ETV Bharat / state

ಶಕ್ತಿ ಯೋಜನೆಯಡಿ ಮಹಿಳೆಯರ ಭರ್ಜರಿ ಓಡಾಟ: ವಾಯುವ್ಯ ಸಾರಿಗೆಯಲ್ಲಿ ನಾರಿಯರ ಸಂಚಾರದಿಂದ ಆದ ಟಿಕೆಟ್​ ಮೌಲ್ಯ ಎಷ್ಟು ಗೊತ್ತಾ?

author img

By

Published : Jun 21, 2023, 3:57 PM IST

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಮಹಿಳಾ ಪ್ರಯಾಣಿಕರ ಮತ್ತು ಟಿಕೆಟ್​ ಮೌಲ್ಯದ ವಿವರ ಇಲ್ಲಿದೆ.

Etv Bharatlakhs-of-women-travelled-through-shakti-scheme-in-n-w-k-r-t-corporation
ಶಕ್ತಿ ಯೋಜನೆಯಡಿ ಮಹಿಳೆಯರು ಭರ್ಜರಿ ಓಡಾಟ: ವಾಯುವ್ಯ ಸಾರಿಗೆಯಲ್ಲಿ ನಾರಿಯರ ಓಡಾಟದಿಂದ ಆದ ಟಿಕೆಟ್​ ಮೌಲ್ಯ ಎಷ್ಟು ಗೊತ್ತಾ?

ಹುಬ್ಬಳ್ಳಿ: ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯಡಿ ಪ್ರತಿ ದಿನ ಲಕ್ಷಾಂತರ ಮಹಿಳೆಯರು ರಾಜ್ಯದ ವಿವಿಧೆಡೆಗೆ ಸಂಚಾರ ಮಾಡುತ್ತಿದ್ದಾರೆ. ಇನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಗೆ ಬರುವ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರಕನ್ನಡ ಸೇರಿ ಒಟ್ಟು 6 ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಜೂ.20 ರಂದು ಮಂಗಳವಾರ ಬರೋಬ್ಬರಿ 14,47,223 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಇವರ ಪ್ರಯಾಣದ ಟಿಕೆಟ್ ಮೌಲ್ಯ ರೂ. 3,59,28,000 ಗಳಾಗಿದೆ ಎಂದು ತಿಳಿದುಬಂದಿದೆ.

ಸಾರಿಗೆ ಸಂಸ್ಥೆಯ ವಿಭಾಗವಾರು ಮಾಹಿತಿ: ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆಯಲ್ಲಿ ಒಟ್ಟು 1.90 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್​ ಮೌಲ್ಯ 22.96 ಲಕ್ಷ ರೂಪಾಯಿಯಾಗಿದೆ. ಹುಬ್ಬಳ್ಳಿ ಗ್ರಾಮಾಂತರ ಸಾರಿಗೆ ವಿಭಾಗದಲ್ಲಿ 96 ಸಾವಿರ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್​ ಮೌಲ್ಯ 33.26 ಲಕ್ಷ ರೂ. ಆಗಿದೆ. ಧಾರವಾಡ ಗ್ರಾಮಾಂತರ ಸಾರಿಗೆ ವಿಭಾಗದಲ್ಲಿ 1.22 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್​ ಮೌಲ್ಯ 32.51 ಲಕ್ಷ ರೂ. ಗಳಾಗಿದೆ. ಬೆಳಗಾವಿ ಸಾರಿಗೆ ವಿಭಾಗದಲ್ಲಿ 2.32ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್​ ಮೌಲ್ಯ 46.33 ಲಕ್ಷ ರೂ. ಗಳಾಗಿದೆ.

