ETV Bharat / state

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಸ್ವಾಗತಕ್ಕೆ ಅದ್ದೂರಿ ತಯಾರಿ.. ಪ್ಲೆಕ್ಸ್​ಗಳ ಹವಾ

author img

By

Published : Nov 22, 2022, 9:10 PM IST

ಡಿ ಜೆ ನಾಗರಾಜ್ ಹಾಗೂ ಮೇಲೂರು ರವಿಕುಮಾರ್
ಡಿ ಜೆ ನಾಗರಾಜ್ ಹಾಗೂ ಮೇಲೂರು ರವಿಕುಮಾರ್

ಈಗಾಗಲೇ ಕೋಲಾರ ಜಿಲ್ಲಾದ್ಯಂತ ಪಂಚರತ್ನ ಯೋಜನೆ ಕಾರ್ಯಕ್ರಮ ಸಖತ್ ರೆಸ್ಪಾನ್ಸ್ ಕೊಡಲಾಗುತ್ತಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ, ಬಾಗೇಪಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠರಿಗೆ ಅದ್ದೂರಿ ವೆಲ್​ಕಮ್​ ನೀಡಲು ಕ್ಷೇತ್ರದ ಅಧಿಕೃತ ಜೆಡಿಎಸ್ ಅಭ್ಯರ್ಥಿ ಮೇಲೂರು ರವಿಕುಮಾರ್ ಹಾಗೂ ಬಾಗೇಪಲ್ಲಿ ಡಿ ಜೆ ನಾಗರಾಜ್ ತಾಲೂಕಿನಲ್ಲಿ‌ ಪರ್ಯಾಟನೆ ನಡೆಸಿ ಪಂಚರತ್ನ ಯೋಜನೆಗಳ ಕುರಿತು ಮಾಹಿತಿ‌ ನೀಡಿ ಬೃಹತ್ ಕಟೌಟ್​ ಅನ್ನು ನಿಲ್ಲಿಸಿ ಜೆಡಿಎಸ್ ಶಕ್ತಿ ಪ್ರದರ್ಶನ ತೋರಲು ಮುಂದಾಗಿದ್ದಾರೆ.

ಚಿಕ್ಕಬಳ್ಳಾಪುರ: ಪಂಚರತ್ನ ಯೋಜನೆಯ ಸಲುವಾಗಿ ಜೆಡಿಎಸ್ ಪಕ್ಷದ ಯಾತ್ರೆ ಚಿಕ್ಕಬಳ್ಳಾಪುರ ಜಿಲ್ಲೆಗೂ ಕಾಲಿಡುತ್ತಿದ್ದು, ಅದ್ದೂರಿಯಾಗಿ ಆಯೋಜನೆ ಮಾಡಲು ಸಕಲ‌ ಸಿದ್ದತೆ ಮಾಡಲಾಗುತ್ತಿದೆ. ಇನ್ನು ರೇಷ್ಮೆ ನಗರಿ ಶಿಡ್ಲಘಟ್ಟ ಕ್ಷೇತ್ರ ಹಾಗೂ ಬಾಗೇಪಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕ್ಷೇತ್ರದ ಪ್ರತಿಯೊಂದು ಕಡೆಯೂ ಪ್ಲೆಕ್ಸ್‌ಗಳನ್ನು ಅಳವಡಿಸಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಬರಮಾಡಿಕೊಳ್ಳಲು ಸಕಲ‌ ಸಿದ್ದತೆ ನಡೆಸಿದ್ದಾರೆ.

ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಲ್ಪಮತಗಳ‌ ಅಂತರದಲ್ಲಿ ಸೋಲು ಕಂಡ ಮೇಲೂರು ರವಿಕುಮಾರ್ ಈ ಬಾರಿಯ ಚುನಾವಣೆ ಯಲ್ಲಿ ಗೆಲುವಿನ ನಗೆ ಬೀರಲು ಶಿಡ್ಲಘಟ್ಟ ಕ್ಷೇತ್ರ ವ್ಯಾಪ್ತಿಯಲ್ಲಿ ಸಕಲ ಸಿದ್ದತೆ ನಡೆಸುತ್ತಿದ್ದಾರೆ.

