ETV Bharat / state

ಅಥಣಿಯಲ್ಲಿ 2 ಎಕರೆ ದಾಳಿಂಬೆ ತೋಟ ನಾಶ ಮಾಡಿದ ಯುವ ರೈತ

author img

By

Published : Jul 8, 2021, 10:50 PM IST

ದಾಳಿಂಬೆ ಬೆಳೆಗೆ ಚುಕ್ಕಿರೋಗ, ಕ್ಯಾರರೋಗ ಹಾಗು ಬೆಂಕಿ ರೋಗಗಳು ತಗುಲಿದ್ದವು. ಹೀಗಾಗಿ ನೊಂದ ರೈತ ನವನಾಥ ಮಾನೆ ಎರಡು ಎಕರೆ ದಾಳಿಂಬೆಯನ್ನು ಕೊಡಲಿಯಿಂದ ಕಡಿದು ನಾಶಪಡಿಸಿದ್ದಾನೆ.

Farmer Destroyed 2 acre pomegranate crop in Athani
ತೋಟ ನಾಶ ಮಾಡಿದ ಯುವ ರೈತ

ಅಥಣಿ: ಬೆಳೆದ ಬೆಳೆಗೆ ರೋಗ ತಗುಲಿದ್ದು ಯುವ ರೈತ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ದಾಳಿಂಬೆ ತೋಟವನ್ನು ನಾಶಪಡಿಸಿರುವ ಘಟನೆ ಅಥಣಿ ತಾಲೂಕಿನ ಆಜೂರ ಗ್ರಾಮದಲ್ಲಿ ನಡೆದಿದೆ.

ತೋಟ ನಾಶ ಮಾಡಿದ ಯುವ ರೈತ

ದಾಳಿಂಬೆ ಬೆಳೆಗೆ ಚುಕ್ಕಿರೋಗ, ಕ್ಯಾರರೋಗ ಹಾಗು ಬೆಂಕಿ ರೋಗಗಳು ತಗುಲಿದ್ದವು. ಹೀಗಾಗಿ ನೊಂದ ರೈತ ನವನಾಥ ಮಾನೆ ಎರಡು ಎಕರೆ ದಾಳಿಂಬೆಯನ್ನು ಕೊಡಲಿಯಿಂದ ಕಡಿದು ನಾಶಪಡಿಸಿದ್ದಾನೆ.

ಸಾಲ ಮಾಡಿ ಬೆಳೆ

ಎರಡು ಎಕರೆ ದಾಳಿಂಬೆ ಬೆಳೆಯಲು ಮೂರರಿಂದ ನಾಲ್ಕು ಲಕ್ಷ ರೂ.ಗಳಷ್ಟು ಸಾಲ ಮಾಡಿದ್ದನಂತೆ. ಸತತ ಆರು ವರ್ಷಗಳಿಂದ ಗಿಡಗಳನ್ನು ಪೋಷಿಸಿ, ಪ್ರತಿವರ್ಷವೂ ನಷ್ಟ ಸಂಭವಿಸಿದ್ದು ರೈತ ಹತಾಶೆಗೊಳಗಾಗಿದ್ದಾನೆ.

ಪರಿಹಾರಕ್ಕೆ ಮನವಿ

ತಾಲೂಕಿನಲ್ಲಿ ಒಣಬೇಸಾಯ ಹೆಚ್ಚಾಗಿರುವುದರಿಂದ ಈ ಭಾಗದ ರೈತರು ದಾಳಿಂಬೆ ಬೆಳೆಯುತ್ತಿದ್ದಾರೆ. ಕೈ ತುಂಬಾ ಆದಾಯದ ಕನಸಲ್ಲಿ ಬೆಳೆಗೆ ರೋಗ ತಗುಲಿ ಮೈತುಂಬ ಸಾಲ ಮಾಡಿಕೊಂಡವರು ಹೆಚ್ಚಾಗಿದ್ದಾರೆ. ಹಾಗಾಗಿ ತಾಲೂಕಿನ ದಾಳಿಂಬೆ ಬೆಳೆದ ರೈತರಿಗೆ ಸರ್ಕಾರದಿಂದ ಪರಿಹಾರದ ಪ್ಯಾಕೇಜ್ ನೀಡುವಂತೆ ಆಗ್ರಹಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.