ETV Bharat / state

ರೈತರ ಕೈ ಸೇರದ ಪರಿಹಾರ ಧನ... ಸರ್ಕಾರದ ಕೋಟಿ ಕೋಟಿ ರೂ. ಘೋಷಣೆ ಏನಾಯ್ತು..?

author img

By

Published : Dec 12, 2019, 7:10 PM IST

Farmers Beneficiaries suffering without Relief Compensation
ರೈತ ಫಲಾನುಭವಿಗಳ ಕೈ ಸೇರದ ಪರಿಹಾರ ಧನ...ಸರ್ಕಾರದ ಕೋಟಿ ಕೋಟಿ ರೂ. ಘೋಷಣೆ..?

ಬೆಳೆ ಹಾನಿಯಾಗಿ ಎರಡು ತಿಂಗಳು ಕಳೆದರೂ ಕೂಡ ಪರಿಹಾರದ ಹಣ ಮಾತ್ರ ಪಲಾನುಭವಿ ರೈತನ ಕೈಸೇರುತ್ತಿಲ್ಲ. ನಿರೀಕ್ಷೆಯ ಬೆನ್ನತ್ತಿ ಬ್ಯಾಂಕ್, ಸರ್ಕಾರಿ ಕಚೇರಿಗಳನ್ನ ಅಲೆದು ರೈತನ ಚಪ್ಪಲಿ ಸವೆಯುತ್ತಿವೇ ವಿನಃ ಸರ್ಕಾರದ ಯಾವುದೇ ಬೆಳೆ ವಿಮಾ ಅಥವಾ ಫಸಲು ಭೀಮಾ ಯೋಜನೆಗಳು ಅರ್ಥಿಕ ನೆರವಿಗೆ ಬಂದಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.

ಹುಬ್ಬಳ್ಳಿ: ಬೆಳೆ ಹಾನಿಯಾಗಿ ಎರಡು ತಿಂಗಳು ಕಳೆದರೂ ಕೂಡ ಪರಿಹಾರದ ಹಣ ಮಾತ್ರ ಪಲಾನುಭವಿ ರೈತನ ಕೈ ಸೇರುತ್ತಿಲ್ಲ. ನಿರೀಕ್ಷೆಯ ಬೆನ್ನತ್ತಿ ಬ್ಯಾಂಕ್, ಸರ್ಕಾರಿ ಕಚೇರಿಗಳನ್ನ ಅಲೆದು ರೈತನ ಚಪ್ಪಲಿ ಸವೆಯುತ್ತಿವೇ ವಿನಃ ಬೆಳೆ ವಿಮೆ ಅಥವಾ ಫಸಲು ಭೀಮಾ ಯೋಜನೆಗಳು ಅರ್ಥಿಕ ನೆರವಿಗೆ ಬಂದಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.

ರೈತ ಫಲಾನುಭವಿಗಳ ಕೈ ಸೇರದ ಪರಿಹಾರ ಧನ...ಸರ್ಕಾರದ ಕೋಟಿ ಕೋಟಿ ರೂ. ಘೋಷಣೆ..?

ಈಗಾಗಲೇ ಭಾರೀ ಮಳೆಯಿಂದ ಕಷ್ಟ ಅನುಭವಿಸಿದ್ದ ರೈತನಿಗೆ ಈಗ ಬೆಳೆ ನಷ್ಟದ ಹೊಡೆತ. ಇನ್ನೂ ರೈತರ ನೆರವಿಗೆ ನಿಲ್ಲುತ್ತೇವೆ. ರೈತರಿಗಾಗೇ ನಮ್ಮ ಸರ್ಕಾರ ಎಂದೆಲ್ಲ ವೋಟು ಗಿಟ್ಟಿಸಿಕೊಳ್ಳುವ ಯಾವುದೇ ಸರ್ಕಾರ ಅಥವಾ ಸರ್ಕಾರಿ ಯೋಜನೆಗಳು ನಮ್ಮ ನೆರವಿಗೆ ಬರುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಅಷ್ಟೇಅಲ್ಲದೇ, ಸರ್ಕಾರ ರೈತರಿಗೆ ಅಷ್ಟು ಕೋಟಿ ಇಷ್ಟು ಕೋಟಿ ಹಣ ಬಿಡುಗಡೆ ಮಾಡಿದೆ ಎಂದು ಹೇಳಿಕೊಳ್ಳುತ್ತಿದೆ ಹೊರತು ಯಾವುದೇ ಹಣ ರೈತನ ಕೈಗೆ ಸೇರಿಲ್ಲ. 2018ರ ಫಸಲು ಭಿಮಾ ಯೋಜನೆಯ ಹಣ ಕೆಲವೊಬ್ಬರಿಗೆ ಕೈ ಸೇರಿದ್ರೆ ಇನ್ನು ಕೆಲವರಿಗೆ ಸಿಕ್ಕಿಲ್ಲ. ಇನ್ನಾದರೂ ರೈತರ ಕಡೆ ಗಮನ ಹರಿಸಿ ಕೂಡಲೇ ಸರ್ಕಾರ ರೈತರಿಗೆ ಬೆಳೆ ಪರಿಹಾರವನ್ನು ಒದಗಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

