ETV Bharat / state

ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಆಗಲೇಬೇಕು: ಗಂಗಾಧರ್ ಕುಲಕರ್ಣಿ

author img

By

Published : Oct 11, 2022, 4:35 PM IST

ಶ್ರೀರಾಮ್ ಸೇನೆ ರಾಜ್ಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ
ಶ್ರೀರಾಮ್ ಸೇನೆ ರಾಜ್ಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ

ದತ್ತಪೀಠದಲ್ಲಿ ಇಲ್ಲಿಯವರೆಗೂ ಅರ್ಚಕರನ್ನು ನೇಮಕ ಮಾಡದೇ ಇರುವುದು ನಾಚಿಕೇಡಿನ ಸಂಗತಿ ಎಂದು ಶ್ರೀರಾಮ್ ಸೇನೆ ರಾಜ್ಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು: ಶ್ರೀರಾಮ ಸೇನೆಯಿಂದ ಏಳು ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ದತ್ತಮಾಲಾ ಅಭಿಯಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನವೆಂಬರ್ 7 ರಿಂದ 13 ರವರೆಗೂ ದತ್ತಪೀಠದಲ್ಲಿ ದತ್ತಮಾಲ ಕಾರ್ಯಕ್ರಮ ನಡೆಯಲಿದೆ. ಮಾಲಾಧಾರಣೆ ಮಾಡುವುದರ ಮೂಲಕ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಚಿಕ್ಕಮಗಳೂರಿನಲ್ಲಿ ಶ್ರೀರಾಮ್ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಅವರು ಹೇಳಿದ್ದಾರೆ.

ಶ್ರೀರಾಮ್ ಸೇನೆ ರಾಜ್ಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ ಅವರು ಮಾತನಾಡಿದರು

ನಾಚಿಕೇಡಿನ ಸಂಗತಿ: ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಇವರು, ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಕೋರ್ಟ್​ನಲ್ಲಿ ಕೇಸ್ ಕ್ಲಿಯರ್ ಆಗಿದೆ. ದತ್ತಪೀಠವನ್ನು ನೀವೇ ಇಟ್ಟುಕೊಂಡು ಮೆರೆದವರು. ಇಲ್ಲಿಯವರೆಗೂ ಅರ್ಚಕರನ್ನು ನೇಮಕ ಮಾಡದೇ ಇರುವುದು ನಾಚಿಕೇಡಿನ ಸಂಗತಿ.

ಈಗ ಹಿಂದೂ ಸಮಾಜ ಜಾಗೃತವಾಗಿದೆ. ನವೆಂಬರ್ 13 ರ ಒಳಗೆ ಅರ್ಚಕರನ್ನು ನೇಮಕ ಮಾಡಲೇಬೇಕು. ಒಂದು ವೇಳೆ ಮಾಡದಿದ್ದರೆ ಪ್ರವೀಣ್ ನೆಟ್ಟಾರು ಹತ್ಯೆಯ ಸಂದರ್ಭ, ಹಿಂದೂ ಸಮಾಜ ಯಾವ ರೀತಿ ಆಕ್ರೋಶ ವ್ಯಕ್ತಪಡಿಸಿತೋ, ಅದೇ ರೀತಿ ಆಕ್ರೋಶ ದತ್ತಪೀಠದಲ್ಲಿ ನೀವು ನೋಡುತ್ತೀರಾ ಎಂದು ಎಚ್ಚರಿಸಿದ್ದಾರೆ.

ತಾಳ್ಮೆ ಪರೀಕ್ಷೆ ಮಾಡಬೇಡಿ: ದತ್ತ ಮಾಲೆ ಧರಿಸಿ ಬಿ ಎಸ್ ಯಡಿಯೂರಪ್ಪ ದತ್ತ ಪೀಠಕ್ಕೆ ಬರದಿದ್ದರೆ, ಅಧಿಕಾರ ಕಳೆದುಕೊಳ್ಳುತ್ತೀರಾ ಎಂದು ಹೇಳಿದ್ದೆ ಅದೇ ರೀತಿ ಆಯಿತು. ಈಗ ಅರ್ಚಕರನ್ನು ನೇಮಕ ಮಾಡದಿದ್ದರೆ ನಿಮ್ಮನ್ನು ಹಿಂದೂ ಸಮಾಜ ಸಂಪೂರ್ಣವಾಗಿ ತಿರಸ್ಕಾರ ಮಾಡುತ್ತೆ. ನಾನು ಎಚ್ಚರಿಕೆ ಕೊಡುವುದರ ಮೂಲಕ ಈ ಮಾತನ್ನು ಹೇಳುತ್ತಿದ್ದೇನೆ. ನಮಗೂ ಹೋರಾಟ ಮಾಡಿ ಸಾಕಾಗಿ ಹೋಗಿದೆ.

ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ, ನಮಗೆ ಸಹಿಸೋಕೆ ಸಾಧ್ಯವಿಲ್ಲ. ಯಾಕೆ ಧರ್ಮಕ್ಕೆ ದ್ರೋಹ ಮಾಡುತ್ತಿದ್ದೀರಾ?. ಯಾಕೆ ಹಿಂದೂ ಧರ್ಮಕ್ಕೆ ಅನ್ಯಾಯ ಮಾಡುತ್ತಿದ್ದೀರಾ?. ಕಾರ್ಯಕರ್ತರು ತುಂಬಾ ಆಕ್ರೋಶದಿಂದ ಇದ್ದಾರೆ. ಒಂದು ತೀರ್ಮಾನಕ್ಕೆ ಬರೆದಿದ್ದರೆ, ಏನು ಬೇಕಾದರೂ ಆಗಬಹುದು ಎಂದು ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓದಿ: ದತ್ತಪೀಠ ಪ್ರಕರಣ : 67 ಸಂಘಟನೆಗಳಿಂದ ಅಹವಾಲು ಸ್ವೀಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.