ETV Bharat / state

ಬಿಲ್​ ಬಾಕಿ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಚೇರಿ ಸೇರಿದಂತೆ 3 ಸರ್ಕಾರಿ ಆಫೀಸ್​​​​​​ಗೆ ವಿದ್ಯುತ್​ ಕಡಿತ

author img

By ETV Bharat Karnataka Team

Published : Dec 20, 2023, 9:29 AM IST

Updated : Dec 20, 2023, 9:51 AM IST

power-cut
ವಿದ್ಯುತ್​ ಕಡಿತ

ವಿದ್ಯುತ್ ಮೀಟರ್​ ಹೆಸರು ನೋಂದಣಿಯಲ್ಲಿನ ಸಮಸ್ಯೆಯಿಂದ ವಿದ್ಯುತ್​ ಬಿಲ್​ ಕಟ್ಟದೇ ಇದ್ದ ಮಂಡ್ಯ ಸರ್ಕಾರಿ ಕಚೇರಿಯ ವಿದ್ಯುತ್​ ಅನ್ನು ಕರ್ನಾಟಕ ವಿದ್ಯುತ್ ಮಂಡಳಿ ಕಡಿತಗೊಳಿಸಿದೆ.

ಕರೆಂಟ್​ ಬಿಲ್​ ಬಾಕಿ ಸರ್ಕಾರಿ ಕಚೇರಿಗೆ ವಿದ್ಯುತ್​ ಕಡಿತ

ಮಂಡ್ಯ: ರಾಜ್ಯಕ್ಕೆ ಉಚಿತ ವಿದ್ಯುತ್​ ಕೊಟ್ಟ ಸರ್ಕಾರದ ಶಾಸಕರ ಕಚೇರಿಯೇ ಕತ್ತಲಲ್ಲಿ ಮುಳುಗಿದೆ. ಹೌದು, ಕೆ.ಇ.ಬಿಗೆ ಕರೆಂಟ್​ ಬಿಲ್​ ಪಾವತಿಸದ ಹಿನ್ನೆಲೆ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಕಚೇರಿಗೆ ವಿದ್ಯುತ್​ ಕಡಿತಗೊಳಿಸಲಾಗಿದೆ. ವಿದ್ಯುತ್​ ಕಡಿತದಿಂದ ಶಾಸಕರ ಕಚೇರಿಯಲ್ಲದೇ ಸರ್ಕಾರಿ ಕಚೇರಿಗಳು ಬೆಳಕಿಲ್ಲದೇ ಕಾರ್ಯ ನಿರ್ವಹಿಸುತ್ತಿವೆ.

ತಹಶೀಲ್ದಾರ್​ ​ ಹೇಳಿದ್ದಿಷ್ಟು: ಮೊದಲು ಈ ಕಟ್ಟಡವನ್ನು ಸೆಂಟ್ರಲ್​​ ಪೊಲೀಸ್​ ಠಾಣೆಗೆ ನೀಡಲಾಗಿತ್ತು. ಪೊಲೀಸ್​ ಠಾಣೆ ಇರುವ ತನಕ ಪೊಲೀಸ್​ ಇಲಾಖೆಯೆ ವಿದ್ಯುತ್​ ಬಿಲ್​ ಕಟ್ಟಿಕೊಂಡು ಬರುತ್ತಿತ್ತು. ಬಳಿಕ ಪೊಲೀಸ್​ ಠಾಣೆ ಸ್ಥಳಾಂತರಗೊಂಡ ಮೇಲೆ ಕಂದಾಯ ಕಚೇರಿಗೆ ನೀಡಲಾಗಿತ್ತು. ಸ್ಥಳಾಂತರಗೊಂಡ ನಂತರ ಕಂದಾಯ​ ಇಲಾಖೆ ಬಿಲ್ ಕಟ್ಟಬೇಕಾಗಿತ್ತು. ಆದರೆ, ವಿದ್ಯುತ್​ ಮೀಟರ್​ ಪೊಲೀಸ್​ ಇಲಾಖೆಯ ಹೆಸರಿನಲ್ಲಿದೆ, ಕಂದಾಯ ಇಲಾಖೆ ಬಿಲ್​ ಕಟ್ಟುವುದು ಸೂಕ್ತವಲ್ಲ. ಹೀಗಾಗಿ ಕರೆಂಟ್​ ಬಿಲ್​ ಪಾವತಿಸಲು ಬಾಕಿಯಾಗಿದ್ದರಂದ ಕೆಇಬಿ ಕರೆಂಟ್​ ಕಡಿತಗೊಳಿಸಿದೆ. ಇನ್ನು 2 ದಿನದಲ್ಲಿ ಮೀಟರ್​ ಹೆಸರನ್ನು ಕಂದಾಯ ಇಲಾಖೆಗೆ ಮಾಡಿ ಬಾಕಿ ಇರುವ ಬಿಲ್​ನ್ನು ಪಾವತಿಸಲಾಗುವುದು. ಅದು ಬಿಟ್ಟರೆ ಬೇರೆ ಏನು ಸಮಸ್ಯೆಯಾಗಿಲ್ಲ ಎಂದು ತಹಶೀಲ್ದಾರ್ ಶಿವಕುಮಾರ್​ ಬಿರಾದರ್ ಹೇಳಿದ್ದಾರೆ.

