ETV Bharat / state

ಮಳೆಯಿಂದ ಬೆಳೆ ಹಾನಿ.. ಇತ್ತ ಅಧಿಕಾರಿಗಳಿಂದ ಸರ್ವೆ ಕಾರ್ಯ ವಿಳಂಬ.. ರೈತನ ಗೋಳು ಕೇಳೋರ್ಯಾರು..

author img

By

Published : Oct 11, 2021, 3:31 PM IST

ಕಲಬುರಗಿ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ವಿಳಂಬ
ಕಲಬುರಗಿ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ವಿಳಂಬ

ಕೃಷಿ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಜುಲೈ ತಿಂಗಳಿನಿಂದ ಈವರೆಗೆ 57 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ‌. ಬೆಳೆ ಹಾನಿಯಾದ ಪ್ರದೇಶವನ್ನ ಸರ್ವೆ ಮಾಡುತ್ತೇವೆ. ಆದ್ರೆ, ಹೊಲಗಳಲ್ಲಿ ಕೆಸರು ಇರೋದ್ರಿಂದ ಸರ್ವೆ ಕಾರ್ಯಕ್ಕೆ ವಿಳಂಬ ಆಗ್ತಿದೆ ಅಂತಾ ಕೃಷಿ ಅಧಿಕಾರಿ ರತೇಂದ್ರ ಸ್ಪಷ್ಟನೆ ನೀಡಿದ್ದಾರೆ‌..

ಕಲಬುರಗಿ : ಮಳೆರಾಯನ ವಕ್ರದೃಷ್ಟಿಗೆ ಜಿಲ್ಲೆಯ ರೈತನ ಬದುಕು ಛಿದ್ರ ಛಿದ್ರವಾಗಿದೆ. ರಕ್ಕಸ ಮಳೆ-ಗಾಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಬೆಳೆ ಮಣ್ಣು-ನೀರು ಪಾಲಾಗಿದೆ. ಹಾಳಾದ ಬೆಳೆಗೆ ಪರಿಹಾರ ನೀರಿಕ್ಷೆಯಲ್ಲಿ ಅನ್ನದಾತನಿದ್ರೆ, ಅಧಿಕಾರಿಗಳು ಸರ್ವೆ ಕಾರ್ಯ ವಿಳಂಬ ಮಾಡ್ತಿರೋದು ರೈತನನ್ನ ಮತ್ತಷ್ಟು ಸಂಕಷ್ಟಕ್ಕೆ ದುಡಿದೆ. ಹಾಳಾಗಿದ್ದು ಹಾಳಾಯ್ತು, ಜಮೀನು ಕ್ಲೀನ್ ಮಾಡಿಕೊಂಡು ಮತ್ತೊಂದು ಬೆಳೆ ಬೆಳೆಯೋಣ ಅಂದುಕೊಂಡ್ರೆ ಸರ್ವೆ ಕಾರ್ಯ ವಿಳಂಬ ಅನ್ನದಾತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕಲಬುರಗಿ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ವಿಳಂಬ..

ಕಳೆದ ವರ್ಷ ಭೀಕರ ಭೀಮಾ ನದಿ ಪ್ರವಾಹಕ್ಕೆ ನಲುಗಿದ್ದ ಜಿಲ್ಲೆಯ ರೈತರಿಗೆ, ಈ ವರ್ಷ ಅತಿವೃಷ್ಟಿ ದುಸ್ವಪ್ನವಾಗಿ ಕಾಡುತ್ತಿದೆ. ರಕ್ಕಸ ಮಳೆ ಗಾಳಿಗೆ ಅನ್ನದಾತನ ಬದುಕು ಬರ್ಬಾದ್ ಆಗಿದೆ. ವಿಪರೀತ, ನಿರಂತರ ಧಾರಾಕಾರ ಮಳೆಗೆ ರೈತನ ಲಾಭದಾಯಕ ಬೆಳೆ ನೀರು ಪಾಲಾಗಿದೆ.

