ETV Bharat / state

ಸ್ಲೀಪರ್ ಸೇಲ್​ಗಳನ್ನ ಬಿಹಾರ್ ಜೈಲಿಗೆ ಕಳುಹಿಸಿದ್ದೆ: ಸಿಎಂ ಬಸವರಾಜ ಬೊಮ್ಮಾಯಿ

author img

By

Published : Nov 23, 2022, 9:05 PM IST

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಮಂಗಳೂರು ಬ್ಲಾಸ್ಟ್ ಪ್ರಕರಣದ ಹಿನ್ನೆಲೆ ಗುಪ್ತಚರ ಇಲಾಖೆಯ ವೈಫಲ್ಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಇಲ್ಲಿ ಗುಪ್ತಚರ ವೈಫಲ್ಯ ಎಂಬ ಪ್ರಶ್ನೆ ಇಲ್ಲ. ಈ ಘಟನೆಗಳು ಎಲ್ಲ ಕಾಲದಲ್ಲಿಯೂ ನಡೆದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದಾರೆ.

ಹಾಸನ (ಹಳೇಬೀಡು): ನಾನು ಗೃಹ ಮಂತ್ರಿಯಾಗಿದ್ದಾಗ 18 ಮಂದಿ ಸ್ಲೀಪರ್ ಸೇಲ್ ಗಳನ್ನ ಬಿಹಾರ್ ಜೈಲಿಗೆ ಕಳಿಸಿದ್ದೆ. ಪಕ್ಕದ ರಾಜ್ಯ ಮತ್ತು ಅಂತಾರಾಷ್ಟ್ರೀಯ ಗಡಿಗಳಲ್ಲಿ ಹಲವಾರು ಜನ ಟ್ರೈನಿಂಗ್ ತಗೊಳ್ಳೋದು ಬರೋದು ನಿರಂತರವಾಗಿ ನಡೆಯುತ್ತಿರುವ ಒಂದು ಪ್ರಕ್ರಿಯಾಗಿದೆ. ಅಂತಹ ಚಟುವಟಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಅವಕಾಶ ಕೊಟ್ಟಿಲ್ಲ ಅಂತ ಸಿಎಂ ಬಸವರಾಜ್ ಬೊಮ್ಮಾಯಿ ಮಂಗಳೂರು ಬ್ಲಾಸ್ಟ್ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದರು.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡಿನ ಪುಷ್ಪಗಿರಿ ಮಠಕ್ಕೆ ಭೇಟಿ ಕೊಟ್ಟ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಲೀಪರ್ ಸೆಲ್ ಬಹುತೇಕ ಕರಾವಳಿ ಪ್ರದೇಶದಲ್ಲಿ ಆಕ್ಟಿವ್ ಆಗಿರುವುದನ್ನು ಗಮನಿಸಿದ್ದೇನೆ. ಶಿರಸಿ ಭಟ್ಕಳ ಆ ಭಾಗದಿಂದ ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿದ್ದ ಅಂತಹ ವ್ಯಕ್ತಿಗಳನ್ನು ವಶಕ್ಕೆ ಪಡೆದು, ಬಿಹಾರ್ ಜೈಲಿಗೆ ಕಳುಹಿಸಿದ್ದೇವೆ.

ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ: ಗೃಹಮಂತ್ರಿಯಾಗಿದ್ದಾಗ ಎಲ್ಲಾ ದಕ್ಷಿಣ ಭಾರತದ ಡಿಜಿಗಳಿಗೆ ಕರೆ ಕೊಟ್ಟಿದ್ದೆ. ಬಹಳಷ್ಟು ಜನ ಕೃತ್ಯವನ್ನು ಮಾಡಿ ಬಾರ್ಡರ್ ಕ್ರಾಸ್ ಮಾಡಿ ಬೇರೆ ರಾಜ್ಯಕ್ಕೆ ಹೋಗ್ತಾರೆ. ಅಲ್ಲಿ ಟ್ರೈನಿಂಗ್ ತಗೊಂಡು ಇಲ್ಲಿಗೆ ಬರ್ತಾರೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳು ಒಗ್ಗಟ್ಟಾಗಿ ಒಂದು ಗುಪ್ತಚರ ಮಾಹಿತಿ ಶೇರ್ ಮಾಡಬೇಕು. ಅಲ್ಲಿರುವಂತಹ ಆ್ಯಂಟಿ ಟೆರರಿಸ್ಟ್ ಆಕ್ಟಿವಿಟೀಸ್​ಗಳನ್ನ ಶೇರ್ ಮಾಡಿ ಎಫರ್ಟ್ ಮಾಡಿದ್ರೆ ಬಹಳಷ್ಟು ನಿಯಂತ್ರಣ ಮಾಡಲು ಸಾಧ್ಯ. ಈ ವಿಚಾರವಾಗಿ ನಾನು ನನ್ನ ಮುಂದಿನ ದಿನಗಳಲ್ಲಿ ಎಲ್ಲಾ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆಯುತ್ತೇನೆ ಎಂದರು.

