ETV Bharat / state

ಹಾವೇರಿ ಮಕ್ಕಳಿಗೆ ವರದಾನವಾಯ್ತು ಜಿಲ್ಲಾಡಳಿತದ ಕೋವಿಡ್​ ಮುಂಜಾಗ್ರತಾ ಕ್ರಮ

author img

By

Published : Feb 4, 2022, 9:05 AM IST

Haveri district administration
ಹಾವೇರಿ ಜಿಲ್ಲಾಡಳಿತದ ಕೋವಿಡ್​ ಮುಂಜಾಗ್ರತಾ ಕ್ರಮ

ಕೋವಿಡ್​ ಮೂರನೇ ಅಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಇದುವರೆಗೂ 73 ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಅದರಲ್ಲಿ ಬಹುತೇಕ ಮಕ್ಕಳು ಮನೆಯಲ್ಲಿಯೇ ಗುಣಮುಖರಾಗಿದ್ದಾರೆ. 73 ಮಕ್ಕಳಲ್ಲಿ ಕೇವಲ ಒಂದೇ ಒಂದು ಮಗು ಜಿಲ್ಲಾಸ್ಪತ್ರೆಯ ಚಿಕ್ಕಮಕ್ಕಳ ಕೋವಿಡ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿದೆ. ಇದಕ್ಕೆ ಜಿಲ್ಲಾಡಳಿತ ಕೈಗೊಂಡ ಮುಂಜಾಗ್ರತೆ ಕ್ರಮಗಳೇ ಕಾರಣ.

ಹಾವೇರಿ: ಕೊರೊನಾ ಎರಡನೇ ಅಲೆ ಮುಗಿದ ನಂತರ ಮೂರನೇ ಅಲೆ ಮಕ್ಕಳಿಗೆ ಮಾರಕವಾಗಲಿದೆ ಎಂದು ಊಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಡಳಿತ ಕೈಗೊಂಡ ಮುಂಜಾಗ್ರತಾ ಕ್ರಮ ಇದೀಗ ಜಿಲ್ಲೆಯ ಮಕ್ಕಳಿಗೆ ವರದಾನವಾಗಿ ಪರಿಣಮಿಸಿದೆ.

ಹೌದು, ಜಿಲ್ಲೆಯಲ್ಲಿ ಮೂರನೇ ಅಲೆಯಲ್ಲಿ ಇದುವರೆಗೂ 73 ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಅದರಲ್ಲಿ ಬಹುತೇಕ ಮಕ್ಕಳು ಮನೆಯಲ್ಲಿಯೇ ಗುಣಮುಖರಾಗಿದ್ದಾರೆ. 73 ಮಕ್ಕಳಲ್ಲಿ ಕೇವಲ ಒಂದೇ ಒಂದು ಮಗು ಜಿಲ್ಲಾಸ್ಪತ್ರೆಯ ಚಿಕ್ಕಮಕ್ಕಳ ಕೋವಿಡ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿದೆ. ಇದಕ್ಕೆ ಜಿಲ್ಲಾಡಳಿತ ಕೈಗೊಂಡ ಮುಂಜಾಗ್ರತೆ ಕ್ರಮಗಳೇ ಕಾರಣ ಎನ್ನಲಾಗುತ್ತಿದೆ.

ಹಾವೇರಿ ಜಿಲ್ಲಾಡಳಿತದ ಕೋವಿಡ್​ ಮುಂಜಾಗ್ರತಾ ಕ್ರಮ

ಕೋವಿಡ್​ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಿದ್ದಂತೆ ಹಾವೇರಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತ್ತು. ಅಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಈಗ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಂಡಿದ್ದರು. ಜಿಲ್ಲೆಯಲ್ಲಿ ಶಾಲೆಗೆ ಬರುವ ಪ್ರತಿಯೊಬ್ಬ ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಲಾಗಿತ್ತು. ಪೌಷ್ಠಿಕಾಂಶದಿಂದ ಬಳಲುವ ಮಕ್ಕಳಿಗೆ ಪೌಷ್ಠಿಕಾಂಶ ಸೇರಿದಂತೆ ವಿವಿಧ ವಿಟಮಿನ್‌ ಮಾತ್ರೆಗಳನ್ನ ವಿತರಿಸಲಾಗಿತ್ತು.

