ETV Bharat / state

ಮೈಶುಗರ್ ಕಾರ್ಖಾನೆ ಪುನಾರಂಭ ಎಲ್ಲ ಕ್ರೆಡಿಟ್ ಅಕ್ಕನಿಗೆ ಹೋಗಲಿ.. ಸುರೇಶ್ ಗೌಡ ಟಾಂಗ್

author img

By

Published : Aug 18, 2022, 1:11 PM IST

MLA Suresh Gowda
ಸುರೇಶ್ ಗೌಡ

ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯ ಜನಕ್ಕೆ ಮಾತು ಕೊಟ್ಟಿದ್ರಂತೆ. ಹಾಗಾಗಿ, ಅವರೊಬ್ಬರೇ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ 50 ಕೋಟಿ ಅನುದಾನ ಬಿಡುಗಡೆ ಮಾಡಿಸಿ ಮೈಶುಗರ್ ಕಾರ್ಖಾನೆ ಪ್ರಾರಂಭ ಮಾಡಿಸಿದ್ದಾರೆ. ಅವರೊಬ್ಬರೇ ಹೋರಾಟ ಮಾಡಿದ್ದರಿಂದ ಎಲ್ಲ ಕ್ರೆಡಿಟ್ ಅವರಿಗೆ ಹೋಗಲಿ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಟಾಂಗ್ ಕೊಟ್ಟರು.

ಮಂಡ್ಯ: ಸರ್ಕಾರಿ ಸ್ವಾಮ್ಯದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಶುಗರ್ ಪುನರಾರಂಭದ ಎಲ್ಲ ಕ್ರೆಡಿಟ್ ಅಕ್ಕನಿಗೆ ಹೋಗಲಿ. ನಮ್ಮದೇನು ಹೋರಾಟ ಇಲ್ಲ. ಅವರೊಬ್ಬರೇ ಹೋರಾಟ ಮಾಡಿ ಕಾರ್ಖಾನೆ ಆರಂಭಿಸಿದ್ದಾರೆ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ವ್ಯಂಗ್ಯವಾಡಿದರು.

ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯ ಜನರಿಗೆ ಮಾತು ಕೊಟ್ಟಿದ್ದರಂತೆ. ಹಾಗಾಗಿ ಅವರೊಬ್ಬರೇ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ 50 ಕೋಟಿ ಅನುದಾನ ಬಿಡುಗಡೆ ಮಾಡಿಸಿ, ಮೈಶುಗರ್ ಕಾರ್ಖಾನೆ ಪ್ರಾರಂಭ ಮಾಡಿಸಿದ್ದಾರೆ. ಅವರೊಬ್ಬರೇ ಹೋರಾಟ ಮಾಡಿದ್ದಾರೆ, ಆದ್ದರಿಂದ ಎಲ್ಲಾ ಕ್ರೆಡಿಟ್ ಅವರಿಗೆ ಹೋಗಲಿ ಎಂದು ಕಿಡಿಕಾರಿದರು.

ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಗೌಡ

ಇದನ್ನೂ ಓದಿ: ಮಂಡ್ಯದ ಮೈಶುಗರ್ ಕಾರ್ಖಾನೆ ಪುನಾರಂಭ: ಬಾಯ್ಲರ್​ಗೆ ಅಗ್ನಿ ಸ್ಪರ್ಶಿಸಿ ಚಾಲನೆ

ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಗೆ ವಹಿಸಿ ಈಗ ಏನಾಗಿದೆ ಅಂತ ಜಿಲ್ಲೆಯ ಜನರಿಗೆ ಗೊತ್ತಾಗಿದೆ. ಕೆಲವರಿಗೆ ಮೈಶುಗರ್ ಕಾರ್ಖಾನೆ ಪುನರಾರಂಭದ ಆಲೋಚನೆಯೇ ಇರಲಿಲ್ಲ. ಮೈಶುಗರ್ ಆಸ್ತಿ ಮೇಲೆ ಕಣ್ಣು ಬಿದ್ದಿತ್ತು. ಹಾಗಾಗಿ, ಕಾರ್ಖಾನೆಯನ್ನು ಖಾಸಗಿಗೆ ವಹಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ, ಮೈಶುಗರ್ ಕಾರ್ಖಾನೆ ಆರಂಭದ ವಿಚಾರವಾಗಿ ಜೆಡಿಎಸ್ ಪಕ್ಷದ ಅಜೆಂಡಾ ಒಂದೇ ಆಗಿತ್ತು. ಸರ್ಕಾರವೇ ಕಾರ್ಖಾನೆ ನಡೆಸಬೇಕು ಎಂಬುದು ಜೆಡಿಎಸ್​ ಹೋರಾಟವಾಗಿತ್ತು ಎಂದರು.

ಇದನ್ನೂ ಓದಿ: ಆದಷ್ಟು ಬೇಗ ಮೈಶುಗರ್ ಕಾರ್ಖಾನೆ ರೀ ಓಪನ್​ ಮಾಡಿ : ಸಿಎಂಗೆ ಸಂಸದೆ ಸುಮಲತಾ ಮನವಿ

ಜಿಲ್ಲೆಯ ಜನತಾ ದಳ ಪಕ್ಷದ ಶಾಸಕರು ಹಾಗೂ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಅವರ ಹೋರಾಟದ ಫಲವಾಗಿ ಸರ್ಕಾರವೇ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಪ್ರಾರಂಭಕ್ಕೆ ಮುಂದಾಗಿದೆ. ಮೈಶುಗರ್ ಕಾರ್ಖಾನೆ ಮಂಡ್ಯ ಜನರ ಭಾವನೆಯಾಗಿದೆ. ಅದಕ್ಕೆ ಯಾವುದೇ ರೀತಿಯ ಧಕ್ಕೆಯಾಗದ ರೀತಿಯಲ್ಲಿ ಸರ್ಕಾರವೇ ನಡೆಸಿಕೊಂಡು ಹೋಗಬೇಕು ಎಂದು ಶಾಸಕರು ಸಲಹೆ ನೀಡಿದರು.

ಸಂಸದೆ ಸುಮಲತಾ ಅಂಬರೀಶ್ ಅವರು ಮೈಶುಗರ್ ಪುನಾರಂಭ ನನ್ನ ಮೂರು ವರ್ಷದ ಹೋರಾಟದ ಫಲ ಎಂದು ಹಾದಿ ಬೀದಿಯಲ್ಲಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಮೈಶುಗರ್ ನಿರಂತರವಾಗಿ ಓಡಲಿ ಅಥವಾ ಬಿಡಲಿ ಎಲ್ಲಾ ಕ್ರೆಡಿಟ್ ಅವರಿಗೆ ತಲುಪಲಿ ಎಂದು ಸುಮಲತಾ ಅಂಬರೀಶ್​ಗೆ ಶಾಸಕ ಸುರೇಶ್ ಗೌಡ ಟಾಂಗ್ ಕೊಟ್ಟರು.

ಇದನ್ನೂ ಓದಿ: ಸಕ್ಕರೆ ಕಾರ್ಖಾನೆ ನೋಂದಣಿಗೆ 26 ಕೋಟಿ ಮುಂಗಡ ಶುಲ್ಕ ಪಾವತಿಸಬೇಕಾಗಿದೆ: ಎಂ ಡಿ ವಿಕ್ರಮರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.