Intro:ಹುಬ್ಬಳ್ಳಿ-03

ಬೆಳೆ ಹಾನಿಯಾಗಿ ಎರಡು ತಿಂಗಳು ಕಳೆದರು ಕೂಡ ಬೆಳೆ ಪರಿಹಾರದ ಹಣ ಮಾತ್ರ ಪಲಾನುಭವಿ ರೈತನ ಕೈಸೇರುತ್ತಿಲ್ಲ. ಬೆಳೆ ಪರಿಹಾರದ ನಿರೀಕ್ಷೆಯಲ್ಲಿದ್ದ ರೈತನಿಗೆ ಸರಿಯಾದ ಸಮಯಕ್ಕೆ ಬೆಳೆ ಪರಿಹಾರ ಬಾರದೇ ರೈತರು ನಿರಾಶರಾಗುವಂತೆ ಮಾಡಿದೆ.

ಹೌದು. ರೈತನ ಜೀವನಕ್ಕೆ ಆಧಾರವಾಗಿ ಸರ್ಕಾರದಿಂದ ಕೊಡ ಮಾಡುವ ಬೆಳೆ ಪರಿಹಾರ ಇಷ್ಟು ದಿನಗಳಾದರೂ ರೈತನ ಕೈಸೇರುತ್ತಿಲ್ಲ. ಆದರೇ ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗೆ ಅಲೆದು ಅಲೆದು ರೈತನ ಚಪ್ಪಲಿ ಮಾತ್ರ ಸವೆಯುತ್ತಿವೆ ವಿನಃ ಸರ್ಕಾರದ ಯಾವುದೇ ಬೆಳೆ ವಿಮಾ ಹಾಗೂ ಫಸಲ ಭೀಮಾ ಯೋಜನೆಯ ಅರ್ಥಿಕ ನೆರವು ಬಂದಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.

ಮಳೆಯಿಂದ ತುಂಬಾ ಕಷ್ಟ ಅನುಭವಿಸಿದ್ದೇವೆ. ಬೆಳೆಯ ಹಾನಿಯಿಂದ ಸುಧಾರಿಸಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ.ಸರ್ಕಾರ ರೈತರಿಗೆ ಅಷ್ಟು ಕೋಟಿ ಬಿಡುಗಡೆ ಮಾಡಿದೆ.ಇಷ್ಟು ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳುತ್ತಿದೆ ಹೊರತು ಯಾವುದೇ ಹಣ ರೈತನ ಕೈಗೆ ಸೇರಿಲ್ಲ. 2018ರ ಫಸಲ ಭೀಮಾ ಯೋಜನೆಯ ಹಣ ಕೆಲವೊಬ್ಬರಿಗೆ ಬಂದಿದೆ. ಕೆಲವು ರೈತರಿಗೆ ಬಂದಿಲ್ಲ. ಬೆಳೆ ಪರಿಹಾರಕ್ಕೆ ಸರ್ಕಾರದ ಆರ್ಥಿಕ ನೆರವಿನಿಂದ ರೈತನ ಜೀವನ ನಡೆಸಲು ಒಂದು ದಾರಿಯಾಗುತ್ತದೆ. ಕೂಡಲೇ ಸರ್ಕಾರ ರೈತರಿಗೆ ಬೆಳೆ ಪರಿಹಾರವನ್ನು ಒದಗಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ಬೈಟ್ - ಬಸವರಾಜ್, ರೈತBody:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.