ETV Bharat / state

'ಕಾಂಗ್ರೆಸ್ ಗ್ಯಾರಂಟಿ ಗಿಮಿಕ್​ಗೆ ರಾಜ್ಯದ ಮತದಾರರು ಮರುಳಾಗಲ್ಲ'

author img

By

Published : Mar 22, 2023, 2:28 PM IST

Sriramulu
ಬಿ.ಶ್ರೀರಾಮುಲು

ಅಧಿಕಾರಕ್ಕೆ ಬಾರದೇ ಇರೋರು ಏನು ಗ್ಯಾರಂಟಿ ಕೊಡ್ತಾರೆ. ಚುನಾವಣೆ ಬಂದಾಗ ಸುಳ್ಳು ಹೇಳೋದು ಸಾಮಾನ್ಯ. ಇದೀಗ ಗ್ಯಾರಂಟಿ ಕಾರ್ಡ್ ಹೆಸರಲ್ಲಿ ಸುಳ್ಳು ಹೇಳುತ್ತಿದ್ದಾರೆ- ಸಚಿವ ಶ್ರೀರಾಮುಲು.

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ

ಬಳ್ಳಾರಿ: ಕಾಂಗ್ರೆಸ್ ಗ್ಯಾರಂಟಿ ಗಿಮಿಕ್​ಗೆ ರಾಜ್ಯದ ಮತದಾರರು ಮರುಳಾಗುವುದಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಗರದ ಕನಕ ದುರ್ಗಮ್ಮ ರೈಲ್ವೆ ಅಂಡರ್ ಪಾಸ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಗಲೀಕರಣ ಮಾಡುವ 8.87 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, "ಕಾಂಗ್ರೆಸ್ ನಾಯಕರು ಇಷ್ಟು ದಿನ ಜನರ ಕಿವಿಯಲ್ಲಿ ಹೂ ಇಡುತ್ತಿದ್ದರು. ಇದೀಗ ಹೈಟೆಕ್ ಮಾದರಿಯಲ್ಲಿ ಗ್ಯಾರಂಟಿ ಕಾರ್ಡ್ ಇಡುವ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿ ಕಾರ್ಡ್, ವಾರಂಟಿ ಕಾರ್ಡ್​ನ್ನು ಜನ‌ ನಂಬಲ್ಲ. ಏಕೆಂದರೆ ಅಧಿಕಾರಕ್ಕೆ ಬಾರದೇ ಇರೋರು ಏನು ಗ್ಯಾರಂಟಿ ಕೊಡ್ತಾರೆ. ಚುನಾವಣೆ ಬಂದಾಗ ಸುಳ್ಳು ಹೇಳೋದು ಸಾಮಾನ್ಯ. ಇದೀಗ ಗ್ಯಾರಂಟಿ ಕಾರ್ಡ್ ಹೆಸರಲ್ಲಿ ಸುಳ್ಳು ಹೇಳುತ್ತಿದ್ದಾರೆ" ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಬಗ್ಗೆ ಸಾಫ್ಟ್ ಕಾರ್ನರ್: ಕಳೆದ ಚುನಾವಣೆಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ನಿರ್ಧಾರದಂತೆ ಸಿದ್ದರಾಮಯ್ಯ ಮತ್ತು ನಾನು ಇಬ್ಬರು ಅನಿವಾರ್ಯ ಕಾರಣಕ್ಕಾಗಿ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕಾಯಿತು. ಸರ್ಕಾರ ರಚನೆಯಾಗಬೇಕಾದರೆ ಜನಪ್ರಿಯ ಅಭ್ಯರ್ಥಿಗಳು ಬೇರೆ ಬೇರೆ ಕಡೆ ನಿಲ್ಲಬೇಕಾಗುತ್ತದೆ. ಇದು ಸಿದ್ದರಾಮಯ್ಯ, ನನ್ನ ಸ್ವಾರ್ಥ ಅಲ್ಲ. ಸಿದ್ದರಾಮಯ್ಯ ವರುಣಾದಲ್ಲಿ ನಿಲ್ಲಬೇಕು. ಆದರೆ ಮಗನ ರಾಜಕೀಯಕ್ಕಾಗಿ ವರುಣಾಕ್ಕೆ ಹೋಗ್ತಿಲ್ಲ. ಹೀಗಾಗಿ ಕ್ಷೇತ್ರ ಗೊಂದಲವಾಗುತ್ತಿದೆ. ಸಿದ್ದರಾಮಯ್ಯ ಎಲ್ಲಿಯೇ ಸ್ಪರ್ಧೆ ಮಾಡಲಿ ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ರಾಜಕೀಯದಲ್ಲಿ ಇದೊಂದು ಸಹಜ ಪ್ರಕ್ರಿಯೆ ಎಂದರು. ಅಲ್ಲದೇ ಸಿದ್ದರಾಮಯ್ಯ ಬಗ್ಗೆ ನನಗೇನು ಸಾಫ್ಟ್ ಕಾರ್ನರ್ ಇಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಈ ವೇಳೆ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಬುಡಾ ಅಧ್ಯಕ್ಷ ಎಸ್.ಮಾರುತಿ ಪ್ರಸಾದ್, ಆಯುಕ್ತ ವಿ.ರಮೇಶ್, ಮಾಜಿ ಸಂಸದರಾದ ಸಣ್ಣ ಪಕ್ಕೀರಪ್ಪ, ಜೆ.ಶಾಂತಾ, ಪಾಲಿಕೆ ಸದಸ್ಯರಾದ ಕೆ.ಎಸ್.ಅಶೋಕ್ ಕುಮಾರ್, ಶ್ರೀನಿವಾಸ್ ಮೋತ್ಕರ್, ಸುರೇಖಾ ಮಲ್ಲನಗೌಡ, ಹನುಮಂತ ಕೆ, ಮುಖಂಡರಾದ ಕೆ.ಎಸ್.ದಿವಾಕರ್, ಡಾ.ಡಿ.ಎಲ್.ರಮೇಶ್ ಗೋಪಾಲ್ ಮೊದಲಾದವರು ಇದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಕ್ಷೇತ್ರ ಹುಡುಕ್ತಿರೋದು ನೋಡಿದ್ರೆ ಅನುಕಂಪ ಹುಟ್ಟುತ್ತೆ: ಹೆಚ್​ಡಿಕೆ

