ETV Bharat / state

ಬಳ್ಳಾರಿಯ ಕಸ, ಧೂಳಿನ‌ ಸಮಸ್ಯೆಗೆ ಮುಕ್ತಿ: ಸ್ವೀಪಿಂಗ್ ಯಂತ್ರದ​ ಮೂಲಕ ಸ್ವಚ್ಛತೆಗೆ ಮುಂದಾದ ಪಾಲಿಕೆ

author img

By

Published : Dec 16, 2020, 6:50 AM IST

bellary
ಸ್ವೀಪಿಂಗ್ ಮಿಷನ್​​ ಮೂಲಕ ಕಸಗೂಡಿಸುವಿಕೆ

ಬಳ್ಳಾರಿ ಮಹಾನಗರ ಪಾಲಿಕೆ ದುರಸ್ತಿಯಾಗಿ ಮೂಲೆ ಸೇರಿದ್ದ ಟಿಪಿಎಸ್ ಕಂಪನಿಯ ಕಸಗುಡಿಸುವ ಯಂತ್ರವನ್ನು ತ್ವರಿತಗತಿಯಲ್ಲಿ ರಿಪೇರಿ ಮಾಡಿಸಿದ್ದು, ಇದರ ಮೂಲಕ ನಗರದ ರಸ್ತೆಗಳಲ್ಲಿ ಕಸವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರೇ ಖುದ್ದಾಗಿ ನಗರದ ವಿವಿಧ ರಸ್ತೆಗಳಲ್ಲಿ ಸ್ವೀಪಿಂಗ್ ಮಷಿನ್​​ ಮೂಲಕ ಕಸ ಗುಡಿಸುವ ಕಾರ್ಯವನ್ನು ಪರಿಶೀಲನೆ ನಡೆಸಿದರು.

ಬಳ್ಳಾರಿ: ನಗರದಲ್ಲಿ ತ್ಯಾಜ್ಯದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಮಹಾನಗರ ಪಾಲಿಕೆ, ಸ್ವೀಪಿಂಗ್ ಮಷಿನ್​ ಮೂಲಕ ನಗರದ ರಸ್ತೆಗಳಲ್ಲಿ ಕಸವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಈ ಮೂಲಕ ಸ್ವಚ್ಛ ಬಳ್ಳಾರಿ ಕಾರ್ಯಕ್ಕೆ ಮುಂದಾಗಿದೆ.

ಕಳೆದ ಕೆಲ ವರ್ಷಗಳಿಂದ ದುರಸ್ತಿಯಾಗಿ ಮೂಲೆ ಸೇರಿದ್ದ ಟಿಪಿಎಸ್ ಕಂಪನಿಯ ಕಸಗುಡಿಸುವ ಯಂತ್ರವನ್ನು ತ್ವರಿತಗತಿಯಲ್ಲಿ ರಿಪೇರಿ ಮಾಡಿಸಿ ರಸ್ತೆಗೆ ಬಿಡಲಾಗಿದೆ. ಬಳ್ಳಾರಿ ಮಹಾನಗರ ಪಾಲಿಕೆ ವತಿಯಿಂದ ರಾತ್ರಿ ಸಮಯದಲ್ಲಿ ಸ್ವೀಪಿಂಗ್ ಮಷಿನ್​ ಮೂಲಕ ಕಸ ಗುಡಿಸುವ ಕಾರ್ಯ ಮಂಗಳವಾರದಿಂದಲೇ ನಗರದ ವಿವಿಧ ರಸ್ತೆಗಳಲ್ಲಿ ಆರಂಭವಾಗಿದೆ. ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರೇ ಖುದ್ದಾಗಿ ನಗರದ ವಿವಿಧ ರಸ್ತೆಗಳಲ್ಲಿ ಸ್ವೀಪಿಂಗ್ ಯಂತ್ರದ ಮೂಲಕ ಕಸ ಗುಡಿಸುವ ಕಾರ್ಯವನ್ನು ಪರಿಶೀಲಿಸಿದರು.

ಓದಿ: ನೆರೆ ಸಂಬಂಧ ಸಲ್ಲಿಕೆಯಾಗಿರುವ ಪ್ರಸ್ತಾವನೆ ಮಾರ್ಪಾಡು ಮಾಡಿ; ಕೇಂದ್ರ ತಂಡ ಸೂಚನೆ

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತ್ಯಾಜ್ಯದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಗರದ ಮುಖ್ಯ ರಸ್ತೆಗಳಲ್ಲಿನ ಕಸ ಗುಡಿಸುವುದನ್ನು ಯಾಂತ್ರೀಕರಣಗೊಳಿಸುವುದು ಕೂಡ ಒಂದು ಉದ್ದೇಶವಾಗಿತ್ತು. ಅದನ್ನು ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.