ಕಚೇರಿಯಲ್ಲಿ ಹಿರಿಯರ ನಾಗರಿಕರ ಸಹಾಯವಾಣಿ ಹಾಗೂ ಜನ ಸೇವಾ ಸ್ಪಂದನಾ ಕೇಂದ್ರ ಕೂಡ ಇದೆ. ಕಳೆದ 15 ದಿನಗಳಿಂದ ಇಲ್ಲಿ ಕತ್ತಲು ಆವರಿಸಿದೆ. ಎರಡೂ ಕಚೇರಿಗಳೂ ಕತ್ತಲಲ್ಲೇ ಮುಳುಗಿವೆ. ಕಚೇರಿಗೆ ಬರುವ ವೃದ್ಧರಿಗೆ ಬೆಳಕಿಲ್ಲದೇ ಸಮಸ್ಯೆಯಾಗುತ್ತಿದೆ. ವಿದ್ಯುತ್​ ಇಲ್ಲದೇ ಎಲ್ಲರೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಷ್ಟು ಹಣ ಬಾಕಿ ಎಂಬ ಬಗ್ಗೆ ಮಾಹಿತಿ ಇಲ್ಲ. ಇಲ್ಲಿ ಜನಸ್ಪಂದನಾ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಚೇರಿ, ಹಾಗೇ ಸಹಾಯವಾಣಿ ಇದ್ದು ಮೂರು ಕಚೇರಿಯವರು ನಾವು ಬಿಲ್​ ಕಟ್ಟಲ್ಲ, ನಾವು ಕಟ್ಟಲ್ಲ ಎಂದಿದ್ದರಿಂದ ಈಗ ಕರೆಂಟ್​ ಕಟ್​ ಆಗಿದೆ. ಮೂರೂ ಕಟ್ಟಡಕ್ಕೂ ಒಂದೇ ಮೀಟರ್​ ಇರುವುದು. ನಾವು ಕತ್ತಲ್ಲಲೇ ಕೆಲಸ ಮಾಡುತ್ತಿದ್ದೇವೆ. ಸರ್ಕಾರಿ ಕಚೇರಿಯ ವಿದ್ಯುತ್ ಕಡಿತ ಮಾಡಿದ್ದಾರೆ ಎಂದು ಕಚೇರಿ ನೌಕರ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ಹಾಗೇ ಹಿರಿಯ ನಾಗರಿಕರ ಸಹಾಯವಾಣಿ ಕಚೇರಿಯ ನೌಕರಿ ಪಲ್ಲವಿ ಮಾತನಾಡಿ, 15 ದಿನದಿಂದ ವಿದ್ಯುತ್​ ಇಲ್ಲ. 60 ವರ್ಷದ ಮೇಲ್ಪಟ್ಟವರೇ ಹೆಚ್ಚಾಗಿ ಇಲ್ಲಿಗೆ ಬರುತ್ತಾರೆ. ವಯಸ್ಸಾದವರು ಕತ್ತಲು ಕೋಣೆಗೆ ಹೇಗೆ ಬರುವುದು ಎಂದು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ನಮಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ. ನಾವು ದರ್ಶನ್ ಪುಟ್ಟಣ್ಣಯ್ಯ ಅವರ ಕಚೇರಿಯಲ್ಲೂ ಮಾತನಾಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಸ್ತ್ರಚಿಕಿತ್ಸೆ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರದ ಜನರನ್ನು ಭೇಟಿಯಾದ ಬೊಮ್ಮಾಯಿ; ಇದು ನನ್ನ ಪುನರ್ಜನ್ಮವೆಂದ ಮಾಜಿ ಸಿಎಂ

Last Updated :Dec 20, 2023, 9:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.