ETV Bharat / state

ಲಾಕ್​ಡೌನ್‌ನಿಂದ ಕೋಳಿ ಫಾರ್ಮ್​ಗಳಿಗೆ ನಷ್ಟ: ಪ್ರತ್ಯೇಕ ಪ್ಯಾಕೇಜ್‌ಗೆ ಮಾಲೀಕರ ಆಗ್ರಹ

author img

By

Published : May 12, 2021, 10:13 AM IST

ಲಾಕ್​ಡೌನ್‌ನಿಂದಾಗಿ ಕೋಳಿ ಪಾರ್ಮ್​ಗಳಿಗೆ ಸಾಕಷ್ಟು ನಷ್ಟವಾಗಿದ್ದು, ತಮಗೆ ಪ್ರತ್ಯೇಕ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಮಾಲೀಕರು ಮನವಿ ಮಾಡಿದ್ದಾರೆ.

Lockdown effect on Poultry farm
ಲಾಕ್​ಡೌನ್‌ನಿಂದ ಕೋಳಿ ಪಾರ್ಮ್​ಗಳಿಗೆ ನಷ್ಟ

ಹಾವೇರಿ: ಲಾಕ್​ಡೌನ್ ಪರಿಣಾಮ ಹಾವೇರಿಯಲ್ಲಿರುವ ಪತ್ರಿ ಕೋಳಿ ಸಾಕಾಣಿಕೆ ಕೇಂದ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.

ಲಾಕ್​ಡೌನ್‌ನಿಂದಾಗಿ ಕೋಳಿ ಫಾರ್ಮ್​ಗಳಿಗೆ ಕಾರ್ಮಿಕರು ಬರುವುದು ನಿಂತಿದೆ. ಕಾರ್ಮಿಕರಿಲ್ಲದೆ ಕೋಳಿ ಫಾರ್ಮ್​ ನಡೆಸುವುದೇ ಕಷ್ಟವಾಗಿದೆ. ಕೋಳಿ ಫಾರ್ಮ್‌ನಲ್ಲಿ ಉತ್ಪಾದನೆಯಾಗುವ ಮೊಟ್ಟೆಗಳ ವಿತರಣೆ, ಸಾಗಣಿಕೆಗೂ ತೊಂದರೆಯಾಗಿದೆ ಎಂದು ಕೋಳಿ ಸಾಕಣಿಕೆ ಕೇಂದ್ರದ ಮಾಲೀಕರು ಹೇಳುತ್ತಾರೆ.

ಪ್ರತ್ಯೇಕ ಪ್ಯಾಕೇಜ್ ಘೋಷಿಸುವಂತೆ ಮಾಲೀಕರ ಆಗ್ರಹ

ಕೋಳಿ ಮೊಟ್ಟೆಗಳ ಪ್ರಮುಖ ಖರೀದಿದಾರರು ಎಗ್‌ರೈಸ್ ಸೆಂಟರ್​ನವರು, ಡಾಬಾಗಳು. ಇದೀಗ ಇವುಗಳು ಕಾರ್ಯನಿರ್ವಹಿಸುತ್ತಿಲ್ಲ. ಪರಿಣಾಮ ಮೊಟ್ಟೆ ಮಾರಾಟ ಕುಸಿದಿದ್ದು ನಷ್ಟವಾಗುತ್ತಿದೆ.

ಹಲವು ಸಂಕಷ್ಟಗಳ ನಡುವೆ ತಾವು ಕೋಳಿ ಸಾಕಾಣಿಕೆ ಕೇಂದ್ರ ನಡೆಸುತ್ತಿದ್ದು, ಇದರ ನಡುವೆ ಲಾಕ್​ಡೌನ್ ಜಾರಿಗೆಯಾಗಿರುವುದು ಗಂಭೀರ ಸಮಸ್ಯೆ ತಂದಿದೆ. ಲಾಕ್​ಡೌನ್ ವೇಳೆ ತಮಗೆ ಪ್ರತ್ಯೇಕ ಪ್ಯಾಕೇಜ್ ಘೋಷಿಸುವಂತೆ ಮಾಲೀಕರು ಮನವಿ ಮಾಡಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.