ದತ್ತಪೀಠ ಪ್ರಕರಣ : 67 ಸಂಘಟನೆಗಳಿಂದ ಅಹವಾಲು ಸ್ವೀಕಾರ

author img

By

Published : Feb 7, 2022, 10:55 PM IST

minister-madhuswamy

ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಯಾವುದೇ ರೀತಿಯಾ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು..

ಚಿಕ್ಕಮಗಳೂರು : ಜಿಲ್ಲೆಯಲ್ಲಿರುವ ದತ್ತಪೀಠ ವಿವಾದದ ಬಗ್ಗೆ ಸಚಿವ ಮಾಧುಸ್ವಾಮಿ ಅವರಿಂದ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಹವಾಲು ಸ್ವೀಕಾರ ಮಾಡಲಾಗಿದೆ.

ಈ ಕುರಿತು ಕಾನೂನು ಸಚಿವ ಮಾಧುಸ್ವಾಮಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ಮುಜಾವರ್-ಅರ್ಚಕರ ನೇಮಕದ ವಿವಾದಕ್ಕೆ ಅಹವಾಲು ಸ್ವೀಕಾರ ಮಾಡಲಾಗುತ್ತಿದೆ. 67 ಸಂಘಟನೆಗಳಿಂದ ಸರ್ಕಾರ ಅಹವಾಲು ಸ್ವೀಕರಿಸಿದೆ ಎಂದರು.

ಸಚಿವ ಮಾಧುಸ್ವಾಮಿ ಮಾತನಾಡಿರುವುದು..

ಧರ್ಮಗುರು, ಕೋಮು ಸೌಹಾರ್ದ ವೇದಿಕೆ, ಮಠಾದೀಶರಿಂದಲೂ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಹಿಂದಿನ ಕಾಂಗ್ರೆಸ್ ಸರ್ಕಾರ ಮುಜಾವರ್ ನೇಮಿಸಿ ಆದೇಶಿಸಿತ್ತು. ಕಾಂಗ್ರೆಸ್ ಸರ್ಕಾರದ ಆದೇಶ ಪ್ರಶ್ನಿಸಿ ಹಿಂದೂ ಸಂಘಟಕರು ಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ಮುಜಾವರ್ ನೇಮಕವನ್ನ ಕೋರ್ಟ್ ರರದ್ದು ಮಾಡಿತ್ತು.

ನಂತರ ಹಿಂದೂ ಅರ್ಚಕರ ನೇಮಕದ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ ನೀಡಿತ್ತು. ಸರ್ಕಾರದಿಂದ ಸಚಿವ ಸಂಪುಟ ಉಪಸಮಿತಿ ರಚನೆ ಮಾಡಲಾಗಿದ್ದು, ಇಂದು ಎರಡೂ ಸಮುದಾಯವರಿಂದ ಅಹವಾಲು ಸರ್ಕಾರ ಸ್ವೀಕಾರ ಮಾಡಿದೆ. ಸಚಿವರಾದ ಮಾಧುಸ್ವಾಮಿ, ಶಶಿಕಲಾ ಜೊಲ್ಲೆ, ಅಂಗಾರರಿಂದ ಅಹವಾಲು ಸ್ವೀಕಾರ ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಯಾವುದೇ ರೀತಿಯಾ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಓದಿ: ಸಿಸಿಬಿ ಪೊಲೀಸರಿಂದ ವಿದೇಶಿ ಪ್ರಜೆಗಳ‌ ಮನೆಗಳ ಮೇಲೆ ದಾಳಿ : 27 ಮಂದಿ ಅಕ್ರಮ ವಲಸಿಗರು ಪತ್ತೆ..

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.