ETV Bharat / state

ಬೀದರ್‌: ₹1.65 ಕೋಟಿ ಮೌಲ್ಯದ ಗಾಂಜಾ ಜಪ್ತಿ

author img

By

Published : Apr 18, 2023, 8:29 PM IST

ಗಾಂಜಾ ವಶ
ಗಾಂಜಾ ವಶ

ಬೀದರ್ ಜಿಲ್ಲೆಯಲ್ಲಿ ಸುಮಾರು 1.65 ಕೋಟಿ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಎಸ್‌ಪಿ ಮಾಹಿತಿ

ಬೀದರ್​ : ಜಿಲ್ಲೆಯಲ್ಲಿ ಇತ್ತೀಚೆಗೆ ಬೆಳಕಿಗೆ ಬರುತ್ತಿರುವ ಗಾಂಜಾ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆಯು 3 ಪ್ರತ್ಯೇಕ ಪ್ರಕರಣಗಳಲ್ಲಿ 6 ಜನರನ್ನು ಬಂಧಿಸಿ 1.65 ಕೋಟಿ ರೂ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್.ಹೇಳಿದರು. ಮಂಗಳವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾಹಿತಿ ನೀಡಿದರು.

ಏಪ್ರಿಲ್ 17 ರಂದು ಆಂಧ್ರ ಪ್ರದೇಶದಿಂದ ಮಹಾರಾಷ್ಟ್ರಕ್ಕೆ ಚಿಟಗುಪ್ಪಾ ಮಾರ್ಗವಾಗಿ ಗಾಂಜಾ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಂದ ತಕ್ಷಣ ಪೊಲೀಸ್ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಭಂಗೂರ ಚೆಕ್ ಪೋಸ್ಟ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಡೆದು ಆರೋಪಿಗಳು ಮಾರ್ಗ ಬದಲಾಯಿಸಿ ಒಳಮಾರ್ಗದಿಂದ ಸಂಚರಿಸಲು ಯತ್ನಿಸಿದ್ದರು. ಎಂದು ತಿಳಿಸಿದರು.

5 ಕೆಜಿ 30 ಗ್ರಾಂ ಗಾಂಜಾ ವಶ: ನಗರದಲ್ಲಿ ಎರಡು ಪ್ರತ್ಯೇಕ ಗಾಂಜಾ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರಲ್ಲಿ ಒಬ್ಬ ಆರೋಪಿಯಿಂದ 4.78,000 ಮೌಲ್ಯದ 4.478 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಇನ್ನೂ ಇಬ್ಬರು ಆರೋಪಿಗಳಿಂದ 5,03,000 ಮೌಲ್ಯದ 5 ಕೆಜಿ 30 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಒಬ್ಬ ಆರೋಪಿ ಪರಾರಿಯಾಗಿದ್ದು, ಬಲೆ ಬೀಸಲಾಗಿದೆ ಎಂದು ಹೇಳಿದರು.

ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಆರೋಪಿ ಸೆರೆ: ಬೀದರ್​ ಜಿಲ್ಲಾ ಪೊಲೀಸ್ ಇಲಾಖೆಯು ಗಾಂಜಾ ಸಾಗಾಣಿಕೆ ತಡೆಯಲು ಹಾಗೂ ಇದರ ಮೂಲ ಪತ್ತೆಹಚ್ಚಲು ಮಾದಕ ವಸ್ತುಗಳ ನಿಗ್ರಹ ದಳ ರಚಿಸಿತ್ತು. ಈ ತಂಡ ಖಚಿತ ಮಾಹಿತಿಯ ಮೇರೆಗೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ಓರ್ವ ಆರೋಪಿಯನ್ನು ಬಂಧಿಸಿದೆ. ಆರೋಪಿಯು ಒಡಿಶಾ ರಾಜ್ಯದ ಮಲ್ಕಾನಗಿರಿ ಜಿಲ್ಲೆಯವನಾಗಿದ್ದು, ಒಡಿಶಾ ಗಡಿಭಾಗದ ಹೊಲಗಳಲ್ಲಿ ಬೆಳೆದ ಗಾಂಜಾವನ್ನು ಆಂಧ್ರಪ್ರದೇಶದ ಸಿಲೇರೋ ಪಟ್ಟಣದಲ್ಲಿ ಸಂಗ್ರಹಿಸಿಡುತ್ತಿದ್ದ. ದಲ್ಲಾಳಿಗಳ ಮೂಲಕ ರಾಜಮಂಡ್ರಿ, ವಿಶಾಖಪಟ್ಟಣಂ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

40 ಜನರ ಮೇಲೆ ರೌಡಿಶೀಟರ್​: ಪ್ರಸಕ್ತ ವರ್ಷದಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆಯು 325 ವಿವಿಧ ಅಪರಾಧ ಪ್ರಕರಣಗಳನ್ನು ದಾಖಲಿಸಿ, 811 ಆರೋಪಿಗಳನ್ನು ಬಂಧಿಸಿ, 9,19,18,955 ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ. 40 ಜನರ ಮೇಲೆ ರೌಡಿಶೀಟರ್​ ತೆರೆಯಲಾಗಿದೆ ಎಂದು ಹೇಳಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ್, ಹುಮನ್ನಾಬಾದ್​ ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಾಜಪೂತ, ಬೀದರ್​ ಉಪಾಧೀಕ್ಷಕ ಕೆ ಎಂ ಸತೀಶ್​ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಪ್ರತಿಷ್ಠಿತ ಕಾಲೇಜಿನ ಬಳಿ ಗಾಂಜಾ ಮಾರಾಟ: ಆನೇಕಲ್‌ನಲ್ಲಿ ಇಬ್ಬರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.