ಮೊಟ್ಟೆ ಸೇರಿದಂತೆ ಮಕ್ಕಳಿಗೆ ಪೌಷ್ಠಿಕಾಂಶದ ಆಹಾರ ವಿತರಿಸಲಾಗಿತ್ತು. ಪ್ರತಿ ಮಗುವಿನ ಆರೋಗ್ಯ ಕಾರ್ಡ್ ಮಾಡಿ ನಿಗಧಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಖಾಸಗಿ ಮತ್ತು ಸರ್ಕಾರಿ ವೈದ್ಯರು ಪ್ರತಿ ಶಾಲೆಗೆ ಭೇಟಿ ನೀಡಿ ಮಕ್ಕಳ ತಪಾಸಣೆ ನಡೆಸಿದ್ದರು.

ಆವಾಗಲೇ ಜಿಲ್ಲೆಯಲ್ಲಿ ಸಂಭಾವ್ಯ ಮೂರನೇಯ ಅಲೆಗೆ ಮಕ್ಕಳನ್ನ ರಕ್ಷಿಸುವ ಮುಂದಾಲೋಚನೆ ಮಾಡಲಾಗಿತ್ತು. ಇದರಿಂದಾಗಿ ಜಿಲ್ಲೆಯಲ್ಲಿ ಮೂರನೇಯ ಅಲೆ ಮಕ್ಕಳಿಗೆ ಹೆಚ್ಚು ಪರಿಣಾಮ ಬೀರಲಿಲ್ಲ. ಹೀಗಾಗಿ ರಾಜ್ಯದಲ್ಲಿಯೇ ಹಾವೇರಿ ಜಿಲ್ಲೆಯಲ್ಲಿ ಮಕ್ಕಳಲ್ಲಿ ಕೊರೊನಾ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ.

ಕೇವಲ ಶಾಲಾ ವಿದ್ಯಾರ್ಥಿಗಳಲ್ಲಿ ಅಷ್ಟೇ ಅಲ್ಲದೆ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಸಹ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಜೊತೆಗೆ ಜಿಲ್ಲಾಡಳಿತ ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕಾಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ವಿಶೇಷ ವಾರ್ಡ್ ನಿರ್ಮಿಸಿತ್ತು. ಮಕ್ಕಳನ್ನು ಆಕರ್ಷಿಸುವ ಆಟಿಕೆ ಸಮಾನುಗಳನ್ನ ವಾರ್ಡ್‌ಗಳಲ್ಲಿ ಇರಿಸಲಾಗಿತ್ತು.

ಇಷ್ಟೆಲ್ಲಾ ಮುಂಜಾಗ್ರತೆ ವಹಿಸಿದ್ದರಿಂದ ಹಾವೇರಿ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್‌, ಇದೀಗ ಬೇರೆ ಖಾಯಿಲೆಯ ಮಕ್ಕಳಿಗೆ ಉಪಯೋಗವಾಗುತ್ತಿದೆ. ಜಿಲ್ಲೆಯಲ್ಲಿ ಹಲವು ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಂಡರು ಲಕ್ಷಣರಹಿತವಾಗಿದ್ದು, ಹೆಚ್ಚಿನ ತೊಂದರೆ ಮಾಡಿಲ್ಲ. ಅಂದು ಜಿಲ್ಲಾಡಳಿತ ಮಾಡಿದ ಮುಂದಾಲೋಚನೆ ಕೊರೊನಾದಿಂದ ಮಕ್ಕಳನ್ನ ರಕ್ಷಣೆ ಮಾಡಲು ಯಶಸ್ವಿಯಾಗಿದೆ.

ಓದಿ: ಫೇಸ್‌ಬುಕ್‌ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತ; ಶ್ರೀಮಂತಿಕೆಯಲ್ಲಿ ಅದಾನಿ, ಅಂಬಾನಿ ನಂತರದ ಸ್ಥಾನಕ್ಕೆ ಇಳಿಕೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.