ಇನ್ನು, ಚಿಕ್ಕೋಡಿ ಸಾರಿಗೆ ವಿಭಾಗದಲ್ಲಿ 1.90 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್​ ಮೌಲ್ಯ 47.39 ಲಕ್ಷ ರೂ. ಗಳಾಗಿದೆ. ಬಾಗಲಕೋಟೆ ಸಾರಿಗೆ ವಿಭಾಗದಲ್ಲಿ 1.68 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್​ ಮೌಲ್ಯ 53.14 ಲಕ್ಷ ರೂ. ಗಳಾಗಿದೆ. ಗದಗ ಸಾರಿಗೆ ವಿಭಾಗದಲ್ಲಿ 1.44 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಕ್​ ಮೌಲ್ಯ 42.80 ಲಕ್ಷ ರೂ. ಗಳಾಗಿದೆ. ಹಾವೇರಿ ಸಾರಿಗೆ ವಿಭಾಗದಲ್ಲಿ 1.61 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್​ ಮೌಲ್ಯ 42.09 ಲಕ್ಷ ರೂ. ಗಳಾಗಿದೆ. ಉತ್ತರ ಕನ್ನಡ ಸಾರಿಗೆ ವಿಭಾಗದಲ್ಲಿ 1.45 ಮಹಿಳೆಯರು ಪ್ರಯಾಣಿಸಿದ್ದು, ಟಿಕೆಟ್​ ಮೌಲ್ಯ 38.80 ಲಕ್ಷ ರೂ. ಗಳಾಗಿದೆ.

ಶಕ್ತಿ ಯೋಜನೆ ಜಾರಿಯಾದ ಜೂನ್ 11ರಿಂದ 20 ರ ವರೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಒಟ್ಟು 1,16,68,927 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಒಟ್ಟು ಪ್ರಯಾಣದ ಟಿಕೆಟ್ ಮೌಲ್ಯ ರೂ. 29,61,14,270 ಗಳಾಗಿದೆ. ಜೂ. 11 ರಿಂದ 20 ರವರೆಗೆ ಮಹಿಳೆಯರು ಪ್ರಯಾಣಿಕರ ಸಂಖ್ಯೆ, ಪ್ರಯಾಣದ ಟಿಕೆಟ್ ಮೌಲ್ಯ ಇಂತಿದೆ.

ದಿನಾಂಕಪ್ರಯಾಣಿಸಿದ ಮಹಿಳೆಯರ ಸಂಖ್ಯೆಒಟ್ಟು ಟಿಕೆಟ್ ಮೌಲ್ಯ
ಜೂ.111,22,354 36,17,096
ಜೂ.128, 31,840 2,10,66,638
ಜೂ.1311,08,9302,72,19,029
ಜೂ.1412,71,5363,02,52,317
ಜೂ.1513,18,0213,21,81,665
ಜೂ.1613,24,517 3,13,80,097
ಜೂ.1713,36,125 3,38,47,490
ಜೂ.1813,88,5854,00,88,480
ಜೂ.1915,19,7964,05,33,458
ಜೂ.2014,47,2233,59,28,000

ಇದನ್ನೂ ಓದಿ: ಸರ್ಕಾರಿ ಬಸ್​ನಲ್ಲಿ ಸೀಟ್​ಗಾಗಿ ನಾರಿಯರ ಕಿತ್ತಾಟ: ವೈರಲ್ ವಿಡಿಯೋ

ವಾರದಲ್ಲಿ ಶಕ್ತಿ ಯೋಜನೆಯ ಪ್ರಯಾಣ ಮೌಲ್ಯ 70.28 ಕೋಟಿ ರೂ, : ರಾಜ್ಯಾದ್ಯಂತ ಜೂನ್ 11 ರಂದು ಆರಂಭಗೊಂಡ ಶಕ್ತಿ ಯೋಜನೆಯಡಿ ಜೂ.17ರ ವರೆಗೆ ಬರೋಬ್ಬರಿ 3,12,21,241 ಮಹಿಳೆಯರು ಪ್ರಯಾಣಿಸಿದ್ದಾರೆ. ಆ ಮೂಲಕ ಬರೋಬ್ಬರಿ 70.28 ಕೋಟಿ ರೂ. ಮೌಲ್ಯದ ಉಚಿತ ಟಿಕೆಟ್​​ನಲ್ಲಿ ಪ್ರಯಾಣಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.