ಕೆಲವೆಡೆ ನೀರಿನ ರಭಸಕ್ಕೆ ಬೆಳೆ ಕೊಚ್ಚಿಕೊಂಡು ಹೋಗಿದ್ದರೆ, ಹಲವೆಡೆ ಜಮೀನಿನಲ್ಲಿ ನೀರು ನಿಂತು ತೊಗರಿ, ಎಳ್ಳು ಸೇರಿದಂತೆ ರೈತನಿಗೆ ಲಾಭ ತಂದುಕೊಡುವ ಬೆಳೆಗಳು ಕೊಳೆಯುತ್ತಿವೆ‌. ಭಾರಿ ಮಳೆ-ಗಾಳಿಗೆ ತೋಟಗಾರಿಕೆ ಬೆಳೆಗಳು ನೆಲಕ್ಕೆ ಉರುಳಿ ಹಾಳಾಗಿವೆ.

ಸಾಲ ಮಾಡಿ ಕಷ್ಟ ಪಟ್ಟು ಬೆಳೆದಿದ್ದ ಬೆಳೆ ಅತಿವೃಷ್ಟಿಯಿಂದ ಹಾಳಾಗಿ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬದುಕಿನ ಬೆಳೆ ಕಳೆದುಕೊಂಡು ನಷ್ಟದ ಸುಳಿಯಲ್ಲಿ ಸಿಲುಕಿರುವ ಅನ್ನದಾತ ಬೆಳೆ ಪರಿಹಾರದ ನಿರೀಕ್ಷೆಯಲ್ಲಿದ್ದಾನೆ. ಆದ್ರೆ, ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ವಿಳಂಬ ಮಾಡ್ತಿರೋದರಿಂದ ರೈತರು ಕಂಗಾಲಾಗಿದ್ದಾರೆ.

ಹಾಳಾಗಿದ್ದು ಹಾಳಾಯ್ತು, ಬೆಳೆ ಹಾನಿ ಸಮೀಕ್ಷೆ ಕಾರ್ಯ ಬೇಗ ಮುಗಿಸಿದ್ರೆ ಜಮೀನು ಕ್ಲೀನ್ ಮಾಡಿಕೊಂಡು ಮತ್ತೊಂದು ಬೆಳೆಯಾದರು ಬೆಳೆಯಬಹುದು ಎನ್ನುವ ಲೆಕ್ಕಾಚಾರದಲ್ಲಿ ರೈತರಿದ್ದರೆ, ಇತ್ತ ಜಿಲ್ಲಾಡಳಿತ, ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಸರ್ವೆ ವಿಳಂಬ ಮಾಡುತ್ತಿದ್ದು, ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಆಗಸ್ಟ್‌ ತಿಂಗಳಿನಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅದರಲ್ಲೂ ಜಿಲ್ಲೆಯ ಚಿಂಚೋಳಿ, ಚಿತ್ತಾಪುರ, ಅಫಜಲಪುರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ‌. ಮಳೆ ಹೊಡೆತಕ್ಕೆ ಬೆಳೆ ಹಾನಿಯಾಗಿದ್ರೆ, ಮಳೆ ನೀರಿನ ರಭಸಕ್ಕೆ ಬೆಳೆ ಕೂಡ ಕೊಚ್ಚಿಕೊಂಡು ಹೋಗಿದೆ. ಜೊತೆಗೆ ಜಿಲ್ಲೆಯ ಹಲವೆಡೆ ಫಲವತ್ತಾದ ಮಣ್ಣು ಕೂಡ ಕೊಚ್ಚಿ ಹೋಗಿ ಅನ್ನದಾತರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಜುಲೈ ತಿಂಗಳಿನಿಂದ ಈವರೆಗೆ 57 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ‌. ಬೆಳೆ ಹಾನಿಯಾದ ಪ್ರದೇಶವನ್ನ ಸರ್ವೆ ಮಾಡುತ್ತೇವೆ. ಆದ್ರೆ, ಹೊಲಗಳಲ್ಲಿ ಕೆಸರು ಇರೋದ್ರಿಂದ ಸರ್ವೆ ಕಾರ್ಯಕ್ಕೆ ವಿಳಂಬ ಆಗ್ತಿದೆ ಅಂತಾ ಕೃಷಿ ಅಧಿಕಾರಿ ರತೇಂದ್ರ ಸ್ಪಷ್ಟನೆ ನೀಡಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.