ಗುಪ್ತಚರ ವೈಫಲ್ಯ ಇಲ್ಲ: ಮಂಗಳೂರು ಬ್ಲಾಸ್ಟ್ ಪ್ರಕರಣದ ಹಿನ್ನೆಲೆ ಗುಪ್ತಚರ ಇಲಾಖೆಯ ವೈಫಲ್ಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಇಲ್ಲಿ ಗುಪ್ತಚರ ವೈಫಲ್ಯ ಎಂಬ ಪ್ರಶ್ನೆ ಇಲ್ಲ. ಈ ಘಟನೆಗಳು ಎಲ್ಲಾ ಕಾಲದಲ್ಲಿಯೂ ನಡೆದಿದೆ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋಟಿವೇಟೆಡ್ ಆಗಿರುವಂಥದ್ದು, ಇಲ್ಲಿನ ಸ್ಥಳೀಯರಿಗಿಂತ ಈಗ ಬಹಳಷ್ಟು ಜನ ಬಾಂಗ್ಲಾದೇಶದಿಂದ ರಾಜ್ಯಕ್ಕೆ ಬಂದಿದ್ದು, ಅಂತಹ ವ್ಯಕ್ತಿಗಳನ್ನ ಗುರುತಿಸಿ ಬಾರ್ಡರ್​ಗೆ ಬಿಟ್ಟು ಬರುವಂತಹ ಕೆಲಸ ಮಾಡುತ್ತಿದ್ದೇವೆ.

ಆದರೆ, ಬಾಂಗ್ಲಾದೇಶ ಬಾರ್ಡರ್​ನಲ್ಲಿ ಬಹಳ ಸುಲಭವಾಗಿ ದೇಶಕ್ಕೆ ಬರಲು ಬಿಡುತ್ತಿದ್ದು, ಈ ರೀತಿ ಘಟನೆ ನಡೆಯಲು ಹಲವಾರು ಕಾರಣಗಳು ಎನ್ನಬಹುದು. ಇಂತಹ ವಿಚಾರ ಸಿದ್ದರಾಮಯ್ಯಗೆ ಗೊತ್ತಿದೆ. ರಾಜಕಾರಣಕ್ಕಾಗಿ ಸ್ಟೇಟ್ಮೆಂಟ್ ಕೊಡ್ತಿದ್ದಾರೆಂದು ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.

ಈತರಹ ಮಾತನಾಡುವುದು ಜವಾಬ್ದಾರಿ ಕೆಲಸ ಅಲ್ಲ: ಸಿಎಂಗೆ ಅಂಟಿರೋಗ ಶುರುವಾಗಿದೆ ಎಂಬ ಸಿದ್ದರಾಮಯ್ಯನವರ ಮತ್ತೊಂದು ಪ್ರಶ್ನೆಗೆ, ಯಾರಿಗೆ ಅಂಟಿರೋಗ ಇದೆ ಎಂದು ಜನ ತೀರ್ಮಾನ ಮಾಡುತ್ತಾರೆ. ಸತ್ಯ ಏನು ಎಂಬುದು ಗೊತ್ತಾಗಲಿದೆ. ಅವರ ಕಾಲದಲ್ಲಿ ಆಗಿರುವ ಹಗರಣಗಳ ದಾಖಲೆಗೆ ಬಿಡುಗಡೆ ಮಾಡುತ್ತೇವೆ. ಅದು ಸತ್ಯ ಅಲ್ವಾ? ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ.

ಸತ್ಯವನ್ನು ಎದುರಿಸುವ ಕೆಲಸವನ್ನು ಅವರು ಮಾಡಲಿ, ಅದನ್ನ ಬಿಟ್ಟು ನಮ್ಮ ಕಾಲದಲ್ಲಿ ಆಗಿರಲಿಲ್ಲ, ನಮ್ಮ ಕಾಲದಲ್ಲಿ ಆಗಿದ್ದರೆ ಏನಾಯ್ತು ಈತರ ಮಾತನಾಡುವುದು ಜವಾಬ್ದಾರಿ ಕೆಲಸ ಅಲ್ಲ. ನಾವೇನು ಹೇಳಿದ್ದೆವು ಅದಕ್ಕೆ ದಾಖಲೆಯನ್ನು ಕೊಡುತ್ತೇವೆ. ಅವರು ಅದನ್ನು ಎದುರಿಸಲಿ ಅಷ್ಟೇ ಎಂದರು.

ಹಾಸನ ಜಿಲ್ಲೆಯಲ್ಲಿ ಹೆಚ್ಚಾಗಿರುವ ಕಾಡಾನೆಗಳ ಸಮಸ್ಯೆಗೆ ಈಗಾಗಲೇ ಟಾಸ್ಕ್ ಫೋರ್ಸ್ ರಚನೆ ಮಾಡಲು ಆದೇಶ ನೀಡಿದ್ದು, ಇದಕ್ಕೆ ಹೆಚ್ಚುವರಿ 100 ಕೋಟಿ ರೂಪಾಯಿಗಳನ್ನು ಮುಂದಿನ ಬಜೆಟ್​ನಲ್ಲಿ ಮೀಸಲಿಡುತ್ತೇನೆ. ಬಂಡಿಪುರ ಅರಣ್ಯ ಪ್ರದೇಶದಲ್ಲಿ ಆರ್ಡರ್ ನಿರ್ಮಾಣ ಮಾಡಲು ಪ್ರಾಯೋಗಿಕವಾಗಿ ಕೆಲಸ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಆನೆ ಹಾವಳಿ ತಪ್ಪಿಸಲು ಎಷ್ಟು ಹಣ ಬಿಡುಗಡೆ ಮಾಡಲು ನಮ್ಮ ಸರ್ಕಾರ ಸಿದ್ಧವಿದೆ ಎಂದರು.

ಓದಿ: ಮಂಗಳೂರು ಬ್ಲಾಸ್ಟ್ ಪ್ರಕರಣ.. ಬೇರೆಡೆ ಹೋಗಿ ಬಾಂಬ್​ ಸ್ಫೋಟಿಸುವ ಉದ್ದೇಶ ಅವರದ್ದಾಗಿತ್ತು: ಎಡಿಜಿಪಿ ಅಲೋಕ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.