ETV Bharat / state

ಲಾರಿ ಹಿಂಬದಿ ಗಾಲಿಗೆ ಬಿದ್ದು ಬೈಕ್​ ಸವಾರ ಸಾವು

author img

By

Published : Dec 31, 2019, 7:50 PM IST

bike accident in raichur district
ಮೃತ ಅಂಬರೀಶ್

ಕಬ್ಬಿಣ ಸರಳು ಹೊತ್ಯೊಯುತ್ತಿದ್ದ ಲಾರಿಯ ಹಿಂಬದಿ ಗಾಲಿಗೆ ಸಿಲುಕಿ ಬೈಕ್​ ಸವಾರ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆ ಮಾನವಿ ಪಟ್ಟಣದಲ್ಲಿ ನಡೆದಿದೆ. ಅಂಬರೀಶ್​ ರಾಜಲದಿನ್ನಿ ಮೃತ ಬೈಕ್​ ಸವಾರ.

ರಾಯಚೂರು: ಕಬ್ಬಿಣದ ಸರಳುಗಳನ್ನು ಹೊತ್ಯೊಯುತ್ತಿದ್ದ ಲಾರಿಯ ಹಿಂಬದಿ ಗಾಲಿಗೆ ಸಿಲುಕಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆ ಮಾನವಿ ಪಟ್ಟಣದಲ್ಲಿ ನಡೆದಿದೆ.

ಮಾನವಿ ಪಟ್ಟಣದ ಚಿತ್ರಮಂದಿರ ಬಳಿ ಈ ದುರ್ಘಟನೆ ಸಂಭವಿಸಿದ್ದು, ಅಂಬರೀಶ್ ರಾಜಲದಿನ್ನಿ(38) ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ.

ಮೃತ ಅಂಬರೀಶ್

ಮಾನವಿ ಪಟ್ಟಣದಿಂದ ಸಿಂಧನೂರಿಗೆ ತೆರಳುವ ಮುಖ್ಯ ರಸ್ತೆ ಇದಾಗಿದ್ದು, ಲಾರಿ ಹಿಂದಿಕ್ಕಲು ಹೋಗಿ ಎದುರಿಗೆ ಬಂದ ಬೈಕ್​ಗೆ ಡಿಕ್ಕಿ ಹೊಡೆದ ಬೈಕ್ ಸವಾರ ಲಾರಿ ಹಿಂಬದಿ ಗಾಲಿಗೆ ಬಿದ್ದಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳುತ್ತಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಮಾನವಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Intro:ಸ್ಲಗ್: ಬೈಕ್ ಸವಾರ ಸಾವು
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 31-12-2019
ಸ್ಥಳ: ರಾಯಚೂರು
ಆಂಕರ್: ಕಬ್ಬಿಣದ ರಾಡ್ ಗಳನ್ನ ಹೊತ್ತುಯ್ಯುತ್ತಿದ್ದ ಲಾರಿಯ ಹಿಂಬದಿಗೆ ಗಾಲಿಗೆ ಸಿಲುಕಿ ಬೈಕ್ ಸವಾರ ಸ್ವಾನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.Body: ಜಿಲ್ಲೆಯ ಮಾನವಿ ಪಟ್ಟಣದ ಮಲ್ಲಿಕಾರ್ಜುನ ಚಿತ್ರಮಂದಿರ ಬಳಿ ಈ ದುರ್ಘಟನೆ ಸಂಭವಿಸಿದೆ. ಅಂಬರೀರ ರಾಜಲದಿನ್ನಿ(38) ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಮಾನವಿ ಪಟ್ಟಣದ ಸಿಂಧನೂರಿಗೆ ತೆರಳುವ ಮುಖ್ಯ ರಸ್ತೆಯಲ್ಲಿ ಆಂಧ್ರ ಪಾಸ್ ಹೊಂದಿರುವ ಲಾರಿ ಕಬ್ಬಿಣದ ಲಾರಿ ಹೊತ್ತುಯ್ಯುಲಾಗುತ್ತಿತ್ತು. ಈ ವೇಳೆ ಲಾರಿ ಪಕ್ಕದಿಂದ ತೆರಳುವ ವೇಳೆ ಲಾರಿ ಹಿಂಬದಿಯ ಗಾಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ಸ್ಥಳೀಯ ಆಸ್ಪತ್ರೆಗೆ ತೆರಳುವಷ್ಟರಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾನೆ. ಅಲ್ಲದೇ ಹಿಂಬದಿಯ ಲಾರಿಗೆ ಗಾಲಿಗೆ ಸಿಲುಕುವುದಕ್ಕೆ ಎದುರಗಡೆ ಇನ್ನೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ ಆದ್ರೂ, ಖಚಿತವಾಗುತ್ತಿಲ್ಲ. ರಾಯಚೂರು-ಹುಬ್ಬಳಿ, ಬಳ್ಳಾರಿ, ಬೆಂಗಳೂರು ತೆರಳು ಮಾನವಿ ಪಟ್ಟಣದ ಮಾರ್ಗವಾಗಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಈ ಮುಖ್ಯ ರಸ್ತೆಯಲ್ಲಿ ಓಡಾಡುತ್ತೇವೆ. ಆದ್ರೆ ರಸ್ತೆಯ ಎರಡು ಬದಿಯಲ್ಲಿ ವಾಹನಗಳು ನಿಲುಗಡೆಯಿಂದಾಗಿ ವಾಹನಗಳು ಓಡಾಡುವುದಕ್ಕೆ ಇಂತಹ ಘಟನೆ ಕಾರಣವಾಗುತ್ತಿವೆ ಎನ್ನುವ ಮಾತುಗಳು ಸಹ ಕೇಳಿ ಬಂದಿವೆ.
Conclusion:ಮಾನವಿ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.