ಮತ್ತೊಂದು ಗಡಿಭಾಗದ ಕ್ಷೇತ್ರ ಬಾಗೇಪಲ್ಲಿಯಲ್ಲಿಯೂ ಅಧಿಕೃತ ಅಭ್ಯರ್ಥಿ ಡಿ ಜೆ ನಾಗರಾಜ್ ಅದ್ದೂರಿಯಾಗಿ ಮಾಜಿ‌ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕ್ಷೇತ್ರಕ್ಕೆ ಬರಮಾಡಿಕೊಳ್ಳಲು ಅದ್ದೂರಿ ತಯಾರಿ‌ ನಡೆಸುತ್ತಿದ್ದಾರೆ.

ಈಗಾಗಲೇ ಕೋಲಾರ ಜಿಲ್ಲಾದ್ಯಂತ ಪಂಚರತ್ನ ಯೋಜನೆ ಕಾರ್ಯಕ್ರಮ ಸಖತ್ ರೆಸ್ಪಾನ್ಸ್ ಕೊಡಲಾಗುತ್ತಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ, ಬಾಗೇಪಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠರಿಗೆ ಅದ್ದೂರಿ ವೆಲ್​ಕಮ್​ ನೀಡಲು ಕ್ಷೇತ್ರದ ಅಧಿಕೃತ ಜೆಡಿಎಸ್ ಅಭ್ಯರ್ಥಿ ಮೇಲೂರು ರವಿಕುಮಾರ್ ಹಾಗೂ ಬಾಗೇಪಲ್ಲಿ ಡಿ ಜೆ ನಾಗರಾಜ್ ತಾಲೂಕಿನಲ್ಲಿ‌ ಪರ್ಯಾಟನೆ ನಡೆಸಿ ಪಂಚರತ್ನ ಯೋಜನೆಗಳ ಕುರಿತು ಮಾಹಿತಿ‌ ನೀಡಿ ಬೃಹತ್ ಕಟೌಟ್​ ಅನ್ನು ನಿಲ್ಲಿಸಿ ಜೆಡಿಎಸ್ ಶಕ್ತಿ ಪ್ರದರ್ಶನ ತೋರಲು ಮುಂದಾಗಿದ್ದಾರೆ.

ಪಂಚರತ್ನ ಯಾತ್ರೆಯು ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರಕ್ಕೆ ನವೆಂಬರ್ 24 ರ ಗುರುವಾರ ಆಗಮಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಸೇರಿ ಯಾತ್ರೆಯನ್ನು ಸ್ವಾಗತಿಸಬೇಕೆಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು ಸಹ ಸಾಕಷ್ಟು ಉತ್ಸಾಹದಿಂದ ಇದ್ದಾರೆ.

ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ವೈ. ಹುಣಸೇನಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ನಾಯಕತ್ವದಲ್ಲಿ ಸಾಗಿ ಬರುವ ಪಂಚರತ್ನ ಯಾತ್ರೆಯನ್ನು ಶಿಡ್ಲಘಟ್ಟ ನಗರ ಅಬ್ಲೂಡು ವೃತ್ತ ಮತ್ತು ದಿಬ್ಬೂರಹಳ್ಳಿ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದೆ. ಸಂಜೆಗೆ ಸಾದಲಿಯಲ್ಲಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಓದಿ: ಕೋಲಾರ ಕ್ಷೇತ್ರಕ್ಕೆ ಕಾಂಗ್ರೆಸ್​ನ ನಾಲ್ವರಿಂದ ಅರ್ಜಿ.. ಸಿದ್ದರಾಮಯ್ಯ ಭೇಟಿ ಬಳಿಕ ಗರಿಗೆದರಿದ ರಾಜಕೀಯ ಚಟುವಟಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.