ETV Bharat / state

ಕೊರೊನಾ ನಡುವೆಯೇ ಗಣಿನಾಡಿಗೆ ಡೆಂಘೀ ಆತಂಕ

author img

By

Published : Aug 27, 2021, 4:35 PM IST

ಗಣಿನಾಡಿಗೆ ಡೆಂಗ್ಯೂ ಆತಂಕ
ಗಣಿನಾಡಿಗೆ ಡೆಂಗ್ಯೂ ಆತಂಕ

ಪ್ರತಿ ಬೆಡ್‌ನಲ್ಲಿ ಇಬ್ಬರು ಮಕ್ಕಳನ್ನು ಮಲಗಿಸಿ, ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇದೆ. ಇದರ ಜತೆಗೆ ಮಲೇರಿಯಾದ ಎರಡು ಪ್ರಕರಣ ವರದಿಯಾಗಿವೆ. ವೈರಾಣು ಜ್ವರದಿಂದ ಬಳಲುತ್ತಿರುವವರ ನಿಖರ ಸಂಖ್ಯೆ ಸಿಕ್ಕಿಲ್ಲ ಎಂದು ಜಿಲ್ಲಾ ಸಾಂಕ್ರಾಮಿಕ ರೋಗಗಳ ಕಚೇರಿ ಮೂಲಗಳು ತಿಳಿಸಿವೆ..

ಬಳ್ಳಾರಿ : ಕೊರೊನಾ 3ನೇ ಅಲೆ ಆತಂಕದಲ್ಲೇ ಜನರು ಜೀವನ ಸಾಗಿಸುತ್ತಿದ್ದಾರೆ. ಇದರ ನಡುವೆ ಡೆಂಘೀ ಒಕ್ಕರಿಸಿದ್ದು, ಜನರಿಗೆ ಮತ್ತಷ್ಟು ಆತಂಕ ಶುರುವಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ವ್ಯಾಪ್ತಿಯಲ್ಲಿ 87 ಡೆಂಘೀ ಪ್ರಕರಣ ದೃಢಪಟ್ಟಿವೆ.

ಗಣಿನಾಡಿಗೆ ಡೆಂಘೀ ಆತಂಕ

ಆಗಸ್ಟ್​ 25ರಂದು ಒಂದೇ ದಿನ ಡೆಂಘೀ ಚಿಕಿತ್ಸೆಗೆಂದು 14 ಮಂದಿ ವಿಮ್ಸ್‌ಗೆ ದಾಖಲಾಗಿದಾರೆ. ಇದರಲ್ಲಿ ಮಕ್ಕಳ ಪ್ರಕರಣಗಳೇ ಹೆಚ್ಚು. ಬಳ್ಳಾರಿ 52, ಸಿರಗುಪ್ಪ 16, ಸಂಡೂರು 11, ಹೊಸಪೇಟೆ 04, ಹಡಗಲಿ ಸೇರಿ ಉಳಿದ ಕಡೆ ಒಂದೆರಡು ಡೆಂಘೀ ಪ್ರಕರಣ ಬೆಳಕಿಗೆ ಬಂದಿವೆ. ಜನವರಿಯಿಂದ ಈವರೆಗೂ ಡೆಂಘೀ ಶಂಕಿತ 1,112 ಪ್ರಕರಣಗಳಿರುವುದರಿಂದ ವಿಮ್ಸ್‌ನಲ್ಲಿ ಡೆಂಘೀ ವಾರ್ಡ್‌ನಲ್ಲಿ ಹಾಸಿಗೆ ಸಮಸ್ಯೆ ಉದ್ಭವವಾಗಿದೆ.

ಪ್ರತಿ ಬೆಡ್‌ನಲ್ಲಿ ಇಬ್ಬರು ಮಕ್ಕಳನ್ನು ಮಲಗಿಸಿ, ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇದೆ. ಇದರ ಜತೆಗೆ ಮಲೇರಿಯಾದ ಎರಡು ಪ್ರಕರಣ ವರದಿಯಾಗಿವೆ. ವೈರಾಣು ಜ್ವರದಿಂದ ಬಳಲುತ್ತಿರುವವರ ನಿಖರ ಸಂಖ್ಯೆ ಸಿಕ್ಕಿಲ್ಲ ಎಂದು ಜಿಲ್ಲಾ ಸಾಂಕ್ರಾಮಿಕ ರೋಗಗಳ ಕಚೇರಿ ಮೂಲಗಳು ತಿಳಿಸಿವೆ.

ಆಶಾ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ನಡೆಸಿದ್ದಾರೆ. ಡೆಂಘೀ ಹರಡುವ ಸೊಳ್ಳೆಗಳನ್ನು ನಾಶಪಡಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಕೆರೆ & ಕಟ್ಟೆಗಳಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುವುದನ್ನು ತಡೆಯಲು ಜಂಬೂಷಿಯಾ ಮತ್ತು ಗಪ್ಪಿ ಮೀನುಗಳನ್ನು ಬಿಡಲಾಗುತ್ತಿದೆ. ಮನೆಗಳ ಸುತ್ತಮುತ್ತ ನಿಂತ ನೀರಿನೊಳಗೆ ಸೊಳ್ಳೆಗಳು ಮೊಟ್ಟೆ ಇಟ್ಟು, ಮರಿ ಮಾಡುವುದನ್ನು ತಡೆಯಲು ಟೆಮಿಪಾಸ್ ಎಂಬ ಕ್ರಿಮಿನಾಶಕವನ್ನ ಆರೋಗ್ಯ ಇಲಾಖೆ ಬಳಸುತ್ತಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್ ಎಲ್ ಜನಾರ್ದನ್ ಅವರು ಮಾತನಾಡಿ, ಜನವರಿಯಿಂದ ಈವರೆಗೆ ಸಂಶಯಾಸ್ಪದ 1,112 ಡೆಂಘೀ ಪ್ರಕರಣ ಕಂಡು ಬಂದಿವೆ. ಈ ಪೈಕಿ 87 ಪ್ರಕರಣ ಡೆಂಘೀ ಎಂದು ದೃಢಪಟ್ಟಿವೆ. ಡೆಂಘೀ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಮನೆ ಮನೆ ಸರ್ವೇ ಕಾರ್ಯ ಪ್ರಾರಂಭಿಸಲಾಗಿದೆ ಎಂದರು.

ಇದನ್ನೂ ಓದಿ : ಹೊಸ IT ನಿಯಮ ಪ್ರಶ್ನಿಸಿ ಎಫ್​ಬಿ, ವಾಟ್ಸ್​ಆ್ಯಪ್​ ಸಲ್ಲಿಸಿದ್ದ ಮನವಿ: ಕೇಂದ್ರಕ್ಕೆ ಉತ್ತರ ನೀಡಲು ಸೂಚಿಸಿದ ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.