ಸಂಪೂರ್ಣವಾಗಿ ಸಜ್ಜಾಗಿರುತ್ತದೆ ಎಂದರು.

ರಾಮನಗರ ನಗರಸಭೆಯ 31 ವಾರ್ಡ್​ಗಳ ಚುನಾವಣೆಗೆ 4 ಚುನಾವಣಾ ಅಧಿಕಾರಿ ಮತ್ತು 4 ಸಹಾಯಕ ಚುನಾವಣಾ ಅಧಿಕಾರಿಗಳು ನೇಮಿಸಲಾಗಿದೆ. ಮತದಾನದ ದಿನಕ್ಕೆ 83 ಪಿ.ಆರ್.ಒ, 83 ಎ.ಪಿ.ಆರ್.ಒ, 166 ಪಿಒ ಸೇರಿದಂತೆ ಒಟ್ಟು 332 ಮತಗಟ್ಟೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದರು.

ರಾಮನಗರ ನಗರ ಸಭೆಯ 31 ವಾರ್ಡ್​ಗಳಿಂದ ಒಟ್ಟು 145 ನಾಮ ಪಾತ್ರಗಳು ಸ್ವೀಕೃತ ವಾಗಿದ್ದು. 12 ತಿರಸ್ಕತ ಕೊಂಡು 133 ನಾಮ ಪತ್ರ ಗಳು ಕ್ರಮ ಬದ್ಧವಾಗಿ ನಾಮ ನಿದೇಶಿತವಾಗಿರುತ್ತದೆ ಎಂದರು.

ರಾಮನಗರ ನಗರಸಭೆಗೆ ಸಂಬಂಧಿಸಿದಂತೆ 72 ಮತಗಟ್ಟೆಗಳು ಹಾಗೂ ಹೆಚ್ಚುವರಿ 4 ಮತಗಟ್ಟೆಗಳು ಸೇರಿದಂತೆ ಒಟ್ಟು 76 ಮತಗಟ್ಟೆಗಳನ್ನು ತೆರೆಯಲಾಗುವುದು. ರಾಮನಗರ ನಗರ ಸಭೆ ಚುನಾವಣೆಯಲ್ಲಿ 38,738 ಪುರಷರು, 40780 ಮಹಿಳೆಯರು ಮತ್ತು ಇತರೆ 12 ಸೇರಿದಂತೆ ಒಟ್ಟು 79,530 ಮತದರರಿದ್ದಾರೆ ಎಂದು ಮಾಹಿತಿ ನೀಡಿದರು.

ರಾಮನಗರ ನಗರಸಭೆಯ ಚುನಾವಣೆಯ ಮಸ್ಟರಿಂಗ್, ಡಿ-ಮಸ್ಟರಿಂಗ್, ಮತ ಎಣೆಕೆ ಕಾರ್ಯವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ ಎಂದು ಹೇಳಿದರು.

ಚನ್ನಪಟ್ಟಣ ನಗರಸಭೆ ಚುನಾವಣೆ...

ಚನ್ನಪಟ್ಟಣ ನಗರ ಸಭೆಯ 31 ವಾರ್ಡ್​ಗಳ ಚುನಾವಣೆಗೆ 4 ಚುನಾವಣಾ ಅಧಿಕಾರಿ ಮತ್ತು 4 ಸಹಾಯಕ ಚುನಾವಣಾ ಅಧಿಕಾರಿ ನೇಮಕ ಮಾಡಲಾಗಿದೆ. ಮತದಾನಕ್ಕಾಗಿ 69 ಪಿ.ಆರ್.ಒ, 69 ಎ.ಪಿ.ಆರ್.ಒ, 138 ಪಿಒ ಸೇರಿದಂತೆ ಒಟ್ಟು 276 ಮತಾಗಟ್ಟೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಚನ್ನಪಟ್ಟಣ ನಗರ ಸಭೆ ಚುನಾವಣೆಗೆ 134 ನಾಮ ಪಾತ್ರಗಳು ಸ್ವೀಕೃತ ವಾಗಿದ್ದು, 128 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿ ನಾಮನಿರ್ದೇಶಿತವಾಗಿರುತ್ತದೆ ಎಂದರು.

ಚನ್ನಪಟ್ಟಣ ನಗರ ಸಭೆಗೆ ಸಂಬಂಧಿಸಿದಂತೆ 57 ಮತಗಟ್ಟೆಗಳು ಹಾಗೂ ಹೆಚ್ಚುವರಿ 2 ಮತಗಟ್ಟೆಗಳು ಸೇರಿದಂತೆ ಒಟ್ಟು 59 ಮತಗಟ್ಟೆಗಳನ್ನು ತೆರೆಯಲಾಗುವುದು. ಚನ್ನಪಟ್ಟಣ ನಗರ ಸಭೆಗೆ ಸಂಬಂಧಿಸಿದಂತೆ ಚುನಾವಣೆಯಲ್ಲಿ 28,693 ಪುರಷರು, 30,227 ಮಹಿಳೆಯರು ಸೇರಿದಂತೆ ಒಟ್ಟು 58,920 ಮತದರರಿದ್ದಾರೆ ಎಂದು ಹೇಳಿದರು.

ಚನ್ನಪಟ್ಟಣ ನಗರ ಸಭೆಯ ಚುನಾವಣೆಯ ಮಸ್ಟರಿಂಗ್, ಡಿ-ಮಸ್ಟರಿಂಗ್, ಮತ ಎಣೆಕೆ ಕಾರ್ಯವು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದರು.

ಕೋವಿಡ್ ನಿಯಮಾವಳಿಗಳನ್ನು ಚುನಾವಣೆಯ ಸಂದರ್ಭಗಳಲ್ಲಿ ಅನುಸರಿಸಲಾಗುವುದು. ಕೋವಿಡ್ ನಿಯಮಾವಳಿ ಪಾಲನೆಯ ಬಗ್ಗೆ ಪ್ರಚಾರ ಸಂದರ್ಭಗಳಲ್ಲಿ ವಿಶೇಷವಾಗಿ ನಿಗಾ ವಹಿಸಲಾಗುವುದು. ಕೋವಿಡ್ ಪಾಸಿಟಿವ್ ಇರುವವರಿಗೂ ಕೊನೆಯ ಒಂದು ಗಂಟೆಗಳ ಕಾಲ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.