ಗ್ಯಾರಂಟಿ ಕಾರ್ಡ್ ಅಲ್ಲ, ವಿಸಿಟಿಂಗ್ ಕಾರ್ಡ್: ಕಾಂಗ್ರೆಸ್ ಪಕ್ಷ ಚುನಾವಣೆಗೆ ಘೋಷಿಸಿರುವ ಗ್ಯಾರಂಟಿಯನ್ನು ಕಾರ್ಡ್ ರೂಪದಲ್ಲಿ ಜನತೆಗೆ ನೀಡುತ್ತಿದೆ. ಅದಕ್ಕೆ ಮೌಲ್ಯವಿಲ್ಲ. ಪುಕ್ಕಟ್ಟೆ ಕಾರ್ಡ್ ಆಗಿರುವ ಅದು ವಿಸಿಟಿಂಗ್ ಕಾರ್ಡ್​ಗೆ ಸಮ. ವಿಸಿಟಿಂಗ್ ಕಾರ್ಡನ್ನು ಡಸ್ಟ್ ಬಿನ್​ಗೆ ಎಸೆಯುವಂತೆ ಜನರು ಇದನ್ನು ಎಸೆಯುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಹೇಳಿದ್ದರು.

ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಫಲಾನುಭವಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಗಲಾರದನ್ನು ಹೇಳಿ ಆಸೆ ಹುಟ್ಟಿಸುತ್ತಿದೆ. ತುಪ್ಪದ ವಾಸನೆಯನ್ನು ದೂರದಿಂದ ತೋರಿಸುತ್ತಿದ್ದಾರೆ. ಪ್ರತಿ ಮನೆಗೆ 2 ಸಾವಿರ ರೂ. ನೀಡುವ ಭರವಸೆ ನೀಡಿದ್ದಾರೆ. 2 ಕೋಟಿ ಜನರಿಗೆ 24 ಸಾವಿರ ಕೋಟಿ ಆಗುತ್ತದೆ. ಅದನ್ನು ಕೊಟ್ಟರೆ ಈಗಿನ ಯೋಜನೆ ಬಂದ್ ಆಗುತ್ತದೆ. ಅವರಿಗೆ ಕೊಡಲು ಆಗುವುದಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ನದ್ದು ಗ್ಯಾರಂಟಿ ಕಾರ್ಡ್ ಅಲ್ಲ, ವಿಸಿಟಿಂಗ್ ಕಾರ್ಡ್.. ಸಿಎಂ ಬೊಮ್ಮಾಯಿ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.