ETV Bharat / state

ನರೇಗಾ ಕೂಲಿ ಹಣ ಬಂದಿದೆ ಎಂದು ಸುಳ್ಳು ಹೇಳಿ ವೃದ್ಧೆಗೆ ₹16.45 ಲಕ್ಷ ಹಣ ವಂಚನೆ - Money fraud case

author img

By ETV Bharat Karnataka Team

Published : May 24, 2024, 2:50 PM IST

ನರೇಗಾ ಕೂಲಿ ಹಣ ಬಂದಿದೆ ಎಂದು ಸುಳ್ಳು ಹೇಳಿ ವೃದ್ಧೆಗೆ ₹16.45 ಲಕ್ಷ ಹಣ ವಂಚನೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

Ramanagara  Money fraud case  Fraud of money for old woman
ಸಂಗ್ರಹ ಚಿತ್ರ (ETV Bharat)

ರಾಮನಗರ: ನರೇಗಾ ಕೂಲಿ ಹಣ ಬಂದಿದೆ ಎಂದು ಸುಳ್ಳು ಹೇಳಿ ವೃದ್ಧೆಯಿಂದ ಚೆಕ್‌ಗೆ ಸಹಿ ಮಾಡಿಸಿಕೊಂಡು ₹16.45 ಲಕ್ಷ ಹಣವನ್ನು ಆಕೆಯ ಗಮನಕ್ಕೆ ಬಾರದಂತೆ ನಾಲ್ವರು ಡ್ರಾ ಮಾಡಿಕೊಂಡಿರುವ ಘಟನೆ ಚನ್ನಪಟ್ಟಣ ತಾಲೂಕಿನ ಬ್ರಹ್ಮಣಿಪುರ ಗ್ರಾಮದಲ್ಲಿ ನಡೆದಿದೆ.

ಮೇ 23 ರಂದು ಬೆಳಗ್ಗೆ 11 ಗಂಟೆಗೆ ನಡೆದಿದ್ದು, ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಮದ ಮಹಿಳೆ ಲಕ್ಷ್ಮಮ್ಮ ಎಂಬುವರು ಅನಕ್ಷರಸ್ಥೆಯಾಗಿದ್ದು, ಇತ್ತೀಚಿಗೆ ಇವರು ಜಮೀನು ಮಾರಿದ್ದರಿಂದ ಬಂದ 29 ಲಕ್ಷ ಹಣವನ್ನು ತಮ್ಮ ಉಳಿತಾಯ ಖಾತೆಯಲ್ಲಿ ಇರಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದಿದ್ದ ಅದೇ ಗ್ರಾಮದ ನವೀನ್, ಪ್ರಜ್ವಲ್, ರಮೇಶ್ ಮತ್ತು ರಾಜೇಶ್ ಎಂಬುವರು ನಿಮ್ಮ ಖಾತೆಗೆ ನಾವು ನರೇಗಾ ಕೆಲಸ ಮಾಡಿದ ಕೂಲಿ ಹಣ ಬಂದಿದೆ. ಹಣವನ್ನು ತೆಗೆದುಕೊಡಿ ಎಂದು ಹೇಳಿ ಕೆಲ ಖಾಲಿ ಚೆಕ್‌ಗೆ ಸಹಿ ಮಾಡಿಸಿಕೊಂಡು ₹200 ಹಣವನ್ನು ನೀಡಿದ್ದಾರೆ. ಬಳಿಕ ಹೆಚ್ಚು ಹಣವನ್ನು ಬರೆದುಕೊಂಡು ಬ್ಯಾಂಕ್‌ನಲ್ಲಿ ₹16.45 ಲಕ್ಷ ಹಣವನ್ನು ಹಂತಹಂತವಾಗಿ ಡ್ರಾ ಮಾಡಿದ್ದಾರೆ.

ಬ್ಯಾಂಕ್‌ನಲ್ಲಿ ಹಣ ಡ್ರಾ ಆಗಿರುವುದು ವೃದ್ದೆಗೆ ತಿಳಿದಿದೆ. ಆ ವೃದ್ಧೆ ನಾಲ್ಕು ಮಂದಿಯನ್ನು ಪ್ರಶ್ನಿಸಿದ್ದಾಳೆ. ಈ ಸಮಯದಲ್ಲಿ ಆಕೆಗೆ ಬೆದರಿಸಿದ್ದಾರೆ. ಬಳಿಕ ವೃದ್ಧೆ ಚನ್ನಪಟ್ಟಣ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ವೃದ್ಧೆಯ ದೂರಿನ ಅನ್ವಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಓವರ್‌ಟೇಕ್ ವಿಚಾರಕ್ಕೆ ಜಗಳ, ಕೆಎಸ್​ಆರ್​ಟಿಸಿ ಚಾಲಕನಿಗೆ ಚಾಕು ಇರಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.