ETV Bharat / state

ವಿಷ ಸೇವಿಸಿ ಆಂಧ್ರ ಮೂಲದ ಇಬ್ಬರು ಪ್ರೇಮಿಗಳು ಆತ್ಮಹತ್ಯೆ..

author img

By

Published : Sep 16, 2019, 5:52 PM IST

ಇಂದು ಜಿಲ್ಲೆಯ ಕೆಜಿಎಫ್ ತಾಲೂಕಿನ ಐಪನಹಳ್ಳಿ ಗ್ರಾಮದ ಕೆರೆಯಲ್ಲಿಆಂಧ್ರ ಮೂಲದ ಇಬ್ಬರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

Lovers committed suicide

ಕೋಲಾರ:ವಿಷ ಸೇವಿಸಿ ಆಂಧ್ರ ಮೂಲದ ಇಬ್ಬರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟ‌ನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಐಪನಹಳ್ಳಿ ಗ್ರಾಮದ ಕೆರೆಯಲ್ಲಿ ಘಟನೆ ಜರುಗಿದೆ.

ವಿಷ ಸೇವಿಸಿ ಆಂಧ್ರ ಮೂಲದ ಇಬ್ಬರು ಪ್ರೇಮಿಗಳು ಆತ್ಮಹತ್ಯೆ..

ಆಂಧ್ರದ ವಿಕೋಟೆಯ ಗಸ್ತನಪಲ್ಲಿ ಗ್ರಾಮದ ನೀಲಕಂಠ (32), ಚಲ್ಲಪಲ್ಲಿ ಗ್ರಾಮದ ಲಲಿತ (28) ಮೃತರು. ಇಬ್ಬರಿಗೂ ಬೇರೆಯರ ಜೊತೆ ಮದುವೆಯಾಗಿತ್ತು. ಆದರೂ ಇವರಿಬ್ಬರೂ ಸಹ ಜೀವನ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಆಂಧ್ರದಿಂದ ಬೈಕ್​​ನಲ್ಲಿ ಐಪನಹಳ್ಳಿ ಕೆರೆ ಬಳಿ ಬಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಸಂಬಂಧ ಬೇತಮಂಗಲ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ಕೋಲಾರ
ದಿನಾಂಕ - 16-09-19
ಸ್ಲಗ್ - ಆತ್ಮಹತ್ಯೆ
ಫಾರ್ಮೆಟ್ - ಎವಿ



ಆಂಕರ್: ವಿಷ ಸೇವಿಸಿ ಆಂದ್ರ ಮೂಲದ ಇಬ್ಬರು ಪ್ರೇಮಿಗಳು ಅತ್ಮಹತ್ಯೆ ಮಾಡಿಕೊಂಡಿರುವ ಘಟ‌ನೆ ಕೋಲಾರದಲ್ಲಿ ಜರುಗಿದೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಐಪನಹಳ್ಳಿ ಗ್ರಾಮದ ಕೆರೆಯಲ್ಲಿ ಘಟನೆ ಜರುಗಿದ್ದು, ಎರಡು ದಿನದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ. ಇನ್ನು ಆಂದ್ರದ ವಿಕೋಟೆಯ ಗಸ್ತನಪಲ್ಲಿ ಗ್ರಾಮದ ನೀಲಕಂಠ (32),
ಚಲ್ಲಪಲ್ಲಿ ಗ್ರಾಮದ ಲಲಿತ (28)
ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದವರಾಗಿದ್ದು, ಇಬ್ಬರಿಗೂ ಸಹ ಬೇರೆ ಬೇರೆ ಮದುಯಾಗಿ ಅಕ್ರಮ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಆಂದ್ರದಿಂದ ಎಪಿ-03 ಬಿಎಲ್-6710 ಸ್ಪ್ಲೆಂಡರ್ ಬೈಕ್ ನಲ್ಲಿ ಐಪನಹಳ್ಳಿ ಕೆರೆ ಬಳಿ ಬಂದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಬೇತಮಂಗಲ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.