ETV Bharat / state

ಕಬಿನಿ ಜಲಾಶಯ ತುಂಬಲು ಎರಡೇ ಅಡಿ ಬಾಕಿ... ನದಿ ಪಾತ್ರದ ಜನರಲ್ಲಿ ಭೀತಿ

author img

By

Published : Jul 10, 2022, 7:54 PM IST

Kabini Reservoir
ಕಬಿನಿ ಜಲಾಶಯ

ಜಲಾಶಯ 2284 ಅಡಿ ಗರಿಷ್ಠ ಮಟ್ಟವಿದ್ದು, ಸದ್ಯ 2282.66 ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿ ಆಗಲು ಎರಡೇ ಅಡಿ ಬಾಕಿ ಇದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ಮೈಸೂರು: ಕೇರಳದ ವೈನಾಡುವಿನಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಹೆಚ್.ಡಿ ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದುಬಂದಿದೆ. ಜಲಾಶಯ ತುಂಬಲು ಕೇವಲ ಎರಡೇ ಎರಡು ಅಡಿ ಬಾಕಿ ಇದ್ದು, ನದಿಪಾತ್ರದ ಗ್ರಾಮಗಳಲ್ಲಿನ ಜನರಲ್ಲಿ ಆತಂಕ ಮನೆಮಾಡಿದೆ.

ಇಂದು ಸಂಜೆ 26,583 ಕ್ಯೂಸೆಕ್ ನೀರನ್ನು ಕಬಿನಿ ಗೇಟ್​ನಿಂದ ಹೊರ ಬಿಡಲಾಗಿದೆ. 25,000 ಕ್ಯೂಸೆಕ್ ಒಳಹರಿವು ಬಂದಿದೆ. ಜಲಾಶಯ 2284 ಅಡಿ ಗರಿಷ್ಠ ಮಟ್ಟವಿದ್ದು, ಸದ್ಯ 2282.66 ಅಡಿ ನೀರು ಸಂಗ್ರಹವಾಗಿದೆ. ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿರುವುದರಿಂದ ನಂಜನಗೂಡಿನ ಕಪಿಲಾ ಸ್ನಾನಘಟ್ಟ ಮುಳುಗುವ ಹಂತಕ್ಕೆ ತಲುಪಿದೆ.

ಕಬಿನಿ ಜಲಾಶಯ

ಇದನ್ನೂ ಓದಿ: ಕೆಆರ್​ಎಸ್ ಜಲಾಶಯದಿಂದ ಕಾವೇರಿ ನದಿಗೆ 25 ಸಾವಿರ ಕ್ಯೂಸೆಕ್​​ ನೀರು ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.