ETV Bharat / state

ಬೆಂಗಳೂರು ಮಳೆಯಿಂದ ಮುಳುಗಲು ಪ್ರಕೃತಿ ಕಾರಣವೇ ಹೊರತು ಸರ್ಕಾರವಲ್ಲ: ಬಿ.ಸಿ.ಪಾಟೀಲ್..

author img

By

Published : Sep 6, 2022, 10:43 PM IST

kn_dvg_04_06_
ಬಿ.ಸಿ.ಪಾಟೀಲ್

ಕಾಂಗ್ರೆಸ್ ನಾಯಕರ ಕಣ್ಣು ಕಾಮಾಲೆ ಕಣ್ಣು, ಅದಕ್ಕೆ ನಾವು ಮಾಡುವ ಕೆಲಸ ಕಾಂಗ್ರೆಸ್ ನಾಯಕರ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಬಿಸಿ ಪಾಟೀಲ್​ ಹೇಳಿದರು.

ದಾವಣಗೆರೆ: ಬೆಂಗಳೂರು ಮಳೆಯಿಂದ ಮುಳುಗಲು ಪ್ರಕೃತಿ ಕಾರಣವೇ ಹೊರತು ಸರ್ಕಾರ ಅಲ್ಲ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು ಬೇರೆ ಪಕ್ಷಗಳ ವಿರುದ್ಧ ಇದರ ಬಗ್ಗೆ ದೂಷಣೆ ಮಾಡುವಂತಹದ್ದಲ್ಲ, ಬೇರೆ ಸರ್ಕಾರಗಳಿದ್ದಾಗ ಸರಿಯಾದ ಕಾಲುವೆ ವ್ಯವಸ್ಥೆ ಮಾಡದೇ ಇರುವುದರಿಂದ ಈ ಸಮಸ್ಯೆ ಆಗಿದೆ.

ಇನ್ನು ಟೌನ್ ಪ್ಲಾನ್ ಹಾಗೂ ಲೇಔಟ್ ಪ್ಲಾನ್​ಗಳ ಅಪ್ರೂವ್ ಮಾಡುವ ವೇಳೆ ಬೇಕಾಬಿಟ್ಟಿ ಮಾಡಿದ್ದರಿಂದ ಶೇಖರಣೆಯಾಗಿರುವ ನೀರು ಹೊರ ಹೋಗಲು ಸಾಧ್ಯವಾಗಿಲ್ಲ. ಇಡಿ ರಸ್ತೆಗಳು ಕಾಂಕ್ರೀಟ್ ಮಯವಾಗಿದ್ದರಿಂದ ನೀರು ಕೂಡ ಹೀರಿಕೊಳ್ಳುವುದಿಲ್ಲ. ಅಕಾಲಿಕ ಮಳೆಯಾಗಿದ್ದರಿಂದ ಯಾರನ್ನು ದೂಷಿಸುವುದು ಸರಿ ಅಲ್ಲ ಇದಕ್ಕೆ ಎಲ್ಲರೂ ಹೊಣೆಯಾಗ ಬೇಕಾಗುತ್ತದೆ. ಇದಕ್ಕೆ ಸೂಕ್ತವಾದ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತೇವೆ ಎಂದರು.

ಬೆಂಗಳೂರು ಮಳೆ ಬಗ್ಗೆ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ

ಕಾಮಲೆ ಕಣ್ಣಿಗೆ ಕಾಣುವುದೆಲ್ಲ ಹಳದಿನೇ: ಕೆಲಸ ಮಾಡ್ತಿದ್ದೇವೆ ನಾವ್ಯಾರು ಸಚಿವರು ಮನೆಯಲ್ಲಿ ಮಲ್ಕೊಂಡಿಲ್ಲ, ಕೂತ್ಕಂಡಿಲ್ಲ, ಕಾಂಗ್ರೆಸ್ ನಾಯಕರ ಕಣ್ಣು ಕಾಮಲೆಕಣ್ಣು, ಅದಕ್ಕೆ ನಾವು ಮಾಡುವ ಕೆಲಸ ಕಾಂಗ್ರೆಸ್ ನಾಯಕರ ಕಣ್ಣಿಗೆ ಕಾಣಿಸುತ್ತಿಲ್ಲ , ಕಾಮಾಲೆಕಣ್ಣಿಗೆ ಜಗತ್ತೆಲ್ಲ ಕಾಣುವುದು ಹಳದಿನೇ.

ಇದರಿಂದ ಯಾವ ಸರ್ಕಾರ ಏನ್ ಮಾಡಕ್ಕೆ ಆಗುತ್ತೆ. ಎಷ್ಟು ಸಾಧ್ಯವೋ ಅಷ್ಟು ನಮ್ಮ ಸರ್ಕಾರ ಇದನ್ನು ಸರಿ ಮಾಡುತ್ತೆ. ಇದಕ್ಕೆ ಅವರು - ಇವರು ಹೊಣೆಯಲ್ಲ, ಬೆಂಗಳೂರಿನ ಸುತ್ತಮುತ್ತ ಇರುವ ನಾಯಕರೇ ಇದಕ್ಕೆ ಹೊಣೆ, ನಾವ್ಯಾರೂ ಹಳ್ಳಿಯವರು ಹೋಗಿ ಬೆಂಗಳೂರಿನಲ್ಲಿ ಕೆರೆಗಳನ್ನು ಒತ್ತುವರಿ ಮಾಡಿಲ್ಲ, ಕೆರೆಗಳನ್ನು ಬೆಂಗಳೂರಿನ ಅಕ್ಕಪಕ್ಕದ ನಾಯಕರು ಕಬಳಿಸಿದ್ದರಿಂದ ಈ ರೀತಿ ಆಗ್ತಿದೆ.

ಇದರಲ್ಲಿ ಎಲ್ಲ ಪಾರ್ಟಿಯವರಿದ್ದಾರೆ ಒಂದೇ ಪಾರ್ಟಿಯವರಂತೆ ಹೇಳಲು ಆಗಲ್ಲ. ಇನ್ನು ಚುನಾವಣೆಯಲ್ಲಿ ಗೆದ್ದಾ ನಾಯಕರನ್ನು ಗೆಲ್ಲಿಸುತ್ತಿರುವುದರಿಂದ ಬೆಂಗಳೂರು ಈ ರೀತಿ ಆಗಿದೆ ಎಂಬ ಸಿನಿ ತಾರೆ ರಮ್ಯಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಮ್ಯಾಳಷ್ಟು ಬುದ್ಧಿವಂತರು ನಾವಲ್ಲ ಎಂದು ರಮ್ಯಾಳಿಗೆ ಟಾಂಗ್ ನೀಡಿದರು.

ಇದನ್ನೂ ಓದಿ: ಮಳೆ ಅನಾಹುತ ಎಫೆಕ್ಟ್ : ನಾಳೆಯಿಂದ ಆರಂಭವಾಗಬೇಕಿದ್ದ ರಾಜ್ಯ ಪ್ರವಾಸ ಮುಂದೂಡಿದ ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.